‘ಭಯೋತ್ಪಾದಕ’ ಎಂದು ಮುಹಮ್ಮದ್ ಅಝಂರನ್ನು ಜೈಲಿಗೆ ತಳ್ಳಿ; ಈಗ ಸಾಕ್ಷ್ಯ ಇಲ್ಲ ಎಂದ ಎನ್‍ಐಎ!

0
1532

ಹೊಸದಿಲ್ಲಿ, ಜು.5: ನನ್ನ ಜೀವ ಆರು ತಿಂಗಳು ಮೊದಲೇ ಕೊನೆಗೊಂಡಿದೆ. ಕನಸಿನಲ್ಲಿಯೂ ಊಹಿಸಲು ಸಾಧ್ಯವಿಲ್ಲದ ಅಪರಾಧಕ್ಕೆ ಆರು ತಿಂಗಳು ಆರು ದಿವಸ ಜೈಲಿನಲ್ಲಿದ್ದು ಜಾಮೀನಿನಲ್ಲಿ ಹೊರ ಬಂದ ಮುಹಮ್ಮದ್ ಅಝಂರ ಪ್ರತಿಕ್ರಿಯೆ ಇದು. ತಮ್ಮನ್ನು ಜೈಲಿಗೆ ಹಾಕಿದ ಎನ್‍ಐಎ ತಮ್ಮ ವಿರುದ್ಧ ಸಾಕ್ಷ್ಯಗಳಿಲ್ಲ ಎಂದು ಕೋರ್ಟಿಗೆ ತಿಳಿಸಿದ್ದರಿಂದ ಮೂವತ್ತೈದು ವರ್ಷದ ಮುಹಮ್ಮದ್ ಅಝಂರನ್ನು ಮತ್ತು ಇತರ ಮೂವರನ್ನು ಎನ್‍ಐಎ ವಿಶೇಷ ಕೋರ್ಟು ಮಂಗಳವಾರ ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ. ಆದರೆ ಅಷ್ಟರಲ್ಲಿ ಇವರು ದೇಶಾದ್ಯಂತ ಕ್ರೂರ ಭಯೋತ್ಪಾದಕರೆಂದು ಚಿತ್ರಿಸಲ್ಪಟ್ಟು ಇವರ ಜೀವನವನ್ನು ನರಕ ಸದೃಶ್ಯಗೊಳಿಸಲಾಗಿದೆ.

ಕಳೆದ ಡಿಸೆಂಬರಿನಲ್ಲಿ 26ಕ್ಕೆ ದಿಲ್ಲಿಯ ಝೀಲಂಪುರ, ಚೌಹಾನ್ ಬಂಕರ್ ಎಂಬಲ್ಲಿಗೆ ದಾಳಿ ಮಾಡಿ ಮುಹಮ್ಮದ್ ಅಝಂ ಸಹಿತ ಐವರನ್ನು ಎನ್‍ಐಎ ಬಂಧಿಸಿತ್ತು. ಉತ್ತರ ಪ್ರದೇಶದ ವಿವಿಧ ಕಡೆಗಳಲ್ಲಿ ದಾಳಿ ಮಾಡಿ ಇತರ ಒಂಭತ್ತು ಮಂದಿಯನ್ನು ಎನ್‍ಐಎ ಬಂಧಿಸಿತ್ತು. ಇವರು ಐಎಸ್ ಸಂಬಂಧ ಹೊಂದಿದ ಹರ್ಕತುಲ್ ಹರ್ಬೆ ಇಸ್ಲಾಂ ಸಂಘಟನೆಗೆ ಸೇರಿದವರೆಂದು ಎನ್‍ಐಎ ಘೋಷಿಸಿತ್ತು.

12 ಪಿಸ್ತೂಲು, ಮಿಸೈಲ್ ಹಾರಿಸುವ ಉಪಗ್ರಹಗಳು ಸಹಿತ ಆಯುಧಗಳನ್ನು 98 ಮೊಬೈಲ್ ಫೋನ್‌ಗಳು 25 ಕಿಲೋ ಸ್ಫೋಟಕ ವಸ್ತುಗಳನ್ನು ಇವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಹೇಳಿತ್ತು. ಐಎಸ್‍ನ ಭಾರತದ ಪಡಿಯಚ್ಚು ಮತ್ತು ಭಾರತ ಸರಕಾರದ ವಿರುದ್ಧ ಜಿಹಾದ್ ನಡೆಸುವ ಗುರಿಯನ್ನು ಹೊಂದಿದ್ದಾರೆ ಎಂದು ಹೇಳಿತ್ತು. ಮುಹಮ್ಮದ್ ಅಝಂ, ಸೈಯದ್ ಮಾಲಿಕ್ ಸಹಿತ ಬಂಧಿಸಿದವರ ವಿರುದ್ಧ ಈ ರೀತಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಆದರೆ ಇವರನ್ನು ಅಪರಾಧಿಗಳನ್ನಾಗಿಸಲು ಎನ್‍ಐಎ ಈಗ ಸರಿಯಾದ ಸಾಕ್ಷ್ಯಗಳಿಲ್ಲ ಎನ್ನುತ್ತಿದೆ.

ನನಗೆ ಸಂಬಧಿಸಿದಂತೆ ಜೈಲಿನಲ್ಲಿದ್ದ ಆರು ತಿಂಗಳು ದೀರ್ಘ ಸಮಯ ಆಗಿದೆ. ನಾನು ಜೀವನದಲ್ಲಿ ಸಾಧಿಸಿದೆಲ್ಲ ನಾಶವಾದ ಅವಸ್ಥೇ. ಆರು ವರ್ಷದ ಮಗಳು ಯಾವಾಗಲೂ ಅಪ್ಪನನ್ನು ಕೇಳುತ್ತಾಳೆ. ಪ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದಾರೆ ಎಂದು ಹೇಳಿ ಅವಳನ್ನು ಮನೆ ಮಂದಿ ಸಮಾಧಾನ ಪಡಿಸುತ್ತಿದ್ದರು. “ತಿಹಾರ್ ಜೈಲಿನಲ್ಲಿ ನೋಡಲು ಬಂದಾಗ ಅದು ತಾನು ಕೆಲಸ ಮಾಡುವ ಫ್ಯಾಕ್ಟರಿ ಎಂದು ಅವಳು ಭಾವಿಸಿದ್ದಳು” ಚೌಹಾನ್ ಬಂಕರ್‍‌ನಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ ಮುಹಮ್ಮದ್ ಅಝಂ ತನ್ನ ಕೆಟ್ಟ ಅನುಭವಗಳನ್ನು ಹೀಗೆ ವಿವರಿಸಿದರು. ಮನೆಯಲ್ಲಿ ತಪಾಸಣೆ ಮಾಡಿ ಪುತ್ರನನ್ನು ಹಿಡಿದುಕೊಂಡು ಹೋಗುವಾಗ ವಿಚಾರಣೆ ನಡೆಸಿ ಬಿಡುತ್ತೇವೆ ಎಂದು ಪೊಲೀಸರು ಹೇಳಿದ್ದರು. ಅದು ಆರು ತಿಂಗಳವರೆಗೆ ಮುಂದೆ ಸಾಗಲಿದೆ ಎಂದು ನಾವು ಯೋಚಿಸಿರಲಿಲ್ಲ ಎಂದು ಅಝಂರ ತಂದೆ ಅಹ್ಮದ್ ಹೇಳಿದರು.