ಗುರುವಾರ ಬೆಳಗ್ಗೆ ಹನ್ನೊಂದು ಗಂಟೆಗೆ ವಿಶ್ವಾಸ ಮತ- ಸ್ಪೀಕರ್; ಯಡಿಯೂರಪ್ಪ ಸ್ವಾಗತ

0
758

ಬೆಂಗಳೂರು, ಜು. 15: ಗುರುವಾರ ಹನ್ನೊಂದು ಗಂಟೆಗೆ ವಿಶ್ವಾಸ ಮತ ಯಾಚನೆಗೆ ಸ್ಪೀಕರ್ ಸಮಯ ಗೊತ್ತು ಪಡಿಸಿದ್ದು, ವಿಧಾನಸಭಾ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಪುನಃ ಬಿಜೆಪಿ ಶಾಸಕರು ರೆಸಾರ್ಟ್ಗೆ ಹೊರಟು ನಿಂತಿದ್ದಾರೆ. ಇದೇವೇಳೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಕೂಡ ರೆಸಾರ್ಟ್‍ಗೆ ತೆರಲಿದ್ದಾರೆ.

ಅತೃಪ್ತರು ರಾಜೀನಾಮೆ ಪಟ್ಟನ್ನು ಮುಂದುವರಿಸಿದ್ದು ನಾಳೆ ಸುಪ್ರೀಂಕೋರ್ಟು ಅವರ ರಾಜೀನಾಮೆಯ ಕುರಿತು ತೀರ್ಪು ನೀಡಲಿದೆ. ಈ ಹಿಂದೆ ಕುಮಾರ ಸ್ವಾಮಿ ಬುಧವಾರ ವಿಶ್ವಾಸ ಮತ ಯಾಚಿಸುವೆ ಎಂದು ತಿಳಿಸಿದ್ದರೂ ಸ್ಪೀಕರ್ ಅಂದು ಪ್ರತಿಪಕ್ಷ ನಾಯಕ ಯಡಿಯೂರಪ್ಪರ ಗೈರಿನಿಂದಾಗಿ ತೀರ್ಮಾನ ತಳೆದಿರಲಿಲ್ಲ. ಇಂದು ಶುಕ್ರವಾರ ವಿಶ್ವಾಸ ಮತ ಯಾಚಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದರೂ ಸ್ಪೀಕರ್ ಗುರುವಾರ ವಿಶ್ವಾಸ ಮತ ಯಾಚಿಸುವಂತೆ ಮುಖ್ಯಮಂತ್ರಿಗೆ ತಿಳಿಸಿದ್ದಾರೆ. ಆವರೆಗೂ ಕಲಾಪದಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರತಿಪಕ್ಷ ಹೇಳಿದ್ದರಿಂದ ವಿಧಾನಸಭೆಯನ್ನು ಗುರುವಾರಕ್ಕೆ ಸ್ಪೀಕರ್ ಮುಂದೂಡಿದರು. ಸ್ಪೀಕರ್ ಅವರ ನಿಲುವನ್ನು ಯಡಿಯೂರಪ್ಪ ಸ್ವಾಗತಿಸಿದ್ದಾರೆ.