ಸನ್ಮಾರ್ಗ ವಾರ್ತೆ
ಪಾಕಿಸ್ತಾನ ಸೌದಿ ಅರೇಬಿಯಾ ಮತ್ತು ತುರ್ಕಿ ನಡುವೆ ನಡೆದ ಜಂಟಿ ಪ್ರತಿರೋಧ ಒಪ್ಪಂದವನ್ನು ಇರಾನ್ ಬೆಂಬಲಿಸಿದೆ. ಪಶ್ಚಿಮ ಏಷ್ಯಾದ ರಾಷ್ಟ್ರಗಳ ನಡುವೆ ಸಂಘರ್ಷ ಹೆಚ್ಚುತ್ತಿರುವುದರ ನಡುವೆ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಒಗ್ಗಟ್ಟಿಗೆ ಈ ಒಪ್ಪಂದ ಒಂದು ಪ್ರತೀಕವಾಗಲಿದೆ ಎಂದು ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹೇಳಿದ್ದಾರೆ.
ಜಗತ್ತಿನ ಅತಿ ಪ್ರಬಲ ಸೈನ್ಯದ ಎದುರು ಇರಾನ್ ಅತ್ಯಂತ ಶಕ್ತಿಯುತವಾಗಿ ಹೋರಾಡಿದ ಚರಿತ್ರೆ ಎಲ್ಲರ ಮುಂದಿದೆ. ಮುಸ್ಲಿಮರು ಒಗ್ಗಟ್ಟಾಗಿ ನಿಲ್ಲುವಾಗ ಬಾಹ್ಯ ರಾಷ್ಟ್ರಗಳ ಯಾವುದೇ ದಾಳಿಯನ್ನು ನಮಗೆ ಮುಖಾಮುಖಿಯಾಗಲು ಸಾಧ್ಯ ಇದೆ. ನಮ್ಮನ್ನು ನಾವೇ ಅವಲಂಬಿಸಿಕೊಳ್ಳಲು ಮತ್ತು ನಿಜವಾದ ಸಹೋದರತೆಯನ್ನು ಸ್ಥಾಪಿಸುವ ಸಮಯ ಬಂದಿದೆ ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.












