ಸನ್ಮಾರ್ಗ ವಾರ್ತೆ
ಯಮನ್ ಸಂಘರ್ಷದಲ್ಲಿ ಮಧ್ಯಸ್ಥಿಕೆ ಬಯಸಲು ಸಿದ್ಧನಿದ್ದೇನೆ ಎಂದು ಹಮಾಸ್ ನಾಯಕ ಖಲೀಲ್ ಅಲ್ ಹೈಯ್ಯಾ ಹೇಳಿದ್ದಾರೆ. ಕಳೆದ ಜುಲೈನಲ್ಲಿ ಹಮಾಸ್ ನಾಯಕರಾಗಿ ಆಯ್ಕೆಯಾದ ನಂತರ ಕತಾರ್ ಮೂಲದ ಅಲ್ ಅರಬಿ ಟಿವಿಗೆ ನೀಡಿದ ಮೊದಲ ದೂರದರ್ಶನ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ.
2014ರಲ್ಲಿ ಯಮನ್ ರಾಜಧಾನಿ ಸನಾವನ್ನು ವಶಪಡಿಸಿಕೊಂಡ ಹೂತಿಗಳು ಸಮ್ಮಿಶ್ರ ಪಡೆಗಳ ವಿರುದ್ಧ ಹೋರಾಡುತ್ತಿದ್ದಾರೆ. 2022 ರಲ್ಲಿ ಕದನ ವಿರಾಮದ ನಂತರ ದೀರ್ಘಕಾಲದಿಂದ ಶಾಂತವಾಗಿದ್ದ ಘರ್ಷಣೆ ಕೆಂಪು ಸಮುದ್ರದಲ್ಲಿ ಸೌದಿ ಹಡಗುಗಳ ಮೇಲೆ ಹೂತಿಗಳು ದಿಗ್ಬಂದನ ವಿಧಿಸಿದ ನಂತರ ಇತ್ತೀಚೆಗೆ ಮತ್ತೆ ಘರ್ಷಣೆ ತೀವ್ರಗೊಂಡಿದೆ.
ಕಳೆದ ವರ್ಷದಿಂದ ಹಮಾಸ್ ನಾಯಕರು ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕದ ಅಧಿಕಾರಿಗಳನ್ನು ನಾಲ್ಕು ಬಾರಿ ಭೇಟಿಯಾಗಿದ್ದಾರೆ ಎಂದು ಖಲೀಲ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಈ ಚರ್ಚೆಯ ಮುಖ್ಯ ವಿಷಯ ಗಾಜಾ ಪಟ್ಟಿ ಮತ್ತು ಫೆಲೆಸ್ತೀನ್ ಜನರ ಬೇಡಿಕೆಗಳಾಗಿದ್ದವು. ಅಮೆರಿಕಾದ ಕಡೆಯಿಂದ ಅನುಕೂಲಕರ ನಿಲುವು ಬಂದಿದೆ ಮತ್ತು ಅವರು ತಮ್ಮ ವಾದಗಳನ್ನು ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಮೆಚ್ಚಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಫೆಲೆಸ್ತೀನ್ ನ ಏಕತೆಗಾಗಿ ಅಧ್ಯಕ್ಷ ಮಹಮೂದ್ ಅಬ್ಬಾಸ್ ಜೊತೆ ಮಾತುಕತೆ ನಡೆಸಲು ಹಮಾಸ್ ಸಿದ್ಧವಾಗಿದೆ ಎಂದು ಅವರು ಹೇಳಿದರು.












