ಸನ್ಮಾರ್ಗ ವಾರ್ತೆ
ಮಧ್ಯಪ್ರದೇಶದ ಜಬಲ್ಪೂರದಲ್ಲಿರುವ ಸೆಂಟ್ ಅಲೋಸಿಸ್ ಸೀನಿಯರ್ ಸೆಕೆಂಡರಿ ಶಾಲೆಯ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಬಂದ ಗುಂಪು ಶಾಲೆಯನ್ನು ಧ್ವಂಸಗೊಳಿಸಿದೆ. ವಿದ್ಯಾರ್ಥಿಗಳು ಶಾಲೆಯಲ್ಲಿದ್ದಾಗಲೇ ಈ ದಾಳಿ ನಡೆದಿದೆ.. ಇಲ್ಲಿ ಧಾರ್ಮಿಕ ಮತಾಂತರ ಕ್ರಿಯೆ ನಡೆಯುತ್ತಿದೆ ಎಂದು ಭಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ಘಟನೆ ಜುಲೈ 11ರಂದು ನಡೆದಿದೆ. ಶಾಲೆಯ ಆವರಣಕ್ಕೆ ನುಗ್ಗಿದ ಗುಂಪು ಕ್ರೈಸ್ತ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಕಟ್ಟಡದ ಮೇಲೆ ಕಲ್ಲುತೂರಾಟ ನಡೆಸಿದೆ.
ನಾವು ಕಳೆದ 25 ವರ್ಷಗಳಿಂದ ಈ ಶಾಲೆಯನ್ನು ನಡೆಸ್ತಾ ಇದ್ದೇವೆ ಮತ್ತು ಪ್ರಸ್ತುತ ಸುಮಾರು ಎರಡುವರೆ ಸಾವಿರ ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. ಆದರೆ ಶಾಲೆಯ ಇತಿಹಾಸದಲ್ಲಿ ಇಂತಹ ಆರೋಪ ಇದೆ ಮೊದಲಿನದ್ದಾಗಿದೆ ಎಂದು ಫಾದರ್ ಜೋಸ್ ತಿಳಿಸಿದ್ದಾರೆ.
ಈ ಶಾಲೆಯ ಉದ್ಯೋಗಿ ಒಬ್ಬ ಪೊಲೀಸರು ಮತ್ತು ಶಿಕ್ಷಣ ಇಲಾಖೆಗೆ ದೂರು ನೀಡಿದ ಬಳಿಕ ಈ ಘಟನೆ ನಡೆದಿದೆ. ಮತಾಂತರ ಪ್ರಯತ್ನಗಳಿಗೆ ಮಣಿಯಲು ನಿರಾಕರಿಸಿದ ನಂತರ ಶಾಲೆಯು ತನ್ನನ್ನು ಉದ್ಯೋಗದಿಂದ ವಜಾ ಗೊಳಿಸಿದೆ ಎಂದು ಆ ಉದ್ಯೋಗಿ ಆರೋಪಿಸಿದ್ದಾರೆ.
ಆದರೆ ಇದನ್ನು ಶಾಲೆ ನಿರಾಕರಿಸಿದೆ. ಅವರ ನೇಮಕಾತಿ ಒಂದು ವರ್ಷದ ಅವಧಿಗೆ ಇತ್ತು. ಆದರೆ ಮುಂದುವರಿಯಲು ಅವರು ಬಯಸಿದ್ದರು. ಆಡಳಿತ ಮಂಡಳಿ ನಿರಾಕರಿಸಿದಾಗ ಶಾಲೆಯ ಪ್ರಾಂಶುಪಾಲ ಫಾದರ್ ವಿರುದ್ಧ ಮತಾಂತರ ವಿರೋಧಿ ಕಾನೂನಿನಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ರು ಎಂದು ಫಾದರ್ ಜೋಸ್ ಹೇಳಿದ್ದಾರೆ.
ಆದರೆ ಈ ಆರೋಪಕ್ಕೆ ಅವರಲ್ಲಿ ದಾಖಲೆಗಳು ಇಲ್ಲದೆ ಇರುವುದರಿಂದ ಹಿಂದೂ ಸಂಘಟನೆಗಳಿಗೆ ಹೇಳಿ ತೊಂದರೆ ಉಂಟು ಮಾಡಿದ್ದಾರೆ ಎಂದು ಫಾದರ್ ಹೇಳಿದ್ದಾರೆ.












