ಸನ್ಮಾರ್ಗ ವಾರ್ತೆ
ಹೌತಿಗಳು ಸೌದಿ ಅರೇಬಿಯಾದ ಮೇಲೆ ದಾಳಿ ನಡೆಸ್ತಾ ಇದ್ದರೂ ಯುಎಇ ನಾಗರಿಕರು ವಿಮಾನ ಮತ್ತು ರಸ್ತೆಯ ಮೂಲಕ ಉಮ್ರ ಮಾಡುವುದಕ್ಕಾಗಿ ಸೌದಿ ಅರೇಬಿಯಾ ಕ್ಕೆ ಪ್ರಯಾಣಿಸಬಹುದು ಎಂದು ತಿಳಿಸಲಾಗಿದೆ.
ಜಿದ್ದ ಮತ್ತು ಮದೀನಾವನ್ನು ಈಗ ಯಾತ್ರಿಕರಿಗೆ ಮುಖ್ಯ ದ್ವಾರಗಳಾಗಿ ಬಳಸಲಾಗುತ್ತಿದೆ. ಯುಎಇ ಯ ಜನರು ಉಮ್ರ ಮಾಡುವುದಕ್ಕಾಗಿ ವಿಮಾನ ಮತ್ತು ಬಸ್ ಪ್ಯಾಕೇಜ್ ಗಳನ್ನು ಬುಕ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಯು ಏ ಯಿಂದ ಉಮ್ರಾ ಪ್ಯಾಕೇಜ್ ಗಳಿಗಾಗಿ ಸೌದಿಯ ಮತ್ತು ಫ್ಲೈ ದುಬೈ ಪ್ರಮುಖ ವಿಮಾನಯಾನ ಸಂಸ್ಥೆಗಳನ್ನು ಬಳಸಲಾಗುತ್ತಿದೆ ಎಂದು ನಿರ್ವಾಹಕರು ತಿಳಿಸಿದ್ದಾರೆ. ಸೌದಿಯಲ್ಲಿ ಇಳಿದ ಬಳಿಕ ಪ್ರಯಾಣಿಕರು ಮದೀನಾ ಮತ್ತು ಮಕ್ಕ ನಡುವೆ ಬಸ್ ಅಥವಾ ರೈಲಿನ ಮೂಲಕ ಪ್ರಯಾಣಿಸಬಹುದು ಅಥವಾ ಮಕ್ಕಾ ಗೆ ಹೋಗುವ ಮೊದಲು ಮದೀನಾದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಬಹುದು ಎಂದು ತಿಳಿಸಲಾಗಿದೆ.
ಇಳಿದ ನಂತರ ಪ್ರಯಾಣಿಕರು ಮದೀನಾ ಮತ್ತು ಮಕ್ಕಳ ನಡುವೆ ಬಸ್ ಅಥವಾ ರೈಲಿನ ಮೂಲಕ ಪ್ರಯಾಣಿಸಬಹುದು ಎಂದು ತಿಳಿಸಲಾಗಿದೆ.












