ಸನ್ಮಾರ್ಗ ವಾರ್ತೆ
ಉತ್ತರ ಪ್ರದೇಶ ಪೊಲೀಸರ ಕಿರುಕುಳಕ್ಕೆ ಒಳಗಾದ ಜುನೈದ್ ಗೆ ಕಾನೂನು ನೆರವು ಒದಗಿಸುವುದಾಗಿ ಎಪಿಸಿಆರ್ ಘೋಷಿಸಿದೆ. ಕಾಕ್ರೋಚ್ ಪ್ರತಿಭಟನೆಯ ಸಮಯದಲ್ಲಿ ಆಹಾರ ವಿತರಿಸುವ ಮೂಲಕ ಇವರು ವ್ಯಾಪಕ ಪ್ರಚಾರಕ್ಕೆ ಬಂದಿದ್ದರು.
ಜುನೈದ್ ಅವರನ್ನು ಬಂಧಿಸಿ ಅವರ ಕಣ್ಣಿಗೆ ಪಟ್ಟಿ ಕಟ್ಟಿ ಉತ್ತರಾಖಂಡಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗಿರುವುದನ್ನು ಅವರು ಹೇಳಿಕೊಂಡಿದ್ದಾರೆ.
ಆ ಬಳಿಕ ಮಸೂರಿಯಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು . ಈ ಹಿನ್ನೆಲೆಯಲ್ಲಿ ಜುನೈದ್ ಅವರ ಕುಟುಂಬವನ್ನು ಗಾಜಿಯಾಬಾದ್ ಘಟಕದ ಎಪಿಸಿಆರ್ ತಂಡ ಭೇಟಿ ನೀಡಿ ಅವರಿಗೆ ಭರವಸೆ ನೀಡಿದೆ.
ಜುನೈದ್ ಅವರ ಕುಟುಂಬವನ್ನು ಕೂಡ ಪೊಲೀಸರು ವಿಚಾರಣೆಗಾಗಿ ಕರೆಸಿಕೊಂಡಿದ್ದರು . ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇಂತಹ ಕ್ರಮ ಮುಂದುವರಿದರೆ ಅದನ್ನು ಬಲವಾಗಿ ವಿರೋಧಿಸಲಾಗುವುದು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಕಾನೂನಿನ ಕುಣಿಕೆಯೊಳಗೆ ಸಿಲುಕಿಸಲಾಗುವುದು ಎಂದು ಎಪಿಸಿಆರ್ ತಿಳಿಸಿದೆ.
ಭೇಟಿಯ ಸಮಯದಲ್ಲಿ ಎಪಿಸಿಆರ್ ಸದಸ್ಯರಾದ ನದೀಮ್ ಅಖ್ತರ್, ವಕೀಲ ಮುಜಿಬುರ್ ರೆಹಮಾನ್ ಅಫ್ಸರ್ ಚೌದರಿ ಮುಹ್ ಸಿನ್ ಚೌದರಿ ಮತ್ತು ವಕೀಲರಾದ ಗುಲ್ಫಮ್ ಸಿದ್ದೀಕಿ ಉಪಸ್ಥಿತರಿದ್ದರು.












