ಸನ್ಮಾರ್ಗ ವಾರ್ತೆ
ರಿಯಾದ್: ಸೆಪ್ಟೆಂಬರ್ ತಿಂಗಳಲ್ಲಿ ಬಾಡಿಗೆ ಮತ್ತು ದಿನನಿತ್ಯದ ಖರ್ಚು ಹೆಚ್ಚಿದ್ದರಿಂದ, ಸ್ವಲ್ಪಮಟ್ಟಿಗೆ ದುಬಾರಿ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸೌದಿಯ ವಾರ್ಷಿಕ ಹಣದುಬ್ಬರ ದರವು ಶೇಕಡಾ 1.9 ಕ್ಕೆ ಏರಿಕೆಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಏರಿಕೆಗೆ ಮುಖ್ಯವಾಗಿ ಬಳಕೆದಾರರ ದರಸೂಚಿ 105.8ಕ್ಕೆ ತಲುಪಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದೇ ಸಮಯದಲ್ಲಿ 103.8ರಷ್ಟಿತ್ತು.
ಮನೆ ಮತ್ತು ಆವಶ್ಯಕ ವಸ್ತುಗಳ ದರಗಳ ಜೊತೆಗೆ ವಸತಿ ನೀರು, ವಿದ್ಯುತ್ ಮತ್ತು ಅಡಿಗೆ ಅನಿಲದ ಬೆಲೆಯಲ್ಲಿ ಶೇಕಡಾ 3.6 ರಿಂದ 3.9 ರಷ್ಟು ಏರಿಕೆಯಾಗಿದೆ. ಹಣದುಬ್ಬರ ಹೆಚ್ಚಾಗಲು ಈ ಕ್ಷೇತ್ರವೇ ಪ್ರಮುಖ ಕಾರಣವಾಗಿದೆ.
ಸಾರಿಗೆ ವೆಚ್ಚದಲ್ಲಿ ಶೇಕಡಾ 2.3 ರಷ್ಟು ಏರಿಕೆಯಾಗಿದೆ. ಆಹಾರ ಪದಾರ್ಥಗಳು ಮತ್ತು ಪಾನೀಯಗಳ ಬೆಲೆಯಲ್ಲಿ ಶೇಕಡಾ 1.4 ರಷ್ಟು ಹೆಚ್ಚಳವಾಗಿದೆ.
ವರದಿಗಳ ಪ್ರಕಾರ ದೇಶದ ವಿವಿಧ ಪ್ರಾಂತಗಳಲ್ಲಿ ಹಣದುಬ್ಬರದ ವ್ಯತ್ಯಾಸಗಳು ಕಂಡುಬಂದಿದೆ. ಪೂರ್ವ ಪ್ರಾಂತ್ಯ, ಅಸೀರ್ ಮೊದಲಾದ ಜಾಗಗಳಲ್ಲಿ ವಾರ್ಷಿಕ ಹಣದುಬ್ಬರ ಹೆಚ್ಚಿದೆ. ಕೆಲವು ಪ್ರದೇಶಗಳಲ್ಲಿ ಬೆಲೆಯೇರಿಕೆಯಲ್ಲಿ ಇಳಿಕೆಯೂ ಕಂಡುಬಂದಿದೆ.
ಬಟ್ಟೆ, ಪಾದರಕ್ಷೆಗಳು ಮತ್ತು ಗೃಹೋಪಯೋಗಿ ಉಪಕರಣಗಳಂತಹ ಕೆಲವು ವಿಭಾಗಗಳಲ್ಲಿ ಬೆಲೆಗಳು ಸ್ವಲ್ಪ ಇಳಿಕೆಯಾಗಿದ್ದರೂ, ಮನೆ/ಬಾಡಿಗೆ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಒಟ್ಟು ಹಣದುಬ್ಬರ ದರವು ಶೇಕಡಾ 1.9 ಕ್ಕೆ ತಲುಪಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಗೆ ಹೋಲಿಸಿದರೆ ಸೌದಿಯಲ್ಲಿ ಹಣದುಬ್ಬರ ನಿಯಂತ್ರಣದಲ್ಲಿದೆ, ಆದರೂ ಈಗಿನ ಪರಿಸ್ಥಿತಿ ಸಾಮಾನ್ಯ ಜನರ ದೈನಂದಿನ ಜೀವನ ಖರ್ಚು ವೆಚ್ಚದ ಮೇಲೆ ದುಷ್ಪರಿಣಾಮ ಬೀರುತ್ತಿದೆ.












