ಸನ್ಮಾರ್ಗ ವಾರ್ತೆ
ಕಳೆದ ವಾರ ಕೇರಳದ ಮೊಹಮ್ಮದ್ ಎಂಬವರು ಅಕ್ಟೋಬರ್ 23ರಂದು ಅಬುದಾಬಿಯಿಂದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಾಗ ಸಮಸ್ಯೆ ಉಂಟಾಯಿತು. ಹೊಸ ಫೋನ್ ಗೆ ಕಷ್ಟಮ್ಸ್ ಸುಂಕದ ಬೇಡಿಕೆಯೊಂದಿಗೆ ಪ್ರಾರಂಭವಾದ ವಿವಾದ ಈಗ ಕಾನೂನು ಹೋರಾಟಕ್ಕೆ ಕಾರಣವಾಗಿದೆ.
ಅವರ ಐಫೋನ್ ಗೆ ಇಪ್ಪತ್ತು ಸಾವಿರದಿಂದ ಮೂವತ್ತು ಸಾವಿರದವರೆಗೆ ತೆರಿಗೆ ಪಾವತಿಸಲು ಕೊಚ್ಚಿ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದರು. ಆದರೆ ಅವರು ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆಗೆ ಇಳಿದರು. ಆಬಳಿಕ ಅಧಿಕಾರಿಗಳ ದೂರಿನ ಮೇರೆಗೆ ಅವರ ಮೇಲೆ ಪೊಲೀಸ್ ಪ್ರಕರಣ ದಾಖಲಾಯಿತು.
ಆದರೆ 2026 ಫೆಬ್ರವರಿ ಎರಡರಂದು ಜಾರಿಗೆ ಬಂದಿರುವ ಹೊಸ ಬ್ಯಾಗೇಜ್ ನಿಯಮಗಳ ಬಗ್ಗೆ ವಲಸಿಗರಿಗೆ ಹೆಚ್ಚು ಗೊತ್ತಿಲ್ಲ. ವಿಮಾನ ಅಥವಾ ಹಡಗಿನ ಮೂಲಕ ಭಾರತಕ್ಕೆ ಆಗಮಿಸುವ ನಿವಾಸಿಗಳು ತಮ್ಮ ವಸ್ತುಗಳಿಗೆ 75,000 ವರೆಗಿನ ಸಾಮಾನ್ಯ ತೆರಿಗೆ ವಿನಾಯಿತಿಯನ್ನು ಹೊಂದಿರುತ್ತಾರೆ . ಆದರೆ ಇದು ಮೊಬೈಲ್ ಫೋನ್ ಗಳಿಗೆ ಅನ್ವಯಿಸುವುದಿಲ್ಲ. ದುಬೈಯಿಂದ ಈ ಫೋನ್ಗಳನ್ನು ಊರಿಗೆ ಹೆಚ್ಚಿನ ಪ್ರಮಾಣದಲ್ಲಿ ತರುವುದಕ್ಕೆ ಕಾರಣ ಏನಂದ್ರೆ ಅವುಗಳ ಬೆಲೆಯಲ್ಲಿರುವ ವ್ಯತ್ಯಾಸ. ದುಬೈಯಲ್ಲಿ ಭಾರತಕ್ಕಿಂತ 30,000 ದಿಂದ 33 ಸಾವಿರದ ವರೆಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ.
ಗಲ್ಫ್ ನಿಂದ ಫೋನ್ ಸಹಿತ ದುಬಾರಿ ವಸ್ತುಗಳನ್ನು ತರುವ ಮೊದಲು ಕಸ್ಟಮ್ಸ್ ನಿಯಮಗಳ ಬಗ್ಗೆ ತಿಳಿದಿರುವುದು ಅಗತ್ಯ. ಸಣ್ಣ ನಿರ್ಲಕ್ಷವೂ ವಿಮಾನ ನಿಲ್ದಾಣದಲ್ಲಿ ವಿವಾದಕ್ಕೆ ಮತ್ತು ಬಾರಿ ಆರ್ಥಿಕ ಹೊರಗೆ ಕಾರಣವಾಗಬಹುದು.












