ತೂತ್ತುಕುಡಿಯಲ್ಲಿ ದಲಿತ ದಂಪತಿಗಳ ಕೊಲೆ: ಮರ್ಯಾದಾ ಹತ್ಯೆ ಶಂಕೆ

0
536

ಚೆನ್ನೈ,ಜು.5: ಅಂತರ್ಜಾತಿ ವಿವಾಹವಾದ ಯುವಕ ಮತ್ತು ಆತನ ಗರ್ಭಿಣಿ ಪತ್ನಿಯನ್ನು ದುಷ್ಕರ್ಮಿಗಳ ತಂಡ ಹತ್ಯೆ ಮಾಡಿದೆ. ತೂತ್ತುಕುಡಿಯ ಪೆರಿಯಾರ್ ಎಂಬಲ್ಲಿನ ಸೊಲೈರಾಜ್(24) ಪತ್ನಿ ಜ್ಯೋತಿ(24) ಹತ್ಯೆಯಾದ ನತದೃಷ್ಟರು. ಜ್ಯೋತಿ ಮೂರು ತಿಂಗಳ ಗರ್ಭಿಣಿಯಾಗಿದ್ದರು. ತಂದೆಯ ಸೂಚನೆಯ ಮೇರೆಗೆ ಕೊಲೆಗಡುಕರ ತಂಡ ಇಬ್ಬರನ್ನು ಕೊಲೆ ಮಾಡಿದೆ ಎಂದು ಸೂಚನೆ ಲಭಿಸಿದ್ದು;ಕೊಲೆಗೆ ಸಂಬಂಧಿಸಿ ಜ್ಯೋತಿಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಸೊಲೈರಾಜ್ ಮನೆಯವರಿಗೆ ಇಬ್ಬರ ಮದುವೆಯ ಬಗ್ಗೆ ವಿರೋಧ ಇರಲಿಲ್ಲ. ಸೊಲೈರಾಜ್ ಕುಟುಂಬದ ಮನೆಯ ಸಮೀಪದಲ್ಲಿ ಬಾಡಿಗೆ ಮನೆಯಲ್ಲಿ ಸೊಲೈರಾಜ್, ಜ್ಯೋತಿ ದಂಪತಿಗಳು ವಾಸವಿದ್ದರು. ಕಳೆದ ದಿವಸ ಇಬ್ಬರು ಹೊರಗೆ ಕಾಣದಾದಾಗ ಸೊಲೈರಾಜ್‍ರ ತಾಯಿ ಮುತ್ತುಮೇರಿ ಮನೆಯೊಳಗೆ ಹೋಗಿ ನೋಡಿದಾಗ ಇಬ್ಬರ ಮೃತದೇಹ ಕಂಡು ಬಂದಿತ್ತು.