ಸನ್ಮಾರ್ಗ ವಾರ್ತೆ
ಚೆನ್ನೈ: ಕೇಂದ್ರ ಸರಕಾರವನ್ನು ಬಿಜೆಪಿಯ ತಮಿಳುನಾಡು ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಮಲೈ ತೀವ್ರವಾಗಿ ತರಾಟೆಗೆ ಎತ್ತಿಕೊಂಡಿದ್ದಾರೆ. ಪ್ರಮುಖ ಐದು ಪ್ರಶ್ನೆಗಳನ್ನು ಅವರು ಕೇಂದ್ರ ಸರಕಾರದ ಮುಂದಿಟ್ಟು ಉತ್ತರವನ್ನು ಬಯಸಿದ್ದಾರೆ.
ಸರ್ಕಾರದ ಕ್ರಮಗಳನ್ನು ಪ್ರಶ್ನಿಸುವವರನ್ನು ಮತ್ತು ಅಸಮಾಧಾನ ವ್ಯಕ್ತಪಡಿಸುವವರನ್ನು ತಕ್ಷಣವೇ ‘ವಿದೇಶಿ ಏಜೆಂಟರು’ ಅಥವಾ ‘ದೇಶವಿರೋಧಿಗಳು’ ಎಂದು ಮುದ್ರೆ ಒತ್ತುವ ಪ್ರವೃತ್ತಿಯನ್ನು ಅಣ್ಣಾಮಲೈ ತೀವ್ರವಾಗಿ ಖಂಡಿಸಿದರು.
ಪ್ರತಿಭಟನೆಗಳು ಹಾಗೂ ಮುಂತಾದ ಪರಿಸ್ಥಿತಿಗಳನ್ನು ನಿರ್ವಹಿಸಿದ ರೀತಿಯನ್ನು ಮತ್ತು ಪ್ರಶ್ನೆಗಳನ್ನು ಎತ್ತುವವರ ಮೇಲಿನ ಹಸ್ತಕ್ಷೇಪಗಳನ್ನು ಅವರು ಪ್ರಶ್ನಿಸಿದರು.
ಸಿಜೆಪಿ ನಾಯಕರನ್ನು ಜೈಲಿಗಟ್ಟಿದ್ದು ಮತ್ತು ಅವರ ವಿರುದ್ಧ ಪೊಲೀಸ್ ಕಾರ್ಯಾಚರಣೆ ಬಿಜೆಪಿಯ ಜನಪ್ರಿಯತೆ ಹೆಚ್ಚಿಸುವುದಕ್ಕಾಗಿದೆ. ಜಂತರ್ ಮಂತರ್ನ ಪ್ರತಿಭಟನೆ ಸ್ಥಳ ಸ್ಥಾನಮಾನ ರದ್ದುಪಡಿಸಿದ್ದು, ಸ್ಪೆಷಲ್ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಆಗಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳು ಅಧಿಕಾರ ವ್ಯಾಪ್ತಿ, ಅಕ್ಟೋಬರ್ 13ಕ್ಕೆ ಸಿಜೆಪಿ ಕಾರ್ಯಕರ್ತರ ಜಾಮೀನು ಅರ್ಜಿ ಪರಿಗಣಿಸಿದಾಗ ಆಗಿರುವ ನಡವಳಿಕೆಗಳು, ಎಂಟು ಜಾಮೀನುದಾರರನ್ನು ತಿರಸ್ಕರಿಸಿದ್ದು, ನೀಟ್ ಪ್ರತಿಭಟನೆಯ ವೇಳೆ ಪೆಲಟ್ ಗನ್ ಬಳಸಿದ ಆರೋಪಗಳ ಕುರಿತಂತೆ ಅಣ್ಣಾಮಲೈ ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.
ಗೃಹ ಸಚಿವಾಲಯದ (MHA) ನಿಯಂತ್ರಣದಲ್ಲಿರುವ FCRA ವ್ಯವಸ್ಥೆಗಳು ಮತ್ತು ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ದೇಶದ ಭದ್ರತೆಯನ್ನು ಮೇಲ್ವಿಚಾರಣೆ ಮಾಡಲು ಸಿದ್ಧವಿರುವಾಗ, ಸರಕಾರದ ವಿರುದ್ಧ ಯಾವುದೇ ರೀತಿಯ ಪ್ರಶ್ನೆಗಳು ಎದುರಾದಾಗ ಅವುಗಳನ್ನು ಸರಳವಾಗಿ ‘ವಿದೇಶಿ ಹುನ್ನಾರ’ (Foreign Conspiracy) ಎಂದು ತಳ್ಳಿಹಾಕುವುದರ ಹಿಂದಿನ ತರ್ಕವನ್ನು ಅವರು ಪ್ರಶ್ನಿಸಿದರು.












