ಗೋವಾ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆಗೆ ಅಸಮಾಧಾನ ವ್ಯಕ್ತಪಡಿಸಿದ -ಮನೋಹರ್ ಪಾರಿಕ್ಕರ್ ಪುತ್ರ

0
639

ಪಣಜಿ, ಜು. 11: ಗೋವಾದಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾದ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಪುತ್ರ ಉತ್ಪಲ್ ಪಾರಿಕ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೋವಾ ಬಿಜೆಪಿ ಪರೀಕ್ಕರ್ ದಾರಿಯನ್ನು ಬಿಟ್ಟು ಹೊರಬಂದಿದೆ ಎಂದು ಆರೋಪಿಸಿದ್ದು ತನ್ನ ತಂದೆಯ ಸಾವಿನ ಬಳಿಕ ರಾಜ್ಯದ ಬಿಜೆಪಿಯಲ್ಲಿ ಭಾರೀ ವ್ಯತ್ಯಾಸವಾಗಿದೆ ಎಂದು ಹೇಳಿದ್ದಾರೆ.

ವಿಶ್ವಾಸ, ಪ್ರತಿಜ್ಞಾ ಬದ್ಧತೆ ಪರೀಕ್ಕರ್ ರ ಕಾಲದಲ್ಲಿ ಬಿಜೆಪಿಯ ಆಶಯವಾಗಿತ್ತು. ಆದರೆ ಈಗ ಅದರಲ್ಲಿ ಬದಲಾವಣೆ ಆಗಿದೆ. ಇದು ಈ ವಿಷಯವನ್ನು ಹೇಳಲು ಸೂಕ್ತ ಸಮಯವಾಗಿದೆ. ಮನೋಹರ್ ಪಾರಿಕ್ಕರ್ ನಿಧನದ ಬಳಿಕ ನಡೆದ ಉಪಚುನಾವಣೆಯಲ್ಲಿ ಉತ್ಪಲ್ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿ ಅವರಿಗೆ ಟಿಕೆಟು ನೀಡಿಲ್ಲ. ಕಳೆದ ದಿವಸ ರಾತ್ರೆ ಹತ್ತು ಗಂಟೆಗೆ ಹತ್ತು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿರುವುದಾಗಿ ಘೋಷಿಸಿದ್ದರು.