ಅಲ್ಜೈರ್, ಜು. 12: ಸರಕಾರ ಬದಲಾವಣೆಯ ಬಳಿಕ ಹೊಸ ಅಲ್ಜೀರಿಯನ್ ಪಾರ್ಲಿಮೆಂಟ್ ಸ್ಪೀಕರ್ ಆಗಿ ಇಸ್ಲಾಮಿಸ್ಟ್ ನಾಯಕ ಆಯ್ಕೆಯಾಗಿದ್ದಾರೆ. ಪ್ರತಿಪಕ್ಷದ ಮುಖ್ಯಸ್ಥ ಸುಲೈಮಾನ್ ಶೆನಿ ಸ್ಪೀಕರ್ ಆಗಿ ಆಯ್ಕೆಯಾಗಿದ್ದು ಅಲ್ಜೀರಿಯದ ಮೂರು ಇಸ್ಲಾಮಿಕ್ ಪಾರ್ಟಿ ಗಳ ಪಾರ್ಲಿಮೆಂಟ್ ನಾಯಕರು ಕೂಡಾ ಆವರಾಗಿದ್ದಾರೆ.
ಸುಲೈಮಾನ್ ಶೆನಿ ಅವರು ಅನ್ನಹ್ದ, ಅದಾಲ ಸಂಘಟನೆಗಳ ಸಖ್ಯದ ನ್ಯಾಶನಲ್ ಕನ್ಸಟ್ರಕ್ಷನ್ ಪಾರ್ಟಿ ಮೂವ್ಮೆಂಟ್ನ ಮುಖ್ಯ ನೇತಾರ ಆಗಿದ್ದಾರೆ. ಅಲ್ಜೀರಿಯದ ಇತಿಹಾಸದಲ್ಲಿ ಮೊದಲ ಬಾರಿ ಪ್ರತಿಪಕ್ಷದ ವ್ಯಕ್ತಿಯೊಬ್ಬರು ಸ್ಪೀಕರ್ ಆಗಿ ಚುನಾಯಿತರಾಗಿದ್ದಾರೆ. ಈ ಹಿಂದೆ ನ್ಯಾಶನಲ್ ಲಿಬರೇಶನ್ ಫ್ರಂಟ್ನ ಮುವಾದ ಬುಕರರ್ ಬಿ ಸ್ಪೀಕರಾಗಿದ್ದರು. ಅವರನ್ನು ಮೀರಿ ಶೆನಿ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಭಾರೀ ಪ್ರತಿಭಟನೆಯ ನಂತರ ಮುವಾದ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 20 ವರ್ಷಗಳ ಕಾಲ ಸರ್ವಾಧಿಕಾರಿ ಅಬ್ದುಲ್ಲ ಬುಟೊಪ್ಲಿಕ್ಕರ ಸರಕಾರ ಆಲ್ಜೀರಿಯ ಕಳೆದ ಎಪ್ರಿಲ್ ಎರಡರಂದು ಜನರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪತನವಾಗಿತ್ತು. ಬುಟೊಪ್ಲಿಕ ಎಲ್ಲ ಅಧಿಕಾರವನ್ನು ಬಿಟ್ಟು ಕೊಡುವವರೆಗೂ ಜನರು ಪ್ರತಿಭಟನೆ ನಡೆಸಿದ್ದರು.












