ಇಮ್ತಿಯಾಝ್ ಜಲೀಲ್ ಎಐಎಂಐಎಂ ಮಹಾರಾಷ್ಟ್ರ ಅಧ್ಯಕ್ಷ

0
689

ಹೈದರಾಬಾದ್, ಜು. 11: ಇಮ್ತಿಯಾಝ್ ಜಲೀಲ್ ಆಲ್ ಇಂಡಿಯ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಔರಂಗಾಬಾದ್‍ನಿಂದ ಎಐಎಂಐಎಂ ಸಂಸದರಾಗಿಯೂ ಚುನಾಯಿತರಾಗಿದ್ದಾರೆ. ಈ ವರ್ಷ ಕೊನೆಯಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆಗಿಂತ ಮೊದಲು ಜಲೀಲ್ ನೇಮಕವಾಗಿದೆ.

ಮಹಾರಾಷ್ಟ್ರದಲ್ಲಿ ಮೂವರು ಪ್ರಾದೇಶಿಕ ಅಧ್ಯಕ್ಷರನ್ನು ಎಐಎಂಐಎಂ ನೇಮಕಗೊಳಿಸಿದೆ. ಅಕ್ವಿಲ್ ಮುಜಾಹಿದ್ (ಪಶ್ಚಿಮ ಮಹಾರಾಷ್ಟ್ರ) ನಸೀಂ ಶೇಕ್ (ವಿದರ್ಭ), ಫೀರೋಝ್ ಲಾಲ(ಮರಾಠವಾಡ) ಪ್ರಾದೇಶಿಕ ಅಧ್ಯಕ್ಷರು ನೇಮಕವಾಗಿದ್ದು ಪಾರ್ಟಿಯ ಮುಂಬೈ ಅಧ್ಯಕ್ಷನಾಗಿ ಶಕೇರ್ ಪಾಟ್ನಿ ಮುಂದುವರಿಯಲಿದ್ದಾರೆ ಎಂದು ಎಐಎಂಐಎಂ ಪ್ರಧಾನ ಕಾರ್ಯದರ್ಶಿ ಜೈದ್ ಅಹ್ಮದ್ ಪಾಶ ಖಾದ್ರಿ ಬುಧವಾರ ಹೊರಡಿಸಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.