ಲಿಬಿಯ: ಮೆಡಿಟರೇನಿಯನ್ ಸಮುದ್ರದಲ್ಲಿ ಬೋಟು ಪಲ್ಟಿ: 150 ಮಂದಿ ಸಾವು: ವಲಸೆಯ ದಾರುಣ ಮುಖ

0
666

ಟ್ರಿಪೊಲಿ, ಜು. 26: ಲಿಬಿಯದಿಂದ ಯುರೋಪಿಗೆ ಹೊಗುತ್ತಿದ್ದ ಬೋಟ್ ಪಲ್ಟಿಯಾಗಿ 150 ಮಂದಿ ಮೃತಪಟ್ಟಿದ್ದಾರೆ. ನೌಕೆಯಲ್ಲಿ 300 ಮಂದಿ ಇದ್ದರು. ಇವರಲ್ಲಿ 137 ಮಂದಿಯನ್ನು ಮೀನುಗಾರರು ಮತ್ತು ತಟರಕ್ಷಣಾ ಸೇನೆ ಸೇರಿ ರಕ್ಷಿಸಿ ಲಿಬಿಯಕ್ಕೆ ಮರಳಿ ಕಳುಹಿಸಿಕೊಟ್ಟಿದೆ ಎಂದು ಲಿಬಿಯದ ತಟರಕ್ಷಣಾ ಸೇನೆ ವಕ್ತಾರ ಅಯ್ಯೂಬ್ ಗಾಝಿಂ ತಿಳಿಸಿದರು.

ಮೆಡಿಟರೇನಿಯನ್ ಸಮುದ್ರದಲ್ಲಿ ಈ ವರ್ಷ ನಡೆದ ಅತಿದೊಡ್ಡ ದುರಂತ ಇದು ಎಂದು ವಿಶ್ವಸಂಸ್ಥೆ ತಿಳಿಸಿದೆ. ಲಿಬಿಯದಿಂದ ಈ ವರ್ಷ ಈವರೆಗೆ 37,555 ಮಂದಿ ಸಮುದ್ರ ಮಾರ್ಗ ಮತ್ತು 8,007 ಮಂದಿ ರಸ್ತೆಮಾರ್ಗವಾಗಿ ಯುರೋಪಿಗೆ ವಲಸೆ ಬಂದಿದ್ದಾರೆ ಎನ್ನಲಾಗಿದೆ.