✍️ ಅಮಾನ್
ಜೂನ್ 30 ರಿಂದ ಜುಲೈ 29 ರವರೆಗೆ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತದೆ. ಈ ಒಂದು ತಿಂಗಳಲ್ಲಿ enumeration ಫಾರ್ಮ್ ತುಂಬುವ ಕೆಲಸ ನಡೆಯುತ್ತದೆ. 2025ರ ಮತದಾರರ ಪಟ್ಟಿಯಲ್ಲಿ ಹೇಗಿದೆಯೋ ಹಾಗೆಯೇ 2002ರ ಮತ ಪಟ್ಟಿಯಲ್ಲೂ ನಿಮ್ಮ ಹೆಸರು ಮತ್ತು ನಿಮ್ಮ ತಂದೆ ತಾಯಿಯರ ಹೆಸರು ಇದ್ದರೆ ನಿಮಗೆ ಸಮಸ್ಯೆ ಇಲ್ಲ. ನಿಮ್ಮ ಹೆಸರು ಮತದಾರರ ಕರಡು ಪಟ್ಟಿಗೆ ಸೇರ್ಪಡೆಯಾಗುತ್ತದೆ. ನೀವು ಫಾರ್ಮು ತುಂಬಿಕೊಟ್ಟರೆ ಸಾಕಾಗುತ್ತದೆ. ಆಗಸ್ಟ್ ಐದರಂದು ಬಿಡುಗಡೆಯಾಗುವ ಮೊದಲ ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಳ್ಳುತ್ತದೆ.
ಇದು ಒಂದು ಹಂತ
ಒಂದು ವೇಳೆ 2025 ಮತ್ತು 2002 – ಈ ಎರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೆ ಇದ್ದರೆ ಅಥವಾ ನಿಮ್ಮ ತಂದೆ ತಾಯಿಯ ಹೆಸರು ಇಲ್ಲದೆ ಇದ್ದರೆ ಪ್ರಕ್ರಿಯೆ ಇಷ್ಟು ಸುಲಭ ಅಲ್ಲ. ಒಂದು ವೇಳೆ ಹೆಸರು ಇದೆ, ಆದರೆ ಸ್ಪೆಲ್ಲಿಂಗ್ ಮಿಸ್ಟೇಕ್ ಇದೆ ಎಂದಾದರೂ ಪ್ರಕ್ರಿಯೆ
ಇಷ್ಟು ಸುಲಭ ಅಲ್ಲ. ಹೀಗೇ ನಾದ್ರೂ ಇದ್ದರೆ ಆಗಸ್ಟ್ ಐದರಿಂದ ಇನ್ನೊಂದು ಪ್ರಕ್ರಿಯೆ ಆರಂಭವಾಗುತ್ತದೆ. ಅದರಲ್ಲಿ ನೀವು ಭಾಗ ವಹಿಸಬೇಕಾಗುತ್ತದೆ. ಅದೇನಂದರೆ ನಿಮ್ಮ ಮತ್ತು ನಿಮ್ಮ ತಂದೆ ತಾಯಿಯರ ದಾಖಲೆಗಳನ್ನು ಕೊಟ್ಟು ಹೊಸದಾಗಿ ಫಾರ್ಮ್ 6 ಮತ್ತು ಡಿಕ್ಲರೇಷನ್ ಫಾರ್ಮನ್ನು ನೀವು ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ಕೆಲವು ದಾಖಲೆಗಳನ್ನು ನಿಮ್ಮ ಬಳಿ ಇಟ್ಟು ಕೊಳ್ಳಬೇಕಾಗುತ್ತದೆ. ಆ ದಾಖಲೆಗಳ ಮಾಹಿತಿ ಹೀಗಿದೆ:
1. ನಮ್ಮಲ್ಲಿ ಆಧಾರ್ ಕಾರ್ಡ್ ಇದೆ, ಪಾನ್ ಕಾರ್ಡ್ ಇದೆ, ವೋಟರ್ ಐಡಿ ಇದೆ, ರೇಷನ್ ಕಾರ್ಡ್ ಇದೆ, ಆದ್ದರಿಂದ ನಾವು ಸೇಫ್ ಅಂತ ಆರಾಮವಾಗಿ ಇರ ಬೇಡಿ. ಈ ಯಾವುದನ್ನು ಚುನಾವಣಾ ಆಯೋಗ ದಾಖಲೆಯಾಗಿ ಪರಿಗಣಿಸುವುದಿಲ್ಲ. ನಿಮ್ಮಲ್ಲಿ ಈ ದಾಖಲೆಗಳು ಮಾತ್ರ ಇದೆ ಎಂದಾದರೆ, ಈ ಮುಂದಿನ ಮಾಹಿತಿಗಳು ನಿಮಗೆ ಅನ್ವಯಿಸುತ್ತದೆ. ಇಲ್ಲಿ ಹೇಳ ಲಾಗುವ 9 ದಾಖಲೆಗಳಲ್ಲಿ ಒಂದು ಅಥವಾ ಎರಡು ದಾಖಲೆ ಗಳು ನಿಮ್ಮ ಬಳಿ ಇದ್ದರೆ ಮಾತ್ರ ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗದಂತೆ ನೋಡಿಕೊಳ್ಳ ಬಹುದು. ಆದ್ದರಿಂದ ತಕ್ಷಣ ನೀವು ದಾಖಲೆಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿ.
1. ನೀವು ಕೇಂದ್ರ ಸರಕಾರದ ನೌಕರರಾಗಿದ್ದರೆ ಅಥವಾ ರಾಜ್ಯ ಸರ್ಕಾರ ನೌಕರರಾಗಿದ್ದರೆ ನಿಮ್ಮಲ್ಲಿ ಎಂಪ್ಲಾಯಿ ಕಾರ್ಡ್ ಇರುತ್ತದೆ. ಗುರುತಿನ ಚೀಟಿ ಇರುತ್ತದೆ. ಅಥವಾ ನೀವು ಪೆನ್ಷನ್ ಇದ್ದರೆ ಅದಕ್ಕೆ ಸಂಬಂಧಿಸಿದ ಕಾರ್ಡಿರುತ್ತದೆ. ಇವುಗಳು ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಡಿಲೀಟ್ ಆಗದಂತೆ ತಡೆಯುತ್ತದೆ ಮತ್ತು ಚುನಾವಣಾ ಆಯೋಗಕ್ಕೆ ಇದನ್ನು ದಾಖಲೆಯಾಗಿ ಕೊಡಬಹುದು.
2. 1987 ಕ್ಕಿಂತ ಹಿಂದಿನ ಬ್ಯಾಂಕ್ ಅಕೌಂಟ್ ಪುಸ್ತಕ ನಿಮ್ಮಲ್ಲಿದ್ದರೆ ಅದೂ ದಾಖಲೆಯಾಗುತ್ತದೆ. ಎಲ್ಐಸಿ ದಾಖಲೆ ಇದ್ದರೂ ಸಾಕಾಗುತ್ತದೆ. ಪೋಸ್ಟ್ ಆಫೀಸ್ನಲ್ಲಿ ನೀವು ಪಾಸ್ ಪುಸ್ತಕ ಮಾಡಿಟ್ಟುಕೊಂಡಿದ್ದರೆ ಅದು ಕೂಡ ದಾಖಲೆ ಆಗುತ್ತದೆ. ನೆನಪಿರಲಿ ಇದು 1987 ಕ್ಕಿಂತ ಮುಂಚಿನದು ಆಗಿರಬೇಕು.
3. ಜನನ ಪ್ರಮಾಣ ಪತ್ರ ನಿಮ್ಮಲ್ಲಿ ಇದ್ದರೆ ಅದನ್ನು ಕೂಡ ಒಂದು ದಾಖಲೆಯಾಗಿ ಪರಿಗಣಿಸಲಾಗುತ್ತದೆ.
4. ನಿಮ್ಮಲ್ಲಿ ಪಾಸ್ಪೋರ್ಟ್ ಇದ್ದರೆ ಅದು ಕೂಡ ದಾಖಲೆಯಾಗುತ್ತದೆ.
5. ಎಸ್ಎಸ್ಎಲ್ಸಿ ಅಂಕಪಟ್ಟಿಯನ್ನು ದಾಖಲೆಯಾಗಿ ಕೊಡಬಹುದು. ಹಾಗೆಯೇ ಆ ಬಳಿಕದ ಅಂಕಪಟ್ಟಿಯನ್ನೂ ದಾಖಲೆಯಾಗಿ ಕೊಡಬಹುದು. ಟಿಸಿಯನ್ನು ದಾಖಲೆಯಾಗಿ ಕೊಡಬಹುದು.
6. ಪರ್ಮನೆಂಟ್ ರೆಸಿಡೆಂಟ್ ಸರ್ಟಿಫಿಕೇಟ್ ಅಥವಾ ನಿಮ್ಮ ವಾಸ ಸ್ಥಳದ ಸರ್ಟಿಫಿಕೇಟ್ ಕೂಡ ಮಾನ್ಯತೆ ಹೊಂದಿದ ದಾಖಲೆಯಾಗುತ್ತದೆ. ಇದನ್ನು ನೀವು ತಹಸೀಲ್ದಾರರಿಂದ ಪಡೆದುಕೊಂಡು ಈಗಲೇ ಇಟ್ಟುಕೊಳ್ಳಬಹುದು.
7. ಕಾಡಂಚಿನಲ್ಲಿ ವಾಸಿಸುವ ಆದಿವಾಸಿಗಳು ಮತ್ತು ಇನ್ನಿತರ ಜನ ಸಮೂಹದ ಪಾಲಿಗೆ ಫಾರೆಸ್ಟ್ ರೈಟ್ಸ್ ಸರ್ಟಿಫಿಕೇಟ್ ಇರುತ್ತದೆ. ಇದ್ದರೆ ಅದನ್ನು ದಾಖಲೆಯಾಗಿ ಸಲ್ಲಿಸಬಹುದು ಅಥವಾ ಈಗಲೇ ಅಂತದ್ದೊಂದು ಸರ್ಟಿಫಿಕೇಟ್ ಅನ್ನು ಪಡೆದುಕೊಳ್ಳುವುದು ಒಳ್ಳೆಯದು.
8. ಜಾತಿ ಸರ್ಟಿಫಿಕೇಟು ಇದ್ದರೆ ಅದು ಕೂಡ ಮಾನ್ಯತೆ ಹೊಂದಿದ ದಾಖಲೆಯಾಗುತ್ತದೆ. ಓಬಿಸಿ SC ST ಇತ್ಯಾದಿ ಸರ್ಟಿಫಿಕೇಟ್ ನಿಮ್ಮಲ್ಲಿದ್ದರೆ ಅದನ್ನು ಕೂಡ ದಾಖಲೆಯಾಗಿ ಸಲ್ಲಿಕೆ ಮಾಡಬಹುದು.
9. ಒಂದು ವೇಳೆ ಸರ್ಕಾರ ನಿಮಗೆ ಮನೆ ಸೈಟ್ ಅಥವಾ ಜಮೀನನ್ನು ಕೊಡುಗೆಯಾಗಿ ನೀಡಿದ್ದರೆ ಈ ಗ್ರಾಂಟ್ ಸರ್ಟಿಫಿಕೇಟ್ ಅನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬಹುದು. ಇದನ್ನು ಕೂಡ ದಾಖಲೆಯಾಗಿ ಪರಿಗಣಿಸಲಾಗುತ್ತದೆ.
ಆದ್ದರಿಂದ ಈಗಲೇ ದಾಖಲೆಗಳನ್ನು ಸರಿಪಡಿಸಿ ಇಟ್ಟುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿ. ಪರ್ಮನೆಂಟ್ ರೆಸಿಡೆಂಟ್ ಸರ್ಟಿಫಿಕೇಟ್, ಕಾಸ್ಟ್ ಸರ್ಟಿಫಿಕೇಟ್, ಮಾರ್ಕ್ಸ್ ಕಾರ್ಡ್, ಜನನ ಪ್ರಮಾಣ ಪತ್ರ ಇತ್ಯಾದಿಗಳನ್ನು ಪಡೆಯುವುದಕ್ಕೆ ಬಹಳ ಕಷ್ಟ ಇಲ್ಲ. ಈ ಬಗ್ಗೆ ಉದಾಸೀನ ಮಾಡಿಕೊಳ್ಳಬೇಡಿ. ಎಲ್ಲವನ್ನು ಕೊನೆ ಕ್ಷಣಕ್ಕೆ ಇಡಬೇಡಿ. ಏನಾಗುತ್ತೆ ನೋಡುವ, ಒಂದುವೇಳೆ ಕರಡು ಪಟ್ಟಿಯಲ್ಲಿ ಇಲ್ಲದೇ ಇದ್ದರೆ ಆ ಬಳಿಕ ದಾಖಲೆಗಳನ್ನು ಸರಿಪಡಿಸಿದರೆ ಆಯ್ತು ಎಂಬ ಉದಾಸೀನ ಭಾವಕ್ಕೆ ಹೋಗಬೇಡಿ. ನಿಮ್ಮಲ್ಲಿ ಈ ಮೇಲೆ ಹೇಳಿದ 9 ದಾಖಲೆಗಳಲ್ಲಿ ಒಂದು ಅಥವಾ ಎರಡು ದಾಖಲೆಗಳು ಇದ್ದರೆ ಸಾಕಾಗುತ್ತದೆ. ಸಾಧ್ಯವಾದರೆ ಎರಡು ದಾಖಲೆಗಳನ್ನು ಸಂಗ್ರಹಿಸಿ ಕೊಳ್ಳುವುದಕ್ಕೆ ಪ್ರಯತ್ನಿಸಿ. ನಿಮ್ಮ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳದಿದ್ದರೆ ನಿಮ್ಮ ಬಿಎಲ್ಒ ಅಥವಾ ಎಸಿ ಅವರನ್ನು ಸಂಪರ್ಕಿಸಿ ದಾಖಲೆಗಳನ್ನು ಕೊಡಿ.
(ನಿಮ್ಮ ಅನಿಸಿಕೆಯನ್ನು ಈ ಕೆಳಗಿನ ಸಂಖ್ಯೆಗೆ ವಾಟ್ಸಪ್ ಮಾಡಿ: 7899701978)












