ಇಸ್ರೇಲ್ ವಿರುದ್ಧ ಜರ್ಮನಿಯಲ್ಲಿ ಬೃಹತ್ ಪ್ರತಿಭಟನೆ

0
12

ಸನ್ಮಾರ್ಗ ವಾರ್ತೆ

ಇಸ್ರೇಲ್‌ಗೆ ಶಸ್ತ್ರಾಸ್ತ್ರ ಮಾರಾಟವನ್ನು ವಿರೋಧಿಸಿ ಮತ್ತು ಫೆಲಿಸ್ತೀನ್‌ಗೆ ಬೆಂಬಲವನ್ನು ವ್ಯಕ್ತಪಡಿಸಿ ಜರ್ಮನಿಯಲ್ಲಿ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ.

ಓಸ್ಲೊ ಸ್ಟ್ರೀಟ್‌ನಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ವೆಡ್ಡಿಂಗ್ ಮೆಟ್ರೋ ನಿಲ್ದಾಣದ ಕಡೆಗೆ ಸಾಗಿದೆ. ಫೆಲೆಸ್ತೀನಿಯರ ಭೂಮಿಯನ್ನು ಇಸ್ರೇಲ್ ಅತಿಕ್ರಮಿಸಿರುವುದರ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ.

ಫೆಲೆಸ್ತೀನಿ ಧ್ವಜಗಳನ್ನು ಬೀಸುತ್ತಾ ಸಾಗಿದ ಪ್ರತಿಭಟನಾಕಾರರು ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.