ವಾಷಿಂಗ್ಟನ್, ಜು. 18: ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕದಲ್ಲಿ ನಡೆಯುವ ಶೃಂಗಕ್ಕೆ ನೀಡಲಾದ ಆಹ್ವಾನವನ್ನು ಕೆನಡದ ಪ್ರಮುಖ ಮುಸ್ಲಿಂ ಸಂಘಟನೆ ತಿರಸ್ಕರಿಸಿದೆ. ನ್ಯಾಶನಲ್ ಕೌನ್ಸಿಲ್ ಆಫ್ ಕೆನಡಿಯನ್ ಮುಸ್ಲಿಮೀಸ್ (ಎನ್ಸಿಸಿಎಂ) ಸಮ್ಮೇಳನದಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ತಿಳಿಸಿದೆ.
ಮುಸ್ಲಿಂ ಬಹುಸಂಖ್ಯಾತ ದೇಶಗಳವರಿಗೆ ಅಮೆರಿಕ ಅಧ್ಯಕ್ಷರು ಹೇರಿದ ಪ್ರಯಾಣ ನಿಷೇಧವನ್ನು ಪ್ರತಿಭಟಿಸಿ ಶೃಂಗವನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಸಂಘಟನೆಯ ವಕ್ತಾರರು ತಿಳಿಸಿದರು. ಧಾರ್ಮಿಕ ಸ್ವಾತಂತ್ರ್ಯದ ಕುರಿತ ಕಾನೂನಿಗೆ ಅಮೆರಿಕ ಆಡಳಿತ ವಂಚನೆ ಮಾಡುತ್ತಿದೆ ಎಂದು ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.
ಮುಸ್ಲಿಂ ದೇಶಗಳಿಗೆ ಹೇರಲಾದ ಪ್ರಯಾಣ ನಿಷೇಧ ಆ ದೇಶದಲ್ಲಿರುವಾಗ ನಾವು ಆ ಶೃಂಗದಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ನಾವು ನಮ್ಮ ತತ್ವ ಮತ್ತು ಮೌಲ್ಯಗಳ ಪ್ರಕಾರ ಇರುವವರು. ಸಮಾಜದಲ್ಲಿ ವಂಶೀಯ ತಾರತಮ್ಯ ವಿರೋಧಿಸುವುದು ನಮ್ಮ ಉದ್ದೇಶವೂ ಅಗಿದೆ ಎಂದು ಎನ್ಸಿಸಿಎಂ ಎಕ್ಸಿಕ್ಯೂಟಿವ್ ಡೈರಕ್ಟರ್ ಮುಸ್ತಫಾ ಫಾರೂಕಿ ಹೇಳಿದರು. ಶೃಂಗಕ್ಕೆ ಅಮೆರಿಕ ರಾಜ್ಯ ಕಾರ್ಯದರ್ಶಿ ಮೈಕ್ಪೊಂಪಿಯೊ ನೇತೃತ್ವ ವಹಿಸುತ್ತಿದ್ದಾರೆ.












