ಸನ್ಮಾರ್ಗ ವಾರ್ತೆ
ನವದೆಹಲಿ: ಅಯೋಧ್ಯೆ ರಾಮಮಂದಿರ ಲೂಟಿ ಪ್ರಕರಣದಲ್ಲಿ ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅವರನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಮತ್ತೆ ವಿಚಾರಣೆ ನಡೆಸಲಿದೆ. ಇತರ ಟ್ರಸ್ಟ್ ಪದಾಧಿಕಾರಿಗಳಿಂದಲೂ ಮಾಹಿತಿ ಪಡೆಯಲಾಗುವುದು. ಎಸ್ಐಟಿ ತಂಡವು ಮಧ್ಯಂತರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಗೋವಿಂದ ದೇವ್ ಗಿರಿ ಅವರನ್ನು ಭೇಟಿಯಾಗಲಿದೆ. ಅಲ್ಲದೆ, ಎಸ್ಐಟಿ ಮತ್ತೆ ದೇವಾಲಯಕ್ಕೆ ಭೇಟಿ ನೀಡಿ ಪರಿಷ್ಕೃತ ಭದ್ರತಾ ವ್ಯವಸ್ಥೆಗಳನ್ನು ಮೌಲ್ಯಮಾಪನ ಮಾಡಲಿದೆ.
ಅಯೋಧ್ಯೆ ರಾಮಮಂದಿರ ಲೂಟಿ ಪ್ರಕರಣದ ಎಸ್ಐಟಿ ತನಿಖೆಯು ಅಂತಿಮ ಹಂತದಲ್ಲಿದೆ. ತಿನ್ನು ಯಾದವ್ ಮತ್ತು ಅನಿಲ್ ಶುಕ್ಲಾ ಅವರನ್ನು ಪ್ರಮುಖ ಆರೋಪಿಗಳನ್ನಾಗಿ ಮಾಡಿ ಎಸ್ಐಟಿ ವರದಿಯನ್ನು ಸಲ್ಲಿಸಲಿದೆ. ವಿಶೇಷ ತನಿಖಾ ತಂಡವು ಇಂದು ಆರೋಪಿಗಳಿಗೆ ಸಂಬಂಧಿಸಿದ 20 ಮಂದಿಯ ಭೂ ವ್ಯವಹಾರಗಳನ್ನು ಪರಿಶೀಲಿಸಲಿದೆ. ದೇವಾಲಯಕ್ಕೆ ಸ್ವೀಕರಿಸಿದ ದೇಣಿಗೆಯಲ್ಲಿ ಭಾರಿ ಕಳ್ಳತನ ನಡೆದಿದೆ ಎಂದು ತನಿಖಾ ತಂಡವು ಪತ್ತೆಹಚ್ಚಿದೆ. ಜೂನ್ 13 ರಂದು ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರವು ವಿಶೇಷ ತನಿಖಾ ತಂಡವನ್ನು ನೇಮಿಸಿತ್ತು. ಬಂಧಿತ ಆರೋಪಿಗಳಿಂದ ಎಸ್ಐಟಿ 80 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದೆ.
ವಿಶ್ವ ಹಿಂದೂ ಪರಿಷತ್ತಿನ ಅಂತರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಮತ್ತು ಅಯೋಧ್ಯೆ ರಾಮಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಯವರಿಗೆ ಅತ್ಯಂತ ಆಪ್ತರಾಗಿರುವ ತಿನ್ನು ಯಾದವ್ ಈ ಪ್ರಕರಣದ ಪ್ರಮುಖ ಮಾಸ್ಟರ್ಮೈಂಡ್ ಆಗಿದ್ದಾರೆ ಎಂದು ವರದಿಯಾಗಿದೆ. ಎಸ್ಐಟಿ 70ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆ. 45 ದಿನಗಳಲ್ಲಿ 70 ಕಳ್ಳತನಗಳು ನಡೆದಿವೆ ಎಂಬುದನ್ನು ಸಹ ತನಿಖಾ ತಂಡ ಪತ್ತೆಹಚ್ಚಿದೆ.












