ಟ್ರಂಪ್ ಬೆಂಬಲ ವಿಫಲ: ಇಸ್ಲಾಂ ವಿರೋಧಿ ಒಗಲ್ಸ್‌ಗೆ ಅಮೆರಿಕನ್ ಚುನಾವಣೆಯಲ್ಲಿ ಸೋಲು

0
889

ಸನ್ಮಾರ್ಗ ವಾರ್ತೆ

ಮುಸ್ಲಿಂ ವಿರೋಧಿ ಹೇಳಿಕೆಗಳಿಂದ ವಿವಾದಕ್ಕೆ ಸಿಲುಕಿರುವ ಅಮೆರಿಕಾದ ಕಾಂಗ್ರೆಸ್ ಸದಸ್ಯ ಆಂಡಿ ಒಗಲ್ಸ್ ಅವರು ಟೆನ್ನೇಸ್ಸಿ ರಿಪಬ್ಲಿಕನ್ ಪ್ರಾಥಮಿಕ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲವನ್ನು ಅನುಭವಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಅವರ ಬೆಂಬಲದ ಹೊರತಾಗಿಯೂ ಒಗಲ್ಸ್ ತಮ್ಮ ಎದುರಾಳಿ ಚಾರ್ಲಿ ವಿರುದ್ಧ ಸೋತರು.

ಆಂಡಿ ಒಗಲ್ಸ್ ತಮ್ಮ ಇಸ್ಲಾಮೊ ಫೋಬಿಕ್ ಹೇಳಿಕೆಗಳಿಗಾಗಿ ತೀವ್ರ ಪ್ರತಿಭಟನೆಯನ್ನು ಎದುರಿಸಿದ್ದಾರೆ. ಕಳೆದ ಮಾರ್ಚಿನಲ್ಲಿ ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ಅಮೆರಿಕನ್ ಸಮಾಜದಲ್ಲಿ ಮುಸ್ಲಿಮರಿಗೆ ಸ್ಥಾನವಿಲ್ಲ, ಬಹುತ್ವವು ಸುಳ್ಳು ಎಂದು ಬರೆದಿದ್ದರು.

ಇದಲ್ಲದೆ ಗಾಝಾದಲ್ಲಿ ಮಕ್ಕಳ ಸಾವಿನ ಬಗ್ಗೆ ಕೇಳಿದಾಗ ಅವರೆಲ್ಲರನ್ನು ಕೊಲ್ಲಬೇಕು ಎಂದು ಹೇಳಿದ್ದರು.

ಟ್ರಂಪ್ ರ ಸಂಪೂರ್ಣ ಬೆಂಬಲದ ಹೊರತಾಗಿಯೂ ಒಗಲ್ಸ್ ಅವರ ಸೋಲಿಗೆ ಅವರ ಜನಾಂಗೀಯ ನಿಲುವುಗಳಿಗೆ ಮತದಾರರಿಂದ ಬಲವಾದ ವಿರೋಧ ವ್ಯಕ್ತವಾಗಿದ್ದೆ ಕಾರಣ ಎಂದು ಹೇಳಲಾಗುತ್ತಿದೆ. ರಿಪಬ್ಲಿಕನ್ ಪಕ್ಷ ಮತ್ತು ಅಮೆರಿಕನ್ ಮುಸ್ಲಿಂ ಸಂಘಟನೆಗಳ ಸದಸ್ಯರು ಸ್ವಾಗತಿಸಿದ್ದಾರೆ.