ಕ್ರಿಕೆಟ್ ಆಡುವುದನ್ನು ನಿಲ್ಲಿಸಿ ಬಾಲಕಿಯನ್ನು ಅತ್ಯಾಚಾರದಿಂದ ರಕ್ಷಿಸಿದ ಬಾಲಕರಿಗೆ ಪೊಲೀಸರಿಂದ ಪಾರಿತೋಷಕ

0
2400

ಜೈಪುರ, ಜು. 5: ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರವಾಗದಂತೆ ತಡೆದ ಜೈಪುರದ ಬಾಲಕರು ಮಾದರಿಯಾಗಿದ್ದಾರೆ. ಬಾಲಕರು ಕ್ರಿಕೆಟ್ ಆಡುತ್ತಿದ್ದಾಗ ದೂರದ ಬಂಡೆಯ ಬದಿಯಿಂದ ಬಾಲಕಿಯ ಬೊಬ್ಬೆ ಕೇಳಿಸಿತು. ಕ್ರಿಕೆಟ್ ಆಡುವುದನ್ನು ಬಿಟ್ಟು ಅಲ್ಲಿಗೆ ತೆರಳಿದಾಗ ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರಕ್ಕೆ ಶ್ರಮಿಸುವುದು ಕಂಡು ಬಂದಿದೆ. ನಂತರ ಇವರು ಆ ವ್ಯಕ್ತಿಯನ್ನು ಬಲಪ್ರಯೋಗಿಸಿ ಮಣಿಸಿ ಪೊಲೀಸರಿಗೆ ಒಪ್ಪಿಸಿದರು.

ದಿಟ್ಟತನದಿಂದ ಬಾಲಕಿಯ ರಕ್ಷಣೆ ಮಾಡಿದ ಬದಲ್ (14), ಮನೀಶ್ (15), ಅಮಿತ್ (18), ರೋಹಿತ್ (18)ರನ್ನು ರಾಜಸ್ತಾನ ಎಡಿಜಿಪಿ ಬಿ.ಕೆ. ಸೋನಿ ಫಲಕ ಮತ್ತು ಸರ್ಟಿಫಿಕೆಟ್ ಹಾಗೂ ನಗದು ನೀಡಿ ಗೌರವಿಸಿದ್ದಾರೆ. ಮಕ್ಕಳ ಕೆಲಸ ಇತರರಿಗೂ ಮಾದರಿಯೋಗ್ಯವಾಗಿದೆ. ಜವಾಬ್ದಾರಿಯುತ ಪ್ರಜೆಗಳು ಮಾಡಬೇಕಾದ ಕೆಲಸವನ್ನು ಇವರು ಮಾಡಿದರು ಎಂದು ಎಡಿಜಿಪಿ ಪ್ರಶಂಸಿಸಿದರು. ಇದೇವೇಳೆ ಈ ಹಿಂದೆ ಇಲ್ಲಿ ನಡೆದ ಅತ್ಯಾಚಾರದಿಂದ ನಡೆದ ಘಟನೆಯ ಹಿನ್ನೆಲೆಯಲ್ಲಿ ಜೈಪುರದ ಹದಿಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಂಟರ್‍ನೆಟ್ ಸೌಕರ್ಯವನ್ನು ಕಡಿದು ಹಾಕಲಾಗಿತ್ತು.