ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ

0
393

ರಾಮೇಶ್ವರ,ಜು. 29: ಏಳು ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಬಂಧಿಸಿದೆ. ಶ್ರೀಲಂಕಾದ ಸಮುದ್ರ ಗಡಿಯನ್ನು ಉಲ್ಲಂಘಿಸಿದ್ದಕ್ಕಾಗಿ ಇವರ ಬೋಟುಗಳನ್ನು ಕೂಡ ಶ್ರೀಲಂಕಾ ವಶಪಡಿಸಿಕೊಂಡಿದೆ. ರಾಮೇಶ್ವರದಿಂದ ಮೀನು ಹಿಡಿಯಲು ಹೋಗಿದ್ದವರನ್ನು ಕಚ್ಚಿತೀವ್ ದ್ವೀಪದ ಸಮೀಪದಲ್ಲಿ ಶ್ರೀಲಂಕಾ ನೌಕಾಸೇನೆಯ ಪಟ್ರೋಲಿಂಗ್‌ ವಿಭಾಗ ಬಂಧಿಸಿತು. ಬಂಧಿಸಲಾದ ಮೀನುಗಾರರನ್ನು ಮಾನ್ನಾರ್ ಸೇನಾ ಕೇಂದ್ರಕ್ಕೆ ಕರೆದುಕೊಂಡು ಹೋಗಲಿದೆ. ಜುಲೈ 25ರಂದು ಕೂಡಾ ಅಂತಾರಾಷ್ಟ್ರೀಯ ಸಮುದ್ರ ಗಡಿ ಉಲ್ಲಂಘಿಸಿದ್ದಕ್ಕಾಗಿ ಭಾರತದ ಮೀನುಗಾರರನ್ನು ಶ್ರೀಲಂಕಾದ ಸೇನೆ ಬಂಧಿಸಿತ್ತು.