ಸನ್ಮಾರ್ಗ ವಾರ್ತೆ
ಸ್ವೀಡನ್ ನ ಸಾರ್ವತ್ರಿಕ ಚುನಾವಣೆಯಲ್ಲಿ ಎಡಪಂಥೀಯ ವಿರೋಧ ಪಕ್ಷಗಳ ಒಕ್ಕೂಟವು ಭರ್ಜರಿ ಜಯಸಾಧಿಸಿದೆ. ಸಂಪ್ರದಾಯವಾದಿ ಬಲಪಂಥೀಯ ಒಕ್ಕೂಟಕ್ಕೆ ಸೋಲಾಗಿದೆ. 349 ಸದಸ್ಯರ ಸಂಸತ್ತಿನಲ್ಲಿ ಎಡಪಂಥೀಯ ಒಕ್ಕೂಟವು 176 ಸ್ಥಾನಗಳನ್ನು ಗೆದ್ದಿದೆ. ಆಡಳಿತರೂಢ ಸಂಪ್ರದಾಯವಾದಿ ಬಣವು 173 ಸ್ಥಾನಗಳನ್ನು ಗೆದ್ದಿದೆ.
ಸಂಸತ್ತಿನಲ್ಲಿ ಪೂರ್ಣ ಬಹುಮತಕ್ಕೆ 175 ಸ್ಥಾನಗಳು ಬೇಕಾಗಿದ್ದು ಎಡಪಂಥೀಯ ಪಕ್ಷವು ಅಲ್ಪ ಮುನ್ನಡೆಯೊಂದಿಗೆ ಅಧಿಕಾರಕ್ಕೆ ಮರಳಿದೆ. ಎಡಪಂಥೀಯ ಒಕ್ಕೂಟವು ಸೋಶಿಯಲ್ ಡೆಮಾಕ್ರೆಟಿಕ್ಸ್ ಎಡಪಕ್ಷ ಗ್ರೀನ್ಸ್ ಪಾರ್ಟಿ ಮತ್ತು ಸೆಂಟರ್ ಪಾರ್ಟಿಯನ್ನು ಒಳಗೊಂಡಿದೆ.
ಅಂತೂ ಬಲಪಂಥೀಯ ಪಕ್ಷದ ಸೋಲಿನೊಂದಿಗೆ ಸ್ವೀಡನ್ ಮತ್ತೆ ಎಡಪಕ್ಷದ ಆಡಳಿತಕ್ಕೆ ಮರಳಿದೆ.












