ಸನ್ಮಾರ್ಗ ವಾರ್ತೆ
ಇತಿಹಾಸದಲ್ಲಿ ಮೊದಲ ಬಾರಿಗೆ ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಬೆಲೆ ಐತಿಹಾಸಿಕ ಕುಸಿತವನ್ನು ಕಂಡಿದೆ. ಒಂದು ಡಾಲರ್ ಗೆ 95 ರೂಪಾಯಿ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಈ ಕುಸಿತವನ್ನು ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಮಾರ್ಚ್ 30ರಂದು ಒಂದು ಹಂತದಲ್ಲಿ ರೂಪಾಯಿಯ ಬೆಲೆ ಡಾಲರಿನ ಎದುರು 95 ರೂಪಾಯಿ 20 ಪೈಸೆಯಷ್ಟು ಕುಸಿತವನ್ನು ದಾಖಲಿಸಿದೆ.
ರೂಪಾಯಿ ಕುಸಿತವನ್ನು ತಡೆಯುವುದಕ್ಕಾಗಿ ಕಳೆದ ವಾರ ಆರ್ಬಿಐ ಹೊಸ ಮಾರ್ಗ ನಿರ್ದೇಶನಗಳನ್ನು ಬಿಡುಗಡೆಗೊಳಿಸಿತ್ತು. ಆದರೂ ರೂಪಾಯಿಯ ಐತಿಹಾಸಿಕ ಕುಸಿತವನ್ನು ತಡೆಯಲು ಸಾಧ್ಯವಾಗಿಲ್ಲ.
ಇರಾನ್ ಮತ್ತು ಅಮೆರಿಕಾದ ನಡುವೆ ಘರ್ಷಣೆ ನಡೆಯುತ್ತಿರುವುದು ಈ ರುಪಾಯಿ ಕುಸಿತಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿರುವ ಹೂಡಿಕೆಯನ್ನು ಭಾರಿ ಪ್ರಮಾಣದಲ್ಲಿ ಹಿಂಪಡೆಯುತ್ತಿರುವುದು ಕೂಡ ಈ ಬೆಲೆಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಕಳೆದ ಏಳು ವರ್ಷಗಳಲ್ಲಿಯೇ ಡಾಲರಿನ್ ಎದುರು ರೂಪಾಯಿಯ ಅತೀಹೀನ ಕುಸಿತ ಎಂದು ಇದನ್ನು ವರ್ಣಿಸಲಾಗಿದೆ. ಕಚ್ಚಾತೈಲದ ಬೆಲೆ ಇಳಿಯದಿದ್ದರೆ ಮತ್ತು ವಿದೇಶಿಯರು ತಮ್ಮ ಹೂಡಿಕೆಯನ್ನು ಹಿಂಪಡೆಯುವುದನ್ನು ನಿಲ್ಲಿಸದಿದ್ದರೆ ಡಾಲರಿ ನ ಎದುರು ರೂಪಾಯಿಯ ಬೆಲೆ ಇನ್ನಷ್ಟು ಕುಸಿತವಾಗಬಹುದು ಎಂಬ ಆತಂಕ ವ್ಯಕ್ತಪಡಿಸಲಾಗಿದೆ.












