ಇರಾನ್ ಬಿಕ್ಕಟ್ಟು: ಸಮುದ್ರ ಕಾವಲಿಗಾಗಿ ಅಮೆರಿಕದ ಸೇನೆ ಮಾಡುವ ಖರ್ಚು,ವೆಚ್ಚದ ಹೊರೆ ಮೈತ್ರಿ ರಾಷ್ಟ್ರಗಳ ತಲೆಗೆ

0
857

ವಾಷಿಂಗ್ಟನ್, ಜು. 11: ಗಲ್ಫ್ ಕೊಲ್ಲಿಯ ಸುರಕ್ಷೆಗಾಗಿ ಬೇರೆ ಬೇರೆ ದೇಶಗಳ ಹೊಸ ಸೈನಿಕ ಮೈತ್ರಿಯನ್ನು ರೂಪಿಸಲು ಅಮೆರಿಕ ಮುಂದೆ ಬಂದಿದೆ. ಇರಾನ್, ಯಮನ್‍ಗಳಿಗೆ ಸೇರಿದ ಸಮುದ್ರದಲ್ಲಿ ತೈಲ ಹಡಗುಗಳಿಗೆ ದಾಳಿ ನಡೆದ ಹಿನ್ನೆಲೆಯಲ್ಲಿ ಅಮೆರಿಕ ಇಂತಹ ಕ್ರಮಕ್ಕೆ ಮುಂದಾಗಿದೆ ಎಂದು ಅಮೆರಿಕದ ಜೊಯಿಂಟ್ ಚೀಫ್ಸ್ ಆಫ್ ಸ್ಟಾಫ್ ಚೇರ್‍ಮೆನ್ ಜನರಲ್ ಜೋಸೆಫ್ ಡನ್‍ಫೋಡ್ ಹೇಳಿದರು.

ಕಳೆದ ದಿವಸ ಅಂತಿಮ ರೂಪ ನೀಡಲಾಗಿದ್ದು ಮೈತ್ರಿ ವ್ಯವಸ್ಥೆಯಲ್ಲಿ ಸೈನಿಕ ನೇತೃತ್ವವನ್ನು ಅಮೆರಿಕವೇ ವಹಿಸಿಕೊಂಡಿದೆ. ಇರಾನ್‍ನ ಹುರ್ಮುಸ್, ಯಮನ್‍ನ ತೀರಗಳನ್ನೊಳಗೊಂಡ ಬಾಬುಲ್ ಮಂದೀಪ್ ಮಾರ್ಗದಲ್ಲಿ ಅಮೆರಿಕ ನೇತೃತ್ವದಲ್ಲಿ ಅಮೆರಿಕನ್ ಹಡಗುಗಳು ನಿರೀಕ್ಷಣೆ ನಡೆಸಲಿವೆ. ಸಖ್ಯ ರಾಷ್ಟ್ರಗಳು ಸಹಾಯ ಮಾಡಲಿವೆ. ತೈಲ ಮತ್ತು ಇತರ ಸರಕುಗಳಿಗೆ ಕಾವಲು ನೀಡುವ ಸಂಪೂರ್ಣ ಖರ್ಚನ್ನು ಸಖ್ಯರಾಷ್ಟ್ರಗಳೇ ವಹಿಸಿಕೊಳ್ಳಬೇಕೆಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.