ಸನ್ಮಾರ್ಗ ವಾರ್ತೆ
ಕುವೈತಿಗೆ ಆಗಮಿಸುವ ವಲಸಿಗರಿಗೆ ಕೆಲವು ಎಚ್ಚರಿಕೆಗಳನ್ನು ನೀಡಲಾಗಿದೆ. ನಿಷೇಧಿತ ಆಹಾರ ಪದಾರ್ಥಗಳು, ನಿಯಂತ್ರಿತ ಔಷಧಗಳು ಅಥವಾ ಇತರ ನಿರ್ಬಂಧಿತ ವಸ್ತುಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ
ಕುವೈತಿನಲ್ಲಿ ಕಟ್ಟುನಿಟ್ಟಾದ ಕಸ್ಟಮ್ಸ್ ಕಾನೂನುಗಳಿವೆ. ಈ ಕಾನೂನುಗಳನ್ನು ಉಲ್ಲಂಘಿಸುವವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಇತರ ದೇಶಗಳಲ್ಲಿ ಕಾನೂನು ಬದ್ಧವಾಗಿರುವ ಅನೇಕ ವಸ್ತುಗಳನ್ನು ಕುವೈತಿಯಲ್ಲಿ ನಿಷೇಧಿಸಲಾಗಿದೆ. ಆದ್ದರಿಂದ ಪ್ರಯಾಣಿಸುವ ಮೊದಲು ಈ ಬಗ್ಗೆ ಎಚ್ಚರಿಕೆ ಇರಲಿ ಎಂದು ತಿಳಿಸಲಾಗಿದೆ.
ಗಸಗಸೆ ಬೀಜಗಳು, ಹಂದಿಮಾಂಸ ಅಮಲು ಪಾನಿಯಗಳು, ಮಾಟ ಮಂತ್ರದ ಉಪಕರಣಗಳನ್ನು ಕುವೈತ್ನಲ್ಲಿ ನಿಷೇಧಿಸಲಾಗಿದೆ.
ಔಷಧಿಗಳನ್ನು ತರುವಾಗ ಜಾಗರೂಕರಾಗಿರಬೇಕು. ಸೈಕೋ ಟ್ರೋಪಿಕ್ ಔಷಧಗಳನ್ನು ತರುವುದಕ್ಕೆ ಕಟ್ಟುನಿಟಿನ ನಿರ್ಭಂಧಗಳಿವೆ . ರೋಗಿಗಳು 15 ದಿನಗಳ ಚಿಕಿತ್ಸೆಯವರೆಗೆ ಕೆಲವು ಮಾದಕ ದ್ರವ್ಯಗಳನ್ನು ಮತ್ತು ಒಂದು ತಿಂಗಳ ಚಿಕಿತ್ಸೆಯವರೆಗೆ ಸೈಕೋ ಟ್ರೋಪಿಕ್ ಔಷಧಿಗಳನ್ನು ಮಾತ್ರ ತರಬಹುದು. ಅವರು ಅಗತ್ಯ ಪೂರ್ವಾನುಮತಿ ಪಡೆದಿರಬೇಕು. ವೈದ್ಯಕೀಯ ವರದಿಗಳು ಅಥವಾ ವೈದ್ಯರ ಪ್ರಿಸ್ಕ್ರಿಪ್ಷನ್ ಗಳನ್ನು ಕೊಂಡೊಯ್ಯಬೇಕು. ಔಷಧಿಗಳು ಅವುಗಳ ಮೂಲ ಪ್ಯಾಕೇಜಿಂಗ್ ನಲ್ಲಿ ಇರಬೇಕು. ಕುವೈಟ್ ಪ್ರವೇಶಿಸುವವರು ಕಷ್ಟಮ್ಸ್ ಗೆ ಯಾವುದೇ ವಿದೇಶಿ ಕರೆನ್ಸಿ ಅಥವಾ 3000 ಕುವೈತ್ ದಿನಾರ್ಗಳಿಗೆ ಸಮನಾದ ಮೊತ್ತ ಇದ್ದರೆ ಅದನ್ನು ಘೋಷಿಸಬೇಕು.












