ತಿರುವನಂತಪುರಂ, ಜು.4: ಜರ್ಮನಿ ಯುವತಿ ಲಿಸಾ ಪೇಸ್ ಎಂಬ ಮಹಿಳೆಯು ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ನಿಗೂಢವಾಗಿ ಕಾಣೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಅವರನ್ನು ಹುಡುಕಲು ವಿಶೇಷ ಪೊಲೀಸ್ ತಂಡವನ್ನು ರೂಪಿಸಿ ತನಿಖೆ ನಡೆಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಇಳೀದ ಬಳಿಕ ಮಹಿಳೆ ಯಾವುದೋ ಕಾರು ಹತ್ತಿ ಹೊರಟು ಹೋಗಿದ್ದರು. ಟರ್ಮಿನಲ್ನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಮಾರ್ಚ್ ಏಳರಂದು ಲಿಸಾರ ಜೊತೆ ವಿಮಾನ ನಿಲ್ದಾಣದ ಟರ್ಮಿನಲ್ಲಿ ಇದ್ದವರು, ಟರ್ಮಿನಲ್ನಿಂದ ಹೊರಹೋದವರ ವಿವರಳನ್ನು ಪೊಲೀಸರು ಸಂಗ್ರಹಿಸಿದರು.
ತನಿಖೆ ಮುಂದೆ ಸಾಗಬೇಕಾದರೆ ಲಿಸಾರ ತಾಯಿಯಿಂದ ಹೆಚ್ಚಿನ ವಿವರ ಸಿಗಬೇಕಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಜೊತೆಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಅವರೊಡನೆ ಮಾತಾಡಲು ಪೊಲೀಸರು ಶ್ರಮಿಸುತ್ತಿದ್ದಾರೆ. ಲಿಸಿಯ ಜೊತೆಗಿದ್ದ ವಿದೇಶಿ ಯುವಕನ ಪಾಸ್ಪೋರ್ಟ ನಂಬರನ್ನು ತನಿಖಾಧಿಕಾರಿಗಳು ತೆಗೆದುಕೊಂಡಿದ್ದಾರೆ. ಇಂಟರ್ಪೊಲ್ನ ಸಹಾಯದಲ್ಲಿ ವಿಚಾರಣೆ ನಡೆಸುವುದಕ್ಕೂ ಪೊಲೀಸರು ಶ್ರಮಿಸುತ್ತಿದ್ದಾರೆ.












