ಅಮೆರಿಕಕ್ಕೆ ಬಾಗಿಲು ಮುಚ್ಚಿದ ಸ್ಪೈನ್

0
537

ಸನ್ಮಾರ್ಗ ವಾರ್ತೆ

ಇರಾನಿನ ವಿರುದ್ಧ ಸೇನಾ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಅಮೆರಿಕಾದ ಯುದ್ಧ ವಿಮಾನಗಳಿಗೆ ತನ್ನ ವಾಯುಮಾರ್ಗವನ್ನು ಸ್ಪೇನ್ ಮುಚ್ಚಿದೆ. ಈ ಮೊದಲು ಜಂಟಿ ಸೇನಾ ನಿಲ್ದಾಣಗಳನ್ನು ಉಪಯೋಗಿಸುವುದರಿಂದ ಅಮೆರಿಕಕ್ಕೆ ಸ್ಪೆನ್ ನಿಷೇಧವನ್ನು ಹೇರಿತ್ತು. ಇದೀಗ ತನ್ನ ವಾಯು ಮಾರ್ಗವನ್ನು ಬಳಸುವುದಕ್ಕೂ ಸ್ಪೇನ್ ನಿಷೇಧವನ್ನು ಹೇರಿದೆ. ಇರಾನಿನ ರಕ್ಷಣಾ ಸಚಿವ ಮಾರ್ಗರೇಟ್ ಅವರು ಈ ವಿಷಯವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.

ಅಮೆರಿಕಾದ ನೇತೃತ್ವದಲ್ಲಿರುವ ನ್ಯಾಟೋ ಒಕ್ಕೂಟದ ಪ್ರಮುಖ ಸದಸ್ಯ ರಾಷ್ಟ್ರವಾಗಿರುವ ಸ್ಪೈನ್ ನ ಈ ನಿರ್ಧಾರವು ಅಮೆರಿಕಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ. ಮಧ್ಯ ಏಷ್ಯಾದ ತನ್ನ ಗುರಿಗಳ ಕಡೆಗೆ ಸಾಗುವ ಅಮೆರಿಕಾದ ವಿಮಾನಗಳು ಇನ್ನು ಸ್ಟ್ರೈನ್ ಗೆ ಸುತ್ತು ಹಾಕಿ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ತುರ್ತು ಸಂದರ್ಭದಲ್ಲಿ ಹೀಗೆ ಸಾಗುವುದಕ್ಕೆ ತಡೆ ವಿಧಿಸಲಾಗಿಲ್ಲ ಎಂದು ವರದಿಗಳು ಹೇಳುತ್ತಿವೆ.

ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿ, ಏಕ ಪಕ್ಷೀಯವಾಗಿ ಘೋಷಿಸಲಾದ ಈ ಯುದ್ಧದಲ್ಲಿ ನಾವು ಭಾಗಿಯಾಗುವುದಿಲ್ಲ ಎಂದು ಸ್ಟೈನ್ ಹೇಳಿದೆ. ಸ್ಟೈನ್ ನ ಈ ನಿರ್ಧಾರವು ಅಮೆರಿಕದ ಜೊತೆಗಿನ ಸಂಬಂಧದಲ್ಲಿ ಬಿರುಕನ್ನು ಉಂಟುಮಾಡಬಹುದೋ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಂತಾರಾಷ್ಟ್ರೀಯ ನಿಯಮಗಳನ್ನು ಎತ್ತಿ ಹಿಡಿಯುವುದು ನಮ್ಮ ಉದ್ದೇಶ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಇರಾನಿನ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿರುವ ಆಕ್ರಮಣವು ವಿವೇಕರಹಿತವಾದದ್ದು ಮತ್ತು ನಿಯಮ ವಿರುದ್ಧವಾದದ್ದು ಎಂದು ಪ್ರಧಾನಮಂತ್ರಿ ಪೆಟ್ರೋ ಸ್ಯಾಂಚಸ್ ಈ ಮೊದಲೇ ಹೇಳಿದ್ದರು. ಅಮೆರಿಕಾದ ಆಕ್ರಮಣ ನೀತಿಯನ್ನು ಬಹಿರಂಗವಾಗಿ ವಿರೋಧಿಸಿದ ಯುರೋಪಿನ ಪ್ರಮುಖ ನಾಯಕರಲ್ಲಿ ಇವರು ಒಬ್ಬರು.