ತನ್ನ ಕುಟುಂಬವನ್ನು ಮುಗಿಸಲು ಮುಖ್ಯಮಂತ್ರಿ 600 ಕೋಟಿ ಸುಪಾರಿ ಕೊಟ್ಟಿದ್ದಾರೆ: ಎಚ್‌. ಡಿ. ಕುಮಾರಸ್ವಾಮಿ

0
270

ಸನ್ಮಾರ್ಗ ವಾರ್ತೆ

ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜನತಾ ದಳ (ಜಾತ್ಯತೀತ) ಸಂಸ್ಥಾಪಕ ಎಚ್.ಡಿ. ದೇವೇಗೌಡ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 600 ಕೋಟಿ ರೂಪಾಯಿ ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಹಾಸನ ಜಿಲ್ಲೆಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಸಂದರ್ಶಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತಾಡುತ್ತ ತನ್ನ ಕುಟುಂಬವನ್ನು ರಾಜಕೀಯವಾಗಿ ನಾಶಪಡಿಸಲು ಮುಖ್ಯಮಂತ್ರಿ ಹಲವು ಸಲ ಸಂಚು ನಡೆಸಿದ್ದಾರೆ. ಇದರಲ್ಲಿ 600 ಕೋಟಿ ರೂ. ಕೊಟೇಶನ್ (ಸುಪಾರಿ) ವ್ಯವಹಾರ ಕೂಡ ಒಂದು ಎಂದು ಕುಮಾರ ಸ್ವಾಮಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಂಬಂಧಿಸಿದ ಸ್ಟಿಂಗ್ ಆಪರೇಷನ್ ವಿವಾದ ಹೊಸ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು ಇದರ ಬೆನ್ನಿಗೆ ಮಾನಹಾನಿಕಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ ಬಂದಿತ್ತು. ಇದರ ವಿರುದ್ಧ ಸಿದ್ದರಾಮಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ ಮತ್ತು ಸಂಬಂಧ ಪಟ್ಟ ದೃಶ್ಯ ಪ್ರಸಾರ ಮಾಡುವುದು ತಡೆಯಬೇಕೆಂದು ಕೋರ್ಟಿನ ಮೊರೆ ಹೋಗಿದ್ದಾರೆ.

ಸಿದ್ದರಾಮ್ಯರ ವಿರುದ್ಧ ಸ್ಟಿಂಗ್‌ನಲ್ಲಿ ಕಾಂಗ್ರೆಸ್ಸಿನ ಕೆಲವರು ಶಾಮೀಲಾಗಿದ್ದಾರೆ ಎಂದು ಸಿದ್ದರಾಮ್ಯ ಅವರ ಪುತ್ರ ಸಚಿವ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದರು. ಈ ಸ್ಟಿಂಗ್‌ನಲ್ಲಿ ಓರ್ವ ಮಹಿಳಾ ನಾಯಕಿ ಕೂಡ ಇದ್ದಾರೆ ಎನ್ನಲಾಗಿದೆ. ಇದೇವೇಳೆ ಕುಮಾರ ಸ್ವಾಮಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೆಷನ್ ಮಾಡಿದವರನ್ನು ಪತ್ತೆಹಚ್ಚುವ ಬದಲು ಜಾನತಾದಳ ಕಾರ್ಯಕರ್ತರ ವಿರುದ್ಧ ಪೊಲೀಸರು ಗುರಿಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣದ ನಿಜವಾದ ಅಪರಾಧಿಗಳನ್ನುಪತ್ತೆ ಹಚ್ಚಬೇಕು ಮತ್ತು ನಿರಪರಾಧಿ ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡುವುದು ಕೊನೆಗೊಳಿಸಬೇಕೆಂದು ಕುಮಾರ ಸ್ವಾಮಿ ಆಗ್ರಹಿಸಿದ್ದಾರೆ.

ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರವು ಕರ್ನಾಟಕ ರಾಜಕೀಯದಲ್ಲಿ ಭಾರೀ ಅಸ್ಥಿರತೆ ಮತ್ತು ಹೊಸ ವಿವಾದಗಳಿಗೆ ದಾರಿ ಮಾಡಿಕೊಟ್ಟಿದೆ. ಸ್ಟಿಂಗ್ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ತನಿಖೆಗಳಲ್ಲಿ ಸರ್ಕಾರ ಪಕ್ಷಪಾತದಿಂದ ವರ್ತಿಸುತ್ತಿದೆ ಎಂದೂ ಕುಮಾರಸ್ವಾಮಿ ಆರೋಪಿಸಿದ್ದಾರೆ.