ಇರಾನ್ ವಿದೇಶಾಂಗ ಸಚಿವರ ಟ್ವೀಟ್ ಶೇರ್ ಮಾಡಿದ ಟ್ರಂಪ್

0
293

ಸನ್ಮಾರ್ಗ ವಾರ್ತೆ

ಮಧ್ಯಪ್ರಾಚ್ಯ ಯುದ್ಧಕ್ಕೆ ತೆರೆ ಎಳೆಯುವ ಉದ್ದೇಶದೊಂದಿಗೆ ನಡೆಯುತ್ತಿರುವ ಒಪ್ಪಂದ ಅಂತಿಮ ಹಂತಕ್ಕೆ ತಲುಪಿದ್ದು ಹಿಂದೆಂದಿಗಿಂತಲೂ ಮಾತುಕತೆ ಅತಿ ಸಮೀಪದಲ್ಲಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಆರಾಗ್ಚಿ ಹೇಳಿದ್ದಾರೆ. ಒಪ್ಪಂದದ ಮಧ್ಯವರ್ತಿಯಾಗಿರುವ ಪಾಕಿಸ್ತಾನ ಕೂಡ ಆಶಾವಾದ ವ್ಯಕ್ತಪಡಿಸಿದೆ.

ಆದರೆ ಸಾರ್ವಜನಿಕವಾಗಿ ಉಭಯ ದೇಶಗಳ ಮಾತುಕತೆ, ನಿಲುವುಗಳಲ್ಲಿ ಇನ್ನೂ ಸಾಕಷ್ಟು ಭಿನ್ನಾಭಿಪ್ರಾಯಗಳು ಕಾಣಿಸುತ್ತಿವೆ ಇರಾನ್ ಸರ್ಕಾರಿ ಮಾಧ್ಯಮಗಳು ಪ್ರಕಟಿಸಿರುವ ಒಪ್ಪಂದದ ಕರಡು ವಿವರಗಳು ಅಮೆರಿಕ ಹಲವು ವರ್ಷಗಳಿಂದ ಪ್ರತಿಪಾದಿಸುತ್ತಿರುವ ಪ್ರಮುಖ ಷರತ್ತುಗಳಿಗೆ ಸಂಪೂರ್ಣ ವಿರುದ್ಧವಾಗಿದೆ.

ಇರಾನ್ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಕಿಡಿಕಾರಿದ್ದಾರೆ.

ಒಪ್ಪಂದ ಅಂತಿಮಗೊಳ್ಳುವವರೆಗೂ ಅದರ ವಿಷಯದ ಬಗ್ಗೆ ಮಾಧ್ಯಮಗಳು ಊಹಾಪೋಹಗಳಿಗೆ ಅವಕಾಶ ನೀಡಬಾರದು ಎಂದು ಅಬ್ಬಾಸ್ ಮನವಿ ಮಾಡಿದ್ದಾರೆ. ಇದಾದ ಬಳಿಕ ಡೊನಾಲ್ಡ್ ಟ್ರಂಪ್ ಅಬ್ಬಾಸ್ ಅವರ ಸಂದೇಶದ ಸ್ಕ್ರೀನ್ ಶಾಟನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.