ಇನ್ನೊಂದು ಕೊರೋನಾ ಭೀತಿಯಲ್ಲಿ ಜಗತ್ತು?

0
153

✒ ಶಮೀಮಾ

ಜಗತ್ತು ಇನ್ನೊಂದು ಕೋರೋನಾ ಮಾದರಿಯ ಮಹಾಮಾರಿಯನ್ನು ಎದುರಿಸಲಿದೆಯಾ ಎಂಬ ಪ್ರಶ್ನೆಯೆಂದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಗೆ ಒಳಗಾಗಿದೆ. ಇದಕ್ಕೆ ಕಾರಣ ರಷ್ಯಾದ ಸೈಬೀರಿಯಾದಲ್ಲಿ ನಡೆದ ಒಂದು ದುರ್ಘಟನೆ. ಇಲ್ಲಿನ ಇರ್ಕುಟ್ಸ್ ಪ್ಲೇಗ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ 28 ವರ್ಷದ ಶಿಪಿಲೋವಾ ಮೃತಪಟ್ಟರು. ಅವರು ಲೈವ್ ಪ್ಲೇಗ್ ಬ್ಯಾಕ್ಟೀರಿಯಾ ಹೊಂದಿದ್ದ ಟೆಸ್ಟ್ ಟ್ಯೂಬನ್ನು ಆಕಸ್ಮಿಕವಾಗಿ ಒಡೆದ ಬಳಿಕ ಉಸಿರಾಟದ ಸಮಸ್ಯೆಯನ್ನು ಎದುರಿಸಿದ್ದರು . ಇದರ ಬಳಿಕ ಅವರು ಮೃತಪಟ್ಟರು. ಇದರ ಬಳಿಕ ಮೃತಪಟ್ಟ ಯುವತಿಯ ಸಂಪರ್ಕದಲ್ಲಿದ್ದ 197 ಜನರನ್ನು ಕ್ವಾರಂಟೈನ್ಗೆ ಗುರಿಪಡಿಸಲಾಯಿತು. ಆಸ್ಪತ್ರೆಯ ಸಿಬ್ಬಂದಿಯೂ ಸೇರಿದಂತೆ ಈ 197 ಮಂದಿಯಲ್ಲಿ ಪ್ರಮುಖರು ಇದ್ರು. ಇದರಿಂದಾಗಿ ವಿಶ್ವ ಆರೋಗ್ಯ ಸಂಸ್ಥೆ ಬೆದರಿತು. ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಈ ವಿಷಯವಾಗಿ ತೀವ್ರ ಆತಂಕ ವ್ಯಕ್ತಪಡಿಸಿತು. ಕೋರೋಣ ಆರಂಭದಲ್ಲಿ ಚೀನಾ ವರದಿ ಮರೆಮಾಚಿದಂತೆ ರಷ್ಯಾ ಕೂಡ ಸತ್ಯವನ್ನು ಮುಚ್ಚಿಡ್ತಾ ಇರಬಹುದು ಎಂಬ ಅನುಮಾನವನ್ನು ಪಾಶ್ಚತ್ಯ ಮಾಧ್ಯಮಗಳು ವ್ಯಕ್ತಪಡಿಸಿದವು . ಪ್ರಯೋಗಾಲಯದಲ್ಲಿ ಕಾಪಿಡಲಾಗಿದ್ದ ಪ್ಲೇಗು ವೈರಸ್ ಇದೀಗ ಹೊರಗಡೆ ಬಂದಿದ್ದು ಇದು ಎಲ್ಲೆಡೆ ವ್ಯಾಪಿಸುವ ಸಾಧ್ಯತೆ ಇದೆ ಎಂದು ಭಯಪಡಲಾಯಿತು. ಕೊರೋನಾ ಕೂಡ ಚೀನಾದ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಉಂಟಾದ ಸೋರಿಕೆಯಿಂದ ಉಂಟಾದ ಕಾಯಿಲೆ ಎಂದು ಹೇಳಲಾಗಿದ್ದು ಈ ಹಿನ್ನೆಲೆಯಲ್ಲಿ ರಷ್ಯಾದ ಈ ಪ್ಲೇಗ್ ಸಾವು ಆತಂಕವನ್ನು ಉಂಟು ಮಾಡಿದೆ.

ಆದರೆ ಇದು ಕೊರೋನ ರೀತಿಯ ಜಾಗತಿಕ ಸಾಂಕ್ರಾಮಿಕವಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಕಾರಣ ಪ್ಲೇಗು ಎನ್ನುವುದು ಯಾರ್ಸಿನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುವ ರೋಗ. ಕೊರೋನದಂತೆ ಇದು ಹೊಸ ವೈರಸ್ ಅಲ್ಲ.. ಆಧುನಿಕ ಔಷಧ ವಿಜ್ಞಾನದಲ್ಲಿ ಪ್ಲೆಗ್ ಗೆ ಅತ್ಯಂತ ಪರಿಣಾಮಕಾರಿ ಔಷದ ಲಭ್ಯ ಇದೆ. ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿದರೆ ಇದನ್ನು ಸುಲಭವಾಗಿ ವಾಸಿ ಮಾಡಬಹುದು. ಕೋರೋನಾ ವೈರಸ್ ಗಾಳಿಯಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ ಮತ್ತು ರೂಪಾಂತರಗೊಳ್ಳುವ ಗುಣವನ್ನು ಹೊಂದಿದೆ. ಆದರೆ ಪ್ಲೇಗ್ ಬ್ಯಾಕ್ಟೀರಿಯಾವಾಗಿದ್ದು ಆ ಮಟ್ಟದಲ್ಲಿ ರೂಪಾಂತರಗೊಳ್ಳುವುದಿಲ್ಲ ಸಮರ್ಪಕ ನೈರ್ಮಲ್ಯ ಮತ್ತು ಆಂಟಿ ಬಯೋಟಿಕ್ ಬಳಕೆಯಿಂದ ಸುಲಭವಾಗಿ ಇದನ್ನು ನಿಯಂತ್ರಿಸಬಹುದು. ಅಲ್ಲದೆ ರಷ್ಯಾದ ಈ ಘಟನೆ ಸಂಭವಿಸಿದ ಪ್ರದೇಶದಲ್ಲಿ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ವಾರೆಂಟೀನ್ ಮತ್ತು ಮಾಸ್ಕ್ ಧರಿಸುವ ನಿಯಮವನ್ನು ಜಾರಿಗೆ ತಂದಿದೆ. ಸಂಪರ್ಕಿತ ಎಲ್ಲರನ್ನೂ ಪ್ರತ್ಯೇಕಿಸಿ ತಪಾಸಣೆ ನಡೆಸಲಾಗುತ್ತಿದೆ.

ಆದರೂ ಅಂತರಾಷ್ಟ್ರೀಯ ವಲಯದಲ್ಲಿ ರಷ್ಯಾದ ಸೈಬೀರಿಯಾದ ಈ ಘಟನೆಯನ್ನು ಸೂಕ್ಷ್ಮವಾಗಿ ನೋಡಲಾಗುತ್ತಿದೆ. ಪ್ರಯೋಗಾಲಯದಲ್ಲಿ ಉಂಟಾದ ಈ ಅವಘಡವು ಹೊರ ಪ್ರದೇಶಕ್ಕೂ ಹರಡಿ ವ್ಯಾಪಕ ಪ್ರಮಾಣದಲ್ಲಿ ನಾಶ ನಷ್ಟ ಉಂಟು ಮಾಡಬಹುದೇ ಎಂಬ ಆತಂಕ ವ್ಯಕ್ತವಾಗಿದೆ