ಕಳೆದ ಎರಡು ದಶಕಗಳಲ್ಲಿ ಮಕ್ಕಳ ಮೇಲಿನ ಅತ್ಯಾಚಾರಗಳ ಪ್ರಮಾಣವು ಐದು ಪಟ್ಟು ಹೆಚ್ಚಾಗಿದೆ ಎಂದು ಮಕ್ಕಳ ಹಕ್ಕುಗಳ ಮೈತ್ರಿಕೂಟವು ಬುಧವಾರ ಬಿಡುಗಡೆ ವರದಿಯನ್ನು ಮಾಡಿದೆ.
‘ಭಾರತದಲ್ಲಿ ಮಕ್ಕಳ ಹಕ್ಕುಗಳು- ಒಂದು ಅಪೂರ್ಣ ಅಜೆಂಡಾ’ ಎಂಬ ವರದಿಯು ಭಾರತವು ಮಕ್ಕಳ ಮರಣದರ, ಮಕ್ಕಳ ಲಿಂಗ ಅನುಪಾತ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಮುಂಚೂಣಿಯತ್ತ ಸಾಗುತ್ತಿದೆ ಎಂದಿದ್ದು, ನ್ಯಾಷನಲ್ ಬ್ಯೂರೋ ಆಫ್ ಕ್ರೈಮ್ ದಾಖಲೆಗಳನ್ನು ಉಲ್ಲೇಖಿಸಿ, 1994 ಮತ್ತು 2016 ರ ನಡುವೆ ಮಕ್ಕಳ ಮೇಲೆ ನಡೆದ ಅತ್ಯಾಚಾರಗಳ ಸಂಪೂರ್ಣ ಸಂಖ್ಯೆ ಸರಿಸುಮಾರು ಐದು ಪಟ್ಟು ಹೆಚ್ಚಾಗಿದೆ ಎಂದು ಅದು ಹೇಳಿದೆ. ಮಕ್ಕಳ ಮೇಲಿನ ಅಪರಾಧಗಳ ಪ್ರಮಾಣ ಹೆಚ್ಚಾಗಿದೆ ಎಂದು ಒಪ್ಪಿಕೊಂಡ ವರದಿಯು “ ಹಿಂಸಾಚಾರ ಘಟನೆಗಳು, ವಿಶೇಷವಾಗಿ ಕಿರಿಯ ಮಕ್ಕಳ ಮೇಲೆ ನಡೆಯುತ್ತಿರುವ ಹಿಂಸಾಚಾರಗಳ ಪ್ರಮಾಣವು ಹೆಚ್ಚಾಗಿದೆ ಎಂಬುದನ್ನು ತಜ್ಞರು ಮತ್ತು ಸಮುದಾಯಗಳು ಒಪ್ಪಿಕೊಂಡಿವೆ”ಎಂದಿದೆ.
ಮಕ್ಕಳ ಲಿಂಗ ಅನುಪಾತವು 927 (ಜನಗಣತಿ 2001) ರಿಂದ 919 (ಜನಗಣತಿ 2011) ಕ್ಕೆ ಇಳಿದಿದೆ ಮತ್ತು ಭಾರತದ ಅನೇಕ ರಾಜ್ಯಗಳಲ್ಲಿ ಇಳಿಮುಖವಾಗುತ್ತಿದೆ ಎಂದು ವರದಿಯು ತಿಳಿಸಿದೆ. “ಲಿಂಗ ಅನುಪಾತ ಕಡಿಮೆಯಾಗುವುದು ಮತ್ತು ಹುಡುಗಿಯರ ಮೇಲಿಮ ಅತ್ಯಾಚಾರದ ಘಟನೆಗಳ ಹೆಚ್ಚಳವು ಹುಡುಗಿಯರ ಮೇಲೆ ಹೆಚ್ಚುತ್ತಿರುವ ದಬ್ಬಾಳಿಕೆಗಳನ್ನು ಪ್ರದರ್ಶಿಸುವ ಎರಡು ಸೂಚಕಗಳಾಗಿವೆ” ಎಂದು ವರದಿಯು ವಿವರಿಸಿದೆ . ಎಲ್ಲಾ ರಾಜ್ಯಗಳಲ್ಲಿ, ಸುರಕ್ಷತೆಯ ಹಿತದೃಷ್ಟಿಯ ಕಾರಣಗಳಿಂದಾಗಿ ಹುಡುಗಿಯರ ಚಲನವಲನಗಳ ಮೇಲೆ ಹೆತ್ತವರು ತೀವ್ರ ನಿಗಾ ಇರಿಸುತ್ತಾರಾದರೆ, ಹುಡುಗರ ಮೇಲೆ ಇಂತಹ ಯಾವುದೇ ಪರಿಣಾಮಗಳು ಬೀರುವುದಿಲ್ಲ ಎಂದು ವರದಿ ಮಾಡಿದೆ.
ಭಾರತವು ಇತಿಹಾಸದಲ್ಲಿ ಮೊದಲ ಬಾರಿಗೆ ಐದು ವರ್ಷದೊಳಗಿನ ಮಕ್ಕಳ ಮರಣದರವನ್ನು ಕಡಿಮೆ ಗೊಳಿಸುವಲ್ಲಿ ಜಾಗತಿಕ ಸರಾಸರಿ ತಲುಪಿದೆ (1000/ 39),ಶಿಶು ಮರಣ ಪ್ರಮಾಣವು 1992-93ರಲ್ಲಿ 79 ರಿಂದ (ಎನ್ಎಫ್ಹೆಚ್ಎಸ್ -1) – 2015-16ರಲ್ಲಿ 41 ಕ್ಕೆ ಇಳಿಕೆಯಾಗಿದೆ (ಎನ್ಎಫ್ಹೆಚ್ಎಸ್ -4). ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕ ದಾಖಲಾತಿಯಲ್ಲೂ 7-14 ವರ್ಷ ವಯಸ್ಸಿನ ಮಕ್ಕಳಲ್ಲಿ ಸಾಕ್ಷರತೆಯ ಪ್ರಮಾಣವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಮತ್ತು ಅದು ವಿಸ್ತರಿಸುತ್ತಿದೆ. 2011 ರ ವೇಳೆಗೆ ಶೇಕಡಾ 64 ರಿಂದ 88 ರವರೆಗೆ ದಶಾಂಶ ಸುಧಾರಣೆಯಾಗಿದೆಯಾದರೆ ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆಗಳನ್ನು ತಡೆಗಟ್ಟುವಲ್ಲಿ ಕ್ರಮ ಕೈಗೊಳ್ಳಲು ಮುಂದಾಗದೇ ಇರುವುದು ವಿಪರ್ಯಾಸಕರ.
ಕೃಪೆ: ಇಂಡಿಯನ್ ಎಕ್ಸ್ಪ್ರೆಸ್. ಕಾಮ್












