ಒಮಾನ್: ಹೊಸ ವಲಸೆ ನೀತಿ

0
150

ಸನ್ಮಾರ್ಗ ವಾರ್ತೆ

ಒಮಾನ್ ದೇಶವು ವಲಸೆ ಕಾರ್ಮಿಕರ ನೇಮಕಾತಿ ಏಜೆನ್ಸಿಗಳಿಗಾಗಿ 2027ರ ಜನವರಿ 1ರಿಂದ ಜಾರಿಗೆ ಬರುವಂತೆ ಹೊಸ ನಿಯಮಗಳನ್ನು ಘೋಷಿಸಿದೆ.

ಪರವಾನಗಿ ಪಡೆಯಲು ಏಜೆನ್ಸಿಗಳು 5,000 ಒಮಾನಿ ರಿಯಾಲ್ ಮೊತ್ತದ ಭದ್ರತಾ ನಿಧಿಯನ್ನು ಠೇವಣಿ ಇಡುವುದು, ಎರಡು ವರ್ಷಗಳ ಅವಧಿಯ ಪರವಾನಗಿ ಶುಲ್ಕ ಪಾವತಿಸುವುದು, ಕಾರ್ಮಿಕರ ನೇಮಕಾತಿ ಪ್ರಕ್ರಿಯೆಯನ್ನು ಗರಿಷ್ಠ 45 ದಿನಗಳ ಒಳಗೆ ಪೂರ್ಣಗೊಳಿಸುವುದು, ನೇಮಕಾತಿ ಏಜೆನ್ಸಿಗಳು ಕೆಲಸಗಾರರಿಂದ ಯಾವುದೇ ರೀತಿಯ ಸೇವಾ ಶುಲ್ಕ ಅಥವಾ ಹಣವನ್ನು ಸಂಗ್ರಹಿಸದಿರುವುದು, ಉದ್ಯೋಗದಾತರಿಗೆ ನೇಮಕಾತಿ ಸೇವೆಗಳ ಮೇಲೆ ಎರಡು ವರ್ಷಗಳ ಗ್ಯಾರಂಟಿ ನೀಡುವುದು, ನೇಮಕಾತಿಗೂ ಮುನ್ನವೇ ವೇತನ ಮತ್ತು ಕೆಲಸದ ಸ್ವಭಾವವನ್ನು ಸ್ಪಷ್ಟಪಡಿಸುವ ಉದ್ಯೋಗದ ಪ್ರಸ್ತಾಪ ಕಡ್ಡಾಯವಾಗಿ ನೀಡುವುದು, ಏಜೆನ್ಸಿಯ ಪ್ರತಿ ಹೊಸ ಶಾಖೆಯನ್ನು ಕಡ್ಡಾಯವಾಗಿ ಒಮಾನ್ ಪ್ರಜೆಗಳೇ ನಿರ್ವಹಿಸುವುದು ಮೊದಲಾದ ಕಠಿಣ ನಿಯಮಗಳನ್ನು ಜಾರಿಗೆ ತರಲಿದೆ.

ನಿಯಮಗಳನ್ನು ಮೀರುವ ಏಜೆನ್ಸಿಗಳಿಗೆ ಭಾರೀ ದಂಡ ಹಾಗೂ ಪರವಾನಗಿ ರದ್ದುಪಡಿಸುವ ಕಠಿಣ ಕ್ರಮಗಳನ್ನು ಜರಗಿಸಲಾಗುತ್ತದೆ.