ಕಲ್ಪಟ್ಟ, ಜು. 23: ವಯನಾಡಿನ ಅಂಬಲವಯಲ್ ಎಂಬಲ್ಲಿ ತಮಿಳ್ನಾಡಿನ ದಂಪತಿಯನ್ನು ನಡುರಸ್ತೆಗೆ ಎಳೆದು ಹಾಕಿ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ. ವಯನಾಡನ್ನು ನೋಡಲು ಬಂದಿದ್ದ ದಂಪತಿಯನ್ನು ಆಟೋ ಚಾಲಕ ಜೀವಾನಂದನ್ ಎಂಬಾತ ಕ್ರೂರವಾಗಿ ಹೊಡೆದಿದ್ದಾನೆ. ಇದರ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರವಾದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಕಳೆದ ರವಿವಾರ ಘಟನೆ ನಡೆದಿದೆ ಎನ್ನಲಾಗಿದ್ದು ರಸ್ತೆಗೆ ಎಳೆದು ಹಾಕಿ ಯುವಕನನ್ನು ಆಟೋಚಾಲಕ ಕ್ರೂರವಾಗಿ ಜನರ ಗುಂಪಿನ ಮುಂದೆಯೇ ಹೊಡೆದು ಅವಾಚ್ಯವಾಗಿ ನಿಂದಿಸಿದ್ದಾನೆ. ರಸ್ತೆಯಲ್ಲಿ ಬಿದ್ದಿದ್ದ ಪತಿಗೆ ಪುನಃ ಹೊಡೆಯುವುದನ್ನು ಪ್ರಶ್ನಿಸಿದ ಯುವತಿಗೂ ಆಟೊಚಾಲಕ ಕಪಾಳಕ್ಕೆ ಹೊಡೆದನು. ಅಲ್ಲಿದ್ದವರು ಮೊಬೈಲ್‍ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಕ್ಕೆ ಹಾಕಿದ್ದರು.
ಘಟನೆಯ ತನಿಖೆಗೆ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಆದೇಶ ಹೊರಡಿಸಿದ್ದು. ವಿಚಾರಣೆ ಸಲುವಾಗಿ ಆಟೊಚಾಲಕ ಜೀವಾನಂದನ್‍ಗೆ ಪೊಲೀಸ್ ಠಾಣೆಗೆ ಹಾಜರಾಗಲು ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.












