ಯುಪಿಐ ಪಾವತಿಗೆ ಶುಲ್ಕ ಸಾಧ್ಯತೆ

0
210

ಸನ್ಮಾರ್ಗ ವಾರ್ತೆ

ಕೇಂದ್ರ ಸರ್ಕಾರವು ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸುವ ಬಗ್ಗೆ ಯೋಚಿಸ್ತಾ ಇದೆ ಎಂದು ವರದಿಯಾಗಿದೆ. ದೊಡ್ಡ ವ್ಯಾಪಾರಿಗಳಿಗೆ ಶುಲ್ಕ ವಿಧಿಸುವ ಪ್ರಸ್ತಾಪವನ್ನು ಕೇಂದ್ರ ಸರಕಾರ ಪರಿಗಣಿಸುತ್ತಿದೆ. ವಾರ್ಷಿಕ ಒಂದು ಕೋಟಿಯಿಂದ ಒಂದುವರೆ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಇದು ಅನ್ವಯಿಸುತ್ತದೆ.

2016-17 ರ ಹಣಕಾಸು ವರ್ಷದಲ್ಲಿ ಕೇವಲ ಎರಡು ಕೋಟಿ ಇದ್ದ ಯುಪಿಐ ವಹಿವಾಟುಗಳು ಈಗ 24,200 ಕೋಟಿ ಗೆ ಏರಿದೆ. ವಹಿವಾಟುಗಳ ಸಂಖ್ಯೆಯಲ್ಲಿರುವ ಈ ಹೆಚ್ಚಳವು ಅದನ್ನು ನಿರ್ವಹಿಸುವ ಬ್ಯಾಂಕುಗಳು ಮತ್ತು ಪಾವತಿ ಕಂಪನಿಗಳ ಮೇಲೆ ಭಾರಿ ಆರ್ಥಿಕ ಹೊರೆಯನ್ನು ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೆಚ್ಚುವರಿ ಶುಲ್ಕ ವಿಧಿಸಲು ಯೋಚಿಸುತ್ತಿದೆ.

ಹೊಸ ನಿರ್ದೇಶನ ಜಾರಿಗೆ ಬಂದರೂ ಅದು ಸಾಮಾನ್ಯ ಜನರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಯುಪಿಐ ಸ್ವೀಕರಿಸುವ ವ್ಯಾಪಾರಿಗಳಲ್ಲಿ 90 ಶೇಕಡ ಸಣ್ಣ ವ್ಯಾಪಾರಿಗಳಾಗಿರುವುದರಿಂದ ಅವರಿಗೆ ಈ ಹೊಸ ಬದಲಾವಣೆಯಿಂದ ವಿನಾಯಿತಿ ನೀಡಲಾಗುವುದು ಎಂದು ತಿಳಿದು ಬಂದಿದೆ.