✒ ಅಮಾನ್
ಕೇರಳದಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯವು ಕಾಸರಗೋಡಿನ ಪೆರಿಯ ಕ್ಯಾಂಪಸ್ ನಲ್ಲಿ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸೆಮಿನಾರ್ ಸಭೆ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಗೆ ಕಾರಣವಾಯಿತು. ಒಂದೇ ಮಾತರಂ ಗೀತೆಗೆ 150 ವರ್ಷಗಳು ಸಂದ ಹಿನ್ನೆಲೆಯಲ್ಲಿ ವಾರ್ಷಿಕೋತ್ಸವದ ಸ್ಮರಣಾರ್ಥ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಿಶ್ವವಿದ್ಯಾಲಯದ ಲೈಬ್ರೆರಿ ಸೆಮಿನಾರ್ ಹಾಲ್ ನಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಆರ್ ಎಸ್ ಎಸ್ ನ ಬೌದ್ಧಿಕ ವಿಭಾಗದ ರಾಷ್ಟ್ರೀಯ ಸಂಚಾಲಕ ಜೆ ನಂದಕುಮಾರ್ ಉದ್ಘಾಟನಾ ಅಧಿವೇಶನದಲ್ಲಿ ಮುಖ್ಯ ಭಾಷಣ ಮಾಡಿದರು. ಸಮಾರೋಪ ಸಮಾರಂಭ ಅಕ್ಟೋಬರ್ 7ರಂದು ನಡೆದಿದ್ದು ಕೇರಳ ಮತ್ತು ತಮಿಳುನಾಡು ಗವರ್ನರ್ ರಾಜೇಂದ್ರ ವಿಶ್ವನಾಥ್ ಅರ್ಲೆಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಒಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಲಾಯಿತು.
ಆದರೆ ಆರ್ ಎಸ್ ಎಸ್ ಗೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಹಾನಿಸಿರುವುದಕ್ಕೆ ವಿದ್ಯಾರ್ಥಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು . ಎಸ್ ಎಫ್ ಐ, ಎನ್ ಎಸ್ ಯು ಐ, ಕೆ ಎಸ್ ಯು, ಎಂ ಎಸ್ ಎಫ್, ಎಐಎಸ್ಎಫ್, ಫೆಟರ್ನಿಟಿ ಮೂವ್ಮೆಂಟ್ ಮುಂತಾದ ವಿದ್ಯಾರ್ಥಿ ಸಂಘಟನೆಗಳು ಈ ಕಾರ್ಯಕ್ರಮವನ್ನು ವಿರೋಧಿಸಿದವು. ಕ್ಯಾಂಪಸ್ ಅನ್ನು ಕೇಸರಿ ಕರಣ ಗೊಳಿಸಲಾಗುತ್ತಿದೆ ಎಂದು ಆರೋಪಿಸಿದವು. ನಂದಕುಮಾರ್ ಅವರ ಭಾಷಣದ ವೇಳೆ ಘೋಷಣೆ ಕೂಗಿ ಅಡ್ಡಿ ಪಡಿಸಿದರು.
ಈ ಕಾರ್ಯಕ್ರಮವನ್ನು ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಸಾಹಿತ್ಯ ಅಕಾಡೆಮಿ ಮತ್ತು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಆರ್ ಎಸ್ ಎಸ್ ನ ಅಂಗಸಂಸ್ಥೆಯಾಗಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಂಟಿಯಾಗಿ ಆಯೋಜಿಸಿತ್ತು.
ವಿದ್ಯಾರ್ಥಿಗಳು ಆರ್ ಎಸ್ ಎಸ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು. ಚಪ್ಪಾಳೆ ತಟ್ಟಿದರು. ಕ್ಯಾಂಪಸ್ ನಲ್ಲಿ ಆರ್ ಎಸ್ ಎಸ್ ಗೆ ಅನುಮತಿ ಇಲ್ಲ ಹೊರ ಹೋಗಿ ಎಂದು ಕೂಗಿದರು.
ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಕೂಡ ಕಾರ್ಯಕ್ರಮಕ್ಕೆ ಪ್ರವೇಶ ನಿರಾಕರಿಸಲಾಯಿತು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪೊಲೀಸ್ ಮತ್ತು ಕ್ಯಾಂಪಸ್ ಭದ್ರತಾ ಸಿಬ್ಬಂದಿಯೊಂದಿಗೆ ವಿದ್ಯಾರ್ಥಿಗಳ ನಡುವೆ ಹೊಡೆದಾಟ ತಳ್ಳಾಟ ನಡೆಯಿತು . ಎಸ್ ಎಫ್ ಐ ಯೂನಿಟ್ ಸೆಕ್ರೆಟರಿ ಸೈಯದ್ ಅಲಿ ಸಹಿತ ಕೆಲವು ವಿದ್ಯಾರ್ಥಿಗಳು ಗಾಯಗೊಂಡರು. ಮಹಿಳಾ ವಿದ್ಯಾರ್ಥಿಗಳನ್ನು ತಡೆಯಲಾಯಿತು ಎಂಬ ಆರೋಪಗಳಿವೆ. ವಂದೇ ಮಾತರಂ ಪೂರ್ಣವಾಗಿ ಹಾಡುವುದಕ್ಕೆ ವಿದ್ಯಾರ್ಥಿಗಳ ವಿರೋಧ ಇತ್ತಾದರೂ ಕಾರ್ಯಕ್ರಮದ ಒಳಗೆ ಅವರು ವಿರೋಧ ವ್ಯಕ್ತಪಡಿಸಿಲ್ಲ. ಘೋಷಣೆಗಳನ್ನು ಕೂಗಿಲ್ಲ ಎಂದು ವಿದ್ಯಾರ್ಥಿ ಸಂಘಟನೆಗಳು ಹೇಳಿವೆ. ಆದರೆ ರಾಜ್ಯಪಾಲರು ಪ್ರತಿಭಟನೆಯನ್ನು ವಂದೇ ಮಾತರಂ ಗೆ ವಿರೋಧ ಎಂದು ವ್ಯಾಖ್ಯಾನಿಸಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ ಇದರಿಂದ ಪ್ರತಿಭಟನೆ ಮತ್ತೆ ಜೋರಾಯಿತು. ಕೆಲವು ವಿದ್ಯಾರ್ಥಿಗಳು ಹಾಲ್ಗೆ ನುಗ್ಗಿ ಗೋ ಬ್ಯಾಕ್ ಘೋಷಣೆ ಕೂಗಿದರು.
ಇದೆ ವೇಳೆ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ವಿಶ್ವವಿದ್ಯಾಲಯವನ್ನು ಸಂಘ ಪರಿವಾರದ ಎಜೆಂಡಕ್ಕೆ ಬಳಸಲಾಗುತ್ತಿರುವುದನ್ನು ವಿರೋಧಿಸಿದ್ದಾರೆ.
ಅಕ್ಟೋಬರ್ 6 ಮತ್ತು ಏಳರಂದು ನಡೆದ ಈ ಕಾರ್ಯಕ್ರಮ ಈ ಪ್ರತಿಭಟನೆಯಿಂದಾಗಿ ರಾಷ್ಟ್ರದ ಗಮನ ಸೆಳೆದಿದೆ. ನಂದಕುಮಾರ್ ಅವರ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ನಿರಂತರ ಪ್ರತಿಭಟನೆ ಮತ್ತು ಅವರ ಭಾಷಣಕ್ಕೆ ಉಂಟುಮಾಡಿದ ಅಡ್ಡಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.












