ಇಸ್ರೇಲ್ ಧ್ವಜವನ್ನು ನೆಲಕ್ಕೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಕೊಲಂಬಿಯಾ ರಾಪರ್

0
193

ಸನ್ಮಾರ್ಗ ವಾರ್ತೆ

ಕೊಲಂಬಿಯಾದ ಮಹಿಳಾ ರ್ಯಾಪರ್ ಚಲೋ ಹೋಪ್ ಅವರು ಕಾರ್ಯಕ್ರಮ ಒಂದರಲ್ಲಿ ಇಸ್ರೇಲಿ ಧ್ವಜವನ್ನು ನೆಲಕ್ಕೆ ಹಾಕಿ ತುಳಿದು ತನ್ನ ಆಕ್ರೋಶವನ್ನು ವ್ಯಕ್ತಪಡಿಸುವ ಘಟನೆ ನಡೆದಿದೆ. ಮಾತ್ರ ಅಲ್ಲ ಫೆಲಸ್ತೀನ್ ಸ್ವತಂತ್ರವಾಗಲಿ ಎಂದು ಅವರು ಘೋಷಣೆ ಕೂಗಿದ್ದಾರೆ.

ಕೊಲಂಬಿಯಾದ ಬೊಗೋಟಾ ದಲ್ಲಿ ನಡೆದ ಹಿಪ್ ಹೋಪ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಅವರು ಈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಅವರು ಇಸ್ರೇಲ್ ಧ್ವಜವನ್ನು ಸ್ಟೇಜಿನ ಮೇಲೆ ಹಾಕಿ ಅದರ ಮೇಲೆ ತುಳಿಯುತ್ತಾರೆ . ಅದರ ಮೇಲೆ ಕಾಲಿಟ್ಟು ಸ್ವತಂತ್ರ ಫೆಲೆಸ್ತೀನ್ ಎಂದು ಘೋಷಣೆ ಕೂಗುತ್ತಾರೆ . ತುರ್ಕಿಶ್ ಮೀಡಿಯಾ, ವರ್ಲ್ಡ್ ಇಸ್ರೇಲ್ ನ್ಯೂಸ್, royal ನ್ಯೂಸ್ ಇತ್ಯಾದಿಗಳು ಈ ಘಟನೆಯನ್ನು ದೃಢೀಕರಿಸಿವೆ.

ಚಲೋ ಹೋಪ್ ಅವರ ಹೊಸ ಆಲ್ಬಮ್ ಅನಟೋಮಿಯ ದ ಪ್ರಚಾರಕ್ಕೆ ಸಂಬಂಧಿಸಿ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದ ಮಧ್ಯೆ ಕೆಲವರು ಇಸ್ರೇಲ್ ಧ್ವಜವನ್ನು ವೇದಿಕೆಗೆ ತಂದು ಅವರ ಕೈಯಲ್ಲಿ ಕೊಡುತ್ತಾರೆ. ಅವರು ಆ ಧ್ವಜವನ್ನು ನೆಲಕ್ಕೆ ಹಾಕಿ ತುಳಿಯುತ್ತಾರೆ. ಆ ಬಳಿಕ ಅದನ್ನು ಕಿಕ್ ಮಾಡುತ್ತಾರೆ. ಪ್ರೇಕ್ಷಕರು ಇದನ್ನು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾರೆ.

ಇಸ್ರೇಲ್ ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಈ ನಡುವೆ ಈ ಘಟನೆ ನಡೆದಿದೆ ಮತ್ತು ಇಸ್ರೇಲ್ ವಿರೋಧಿ ಭಾವನೆ ಜಾಗತಿಕವಾಗಿ ಹೆಚ್ಚಾಗುತ್ತಿದೆ ಅನ್ನುವುದನ್ನು ಸೂಚಿಸುತ್ತಿದೆ.