ಅವಸರದಲ್ಲಿ ರಾಜೀನಾಮೆ ಸ್ವೀಕರಿಸಲ್ಲ, ಒಬ್ಬೊಬ್ಬರನ್ನೂ ಕರೆದು ಪ್ರಶ್ನಿಸುವೆ ಎಂದ ಸ್ಪೀಕರ್: ತಿರುವು ಪಡಕೊಳ್ಳುವುದೇ ರಾಜಕೀಯ?

0
657

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯನ್ನು ತುರ್ತಾಗಿ ಅಂಗೀಕರಿಸುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದು, ಇದು ಸರಕಾರದ ಸಮಯವನ್ನು ಇನ್ನಷ್ಟು ವಿಳಂಬಗೊಳಿಸುವ ಸಾಧ್ಯತೆಯನ್ನು ತೆರೆದಿಟ್ಟಿದೆ ಮತ್ತು ಈಗಿನ ರಾಜಕೀಯ ಬೆಳವಣಿಗೆಗೆ ತಿರುವು ಕೊಡುವ ಸಾಧ್ಯತೆಯೂ ಇದೆ.

ಶನಿವಾರ ಮಧ್ಯಾಹ್ನದವರೆಗೂ ನಾನು ಕಚೇರಿಯಲ್ಲಿ ಇದ್ದೆ. ನಾನಿಲ್ಲದ ಸಂದರ್ಭದಲ್ಲಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ತುರ್ತಾಗಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಎರಡು ದಿನಗಳ ನಂತರ ನಾನು ಇವತ್ತು ಕಚೇರಿಗೆ ಬಂದಿದ್ದೇನೆ. ಇನ್ನು ಪರಿಶೀಲನೆ ನಡೆಸುತ್ತೇನೆ ಎಂದರು.

ಜನರ ಭಾವನೆಗಳಿಗೆ ನಾನು ಸ್ಪಂದಿಸಬೇಕಿದ್ದು, ನಿಯಮಗಳನುಸಾರ ತೀರ್ಮಾನ ಮಾಡುತ್ತೇನೆ. ಆದ್ದರಿಂದ,ತುರ್ತಾಗಿ ರಾಜೀನಾಮೇ ಅಂಗೀಕಾರ ಸಾಧ್ಯವಿಲ್ಲ. ಪ್ರತಿಯೊಬ್ಬರನ್ನು ಕರೆಸಿ ಮಾತುಕತೆ ನಡೆಸುತ್ತೇನೆ ಎಂದು ಸ್ಪೀಕರ್ ಸ್ಪಷ್ಟನೆ ಕೊಟ್ಟಿದ್ದಾರೆ.

ಸದ್ಯ ರಾಜೀನಾಮೆ ನೀಡಿರುವ ಶಾಸಕರು ಮುಂಬೈನಲ್ಲಿನದ್ದು, ಅವರು ಸ್ಪೀಕರ್ ಕರೆದರೆ ಬರುತ್ತಾರಾ, ಅನ್ನುವ ಶಂಕೆಯೂ ವ್ಯಕ್ತವಾಗಿದೆ.