ಸನ್ಮಾರ್ಗ ವಾರ್ತೆ
ಉತ್ತರಾಖಂಡ ಸರಕಾರವು ರಾಜ್ಯದ ಮದರಸ ಮಂಡಳಿಯನ್ನು ವಿಸರ್ಜಿಸಿದೆ. ರಾಜ್ಯದ ಆರು ಅಲ್ಪಸಂಖ್ಯಾತ ಸಮುದಾಯಗಳ ಶಿಕ್ಷಣ ಸಂಸ್ಥೆಗಳನ್ನು ಒಂದೇ ಛತ್ರಿಯ ಡಿ ತರಲು ಉತ್ತರಖಂಡ್ ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರವನ್ನು ರಚಿಸಲಾಗಿದೆ.. ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಅವರು ಈ ಪ್ರಾಧಿಕಾರವನ್ನು ಉದ್ಘಾಟಿಸಿದ್ದಾರೆ.
ರಾಜ್ಯದಲ್ಲಿ ಏಕರೂಪ ನಾಗರಿಕ ಸಮಿತಿಯನ್ನು ಅನುಷ್ಠಾನ ಮಾಡಿದಂತೆಯೇ ಶಿಕ್ಷಣ ಕ್ಷೇತ್ರದಲ್ಲಿ ಒಂದು ರಾಷ್ಟ್ರ ಒಂದು ಶಿಕ್ಷಣ ಪರಿಕಲ್ಪನೆಯತ್ತ ಇದು ಮೊದಲ ಹೆಜ್ಜೆಯಾಗಿದೆ, ಇದು ಯಾವುದೇ ಸಮುದಾಯದ ಧಾರ್ಮಿಕ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ ಎಲ್ಲಾ ಅಲ್ಪಸಂಖ್ಯಾತ ಗುಂಪುಗಳಿಗೆ ಉತ್ತಮ ಶಿಕ್ಷಣ ಅವಕಾಶಗಳನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.
ಈ ಹಿಂದೆ ಮುಸ್ಲಿಮರಿಗೆ ಸೀಮಿತವಾಗಿದ್ದ ಅಲ್ಪಸಂಖ್ಯಾತ ಸ್ಥಾನಮಾನವು ಈಗ ಮುಸ್ಲಿಮರಲ್ಲದೆ ಇತರ ಆರು ಸಮುದಾಯಗಳಿಗೂ ಉತ್ತರಾಖಂಡದಲ್ಲಿ ಲಭ್ಯವಾಗಿದೆ. ಬೌದ್ಧರು ಜೈನರು ಸಿಖ್ರು ಕ್ರೈಸ್ತರು ಮತ್ತು ಪಾಸಿಗಳಿಗೆ ಈಗ ಅಲ್ಪಸಂಖ್ಯಾತ ಸಮುದಾಯದ ಸ್ಥಾನಮಾನ ಸಿಕ್ಕಿದೆ.












