ಹೃದಯ ತಟ್ಟಿದ ಇರಾಕಿ ಬಾಲಕನ ವಿಡಿಯೋ

0
32

ಸನ್ಮಾರ್ಗ ವಾರ್ತೆ

ಅನ್ಬಾರ್ ಪ್ರಾಂತ್ಯದಲ್ಲಿ ಮಳೆಯಿಂದ ನೀರು ತುಂಬಿದ ಕೆಸರುಮಯ ರಸ್ತೆಯ ಮೂಲಕ ತನ್ನ ಪುಟ್ಟ ತಂಗಿಯನ್ನು ಎತ್ತಿಕೊಂಡು ಚಳಿಯ ವಾತಾವರಣದಿಂದ ರಕ್ಷಿಸುತ್ತಿರುವ ಇರಾಕಿನ ಹುಡುಗನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಇರಾಕಿನ ಛಾಯಾಗ್ರಹಕ ಉಸ್ಮಾನ್ ಕಾಮಿಸ್ ಹಿಲಾಲ್ ಸೆರೆಹಿಡಿದಿದ್ದಾರೆ. ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಬಾಲಕ ಮಳೆ ನೀರಿನ ನಡುವೆ ಎಚ್ಚರಿಕೆಯಿಂದ ನಡೆದುಕೊಂಡು ಹೋಗುವುದು ಮತ್ತು ತನ್ನ ಪುಟ್ಟ ತಂಗಿಯನ್ನು ಸುರಕ್ಷಿತವಾಗಿಡಲು ತನ್ನ ತೋಳುಗಳಲ್ಲಿ ಬಿಗಿಯಾಗಿ ಹಿಡಿದುಕೊಂಡು ಕೆಸರಿನ ರಸ್ತೆಯಲ್ಲಿ ನಡೆಯುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಪಡೆಯಿತು ಮತ್ತು ಭಾರಿ ಪ್ರಶಂಸೆಗೂ ಪಾತ್ರವಾಯಿತು.