ಮತದಾರರಿಂದ ಸೆಟ್ಲ್ ಆದ ಝಿಯೊನಿಸಂ ರೇಸಿಸಂ ಸ್ಕೋರ್‌ಗಳು 

0
35

✍️ ಅರಫಾ ಮಂಚಿ

ಹೌದು, ಇಸ್ರೇಲಿನ ಚುನಾವಣೆಯಲ್ಲಿ ಜನ ಬೆಂಜಮಿನ್ ನೆತನ್ಯಾಹುರನ್ನು ಅಧಿಕಾರಕ್ಕೆ ತರಲಿಲ್ಲ. ಅವರ ಲಿಕುಡ್ ಪಾರ್ಟಿ ಗೆದ್ದದ್ದು ಕೇವಲ 23 ಸೀಟುಗಳು. ಸಖ್ಯ ಎಲ್ಲವೂ ಸೇರಿಸಿದರೆ 53 ಸೀಟು. ಕೇವಲ ಬಹುಮತಕ್ಕೆ 61 ಸೀಟು ಬೇಕು. ಚುನಾವಣೆಯ ನಡುವೆಯೇ ಇರಾನ್‌ಗೆ ದಾಳಿ ಮಾಡಲು ಹೊರಟಿದ್ದರು. ಐಡಿಎಫ್ ಮುಖ್ಯಸ್ಥ ಇಯಾಲ್ ಝಮೀರ್ ನಿರಾಕರಿಸಿದ್ದರು. ಲಿಖಿತ ಆದೇಶ ಬೇಕು. ಬಾಯ್ಮಾತಿನಲ್ಲಿ ಹೇಳಿದರೆ ಆಗುವುದಿಲ್ಲ. ಬಹುಶಃ ಸೋಲುವುದು ಮತ್ತು ಅಧಿಕಾರ ತನ್ನ ಕೈತಪ್ಪುವುದು ನೆತನ್ಯಾಹುಗೆ ಖಚಿತ ಇತ್ತು. ದೇಶವನ್ನು ಯುದ್ಧಕ್ಕೆ ದೂಡಿ ಹಾಕಿ ತನ್ನ ಅಧಿಕಾರವನ್ನು ರಕ್ಷಿಸುವ ಪ್ಲಾನ್ ಝಮೀರ್‌ರಿಂದ ವಿಫಲವಾಯಿತು. ನೆತನ್ಯಾಹು ಹುಚ್ಚೆದ್ದಂತೆ ಪವರ್ ತನ್ನಲ್ಲೇ ಉಳಿಸುವ ಜಿಗಿತದಲ್ಲಿದ್ದಾರೆ. 

ಸಂದರ್ಭಗಳು ಪರಿಸ್ಥಿತಿಯನ್ನು ರೂಪಿಸುತ್ತದೆ ಎಂಬ ಮಾತಿನಂತಿದೆ ನೆತನ್ಯಾಹು ಸ್ಥಿತಿ. ಚುನಾವಣೆಯಲ್ಲಿ ಯಾವುದೇ ಪರದಾಟ ಇಲ್ಲದೆ ಜನ ಮತ ಹಾಕಿದರು. ಈ ಸಲದ ಕ್ನೆಸೆಟ್ ಚುನಾವಣೆ ಶಾಂತಿಯುತವಾಗಿ ನಡೆದಿದೆ ಎಂದು ಚುನಾವಣಾ ಆಯೋಗ ಸರ್ಟಿಫಿಕೆಟ್ ಕೊಟ್ಟಿದೆ. ಪರಿಣಾಮವಾಗಿ ಲಿಕುಡ್ ಪಾರ್ಟಿ ನೆಲಕಚ್ಚಿತು. ವಿರೋಧ ಪಕ್ಷದ ಗಾಡಿ ಐಸನ್‌ಕೋಟ್‌ರ ಸಖ್ಯ 48 ಸೀಟು ಗೆದ್ದು ಅಧಿಕಾರಕ್ಕೆ ಹತ್ತಿರವೂ ಮತ್ತು ಇಸ್ರೇಲಿನ ಅರಬ್ ಮುಸ್ಲಿಮರ ಪಾರ್ಟಿ 19 ಸೀಟು ಪಡೆಯಿತು. ಇಸ್ರೇಲಿನ ಝೀಯೊನಿಸ್ಟ್ ಯುದ್ಧಕೋರ ರಾಜಕೀಯಾಟವನ್ನು ದೊಡ್ಡ ಜನ ಸಮೂಹ ತಿರಸ್ಕರಿಸಿರುವುದನ್ನು ಫಲಿತಾಂಶ ಹೇಳುತ್ತಿದೆ. ಈ ಸಲದ ಇಸ್ರೇಲಿನ ಚುನಾವಣೆಯನ್ನು ಜಗತ್ತಿನಾದ್ಯಂತ ರಾಢಿಯೆಬ್ಬಿಸುವ ಝಿಯೊನಿಸ್ಟ್ ಲಾಬಿಯ ಹಿನ್ನಡೆಯೆಂದು ವಿಶ್ಲೇಷಕರು ವ್ಯಾಖ್ಯಾನಿಸಿದ್ದಾರೆ. ಝಿಯೊನಿಸಂ ಅನ್ನು ಜನ ತಿರಸ್ಕರಿಸುತ್ತಿದ್ದಾರೆ ಅಥವಾ ತಿರಸ್ಕರಿಸಲು ತೊಡಗಿದ್ದಾರೆ.

ಅಮೆರಿಕನ್ನರಿಗೆ ಟ್ರಂಪ್ ಬೆದರಿಕೆ 

ಡೊನಾಲ್ಡ್ ಟ್ರಂಪ್ ನ್ಯೂಯಾರ್ಕ್ ಪೋಸ್ಟಿನ ಪೊಡ್‌ಕಾಸ್ಟ್‌ಗೆ ಮಾತಾಡುತ್ತ ತನಗೆ ಇರುವ ವೀಟೊ ಪವರ್‌ನ್ನು ಡೆಮಕ್ರಾಟರನ್ನು ಅಥವಾ ಅಮೆರಿಕದ ಸೆನೆಟ್ ಅನ್ನು ಕ್ರಾಸ್ ಮಾಡಲು ಪ್ರಯೋಗಿಸುತ್ತೇನೆಂದು ಬೆದರಿಕೆ ಒಡ್ಡಿದ್ದಾರೆ. ಅಮೆರಿಕ ಮಧ್ಯಂತರ ಚುನಾವಣೆಗೆ ಹೋಗುವ ಮೊದಲು ಈ ಪೊಡ್‌ಕಾಸ್ಟ್ ನಡೆದಿತ್ತು. ಜನ ಮತ ಹಾಕಿ ಸೆನೆಟರ್‌ಗಳನ್ನು ಗೆಲ್ಲಿಸುವುದು. ಅಂದರೆ ಟ್ರಂಪ್ ಹೇಳಿದ್ದು ಜನರು ಮತ್ತು ಅವರು ನೀಡಿದ ಆದೇಶವನ್ನು ಧಿಕ್ಕರಿಸುವೆ ಎಂದು. ತನ್ನ ಪಾರ್ಟಿ ಗೆಲ್ಲಿಸಿ ಇಲ್ಲದಿದ್ದರೆ ಪರಿಣಾಮ ಏನಾಗಬಹುದು ಎಂಬ ಬೆದರಿಕೆ ಇದಾಗಿತ್ತು. ಟ್ರಂಪ್ ಇಸ್ರೇಲಿನಲ್ಲಿ ನೆತನ್ಯಾಹುರನ್ನು ಗೆಲ್ಲಿಸಲು ವಿಫಲವಾದದ್ದು ಈಗ ಸ್ವದೇಶದಲ್ಲಿ ತನ್ನ ಪಾರ್ಟಿಯನ್ನು ಗೆಲ್ಲಿಸಲಾಗದ ದುಃಸ್ಥಿತಿ ಟ್ರಂಪ್ ಹುಚ್ಚೆದ್ದು ಕುಣಿಯುವಂತೆ ಆಗಿದೆ. 

ನೋಡಿ, ಚುನಾವಣೆ ನಡೆಯುವ ಮೊದಲು ಡೆಮಕ್ರಾಟರು ಸೆನೆಟ್‌ನಲ್ಲಿ ಬಹುಮತಕ್ಕೆ ಬಂದರೆ ಏನು ಮಾಡಬಹುದೆಂದು ರಿಸರ್ಚ್ ಮಾಡಿಸಿದ್ದರು. ವೈಟ್ ಹೌಸ್‌ನ ಉನ್ನತ ಅಧಿಕಾರಿಗಳಾದ ಸ್ಟೀಫನ್ ಮಿಲ್ಲರ್, ರಸ್ಸೆಲ್ ವಾಟ್ ರ ಹಾಗು ವೈಟ್ ಹೌಸ್ ಲೀಗಲ್ ಟೀಮ್ ಬಳಸಿ ಡೆಮಕ್ರಾಟರನ್ನು ಹೇಗೆ ಮೀರಿಸುವುದು ಮತ್ತು ತನ್ನ ಎಕ್ಸಿಕ್ಯೂಟಿವ್ ಅಧಿಕಾರ ಹೇಗೆಲ್ಲ ಉಪಯೋಗಿಸಬಹುದು. ಹೇಗೆ ತನ್ನ ಪ್ರಮುಖ ನಿರ್ಧಾರಗಳನ್ನು ಜಾರಿಗೆ ತರಬಹುದು ಎಂದು ಕಾನೂನಾತ್ಮಕ ಸಾಧ್ಯತೆಗಳನ್ನು ಪರಿಶೀಲಿಸಿದ್ದು ವರದಿಯಾಗಿತ್ತು. ಈಗ ಚುನಾವಣೆ ನಡೆದಿದ್ದು ಡೆಮಕ್ರಾಟರು 54 ಸೀಟು ಮತ್ತು ಟ್ರಂಪ್‌ರ ರಿಪಬ್ಲಿಕನ್ ಪಾರ್ಟಿ 44 ಸೀಟು ಪಡೆದಿದ್ದಾರೆ. ಟ್ರಂಪ್ 7 ಸ್ಥಾನ ಕಳೆದುಕೊಂಡಿದ್ದಾರೆ. ಸೆನೆಟ್‌ನಲ್ಲಿ ಓವರ್ ಆಲ್ ಕಂಟ್ರೋಲ್ ಡೆಮಕ್ರಾಟರಿಗೆ ಸಿಕ್ಕಿದೆ ಎಂದು ವರದಿಗಳು ತಿಳಿಸಿದೆ. ಜನ ಟ್ರಂಪ್‌ರ ವೀಟೊ ಬೆದರಿಕೆಗೆ ಬಗ್ಗಿಲ್ಲ. ಅಮೆರಿಕನ್ನರು ಯುದ್ಧವನ್ನು ಇಚ್ಛಿಸುವುದಿಲ್ಲ ಶಾಂತಿಯನ್ನು ಬಯಸುತ್ತಿದ್ದಾರೆ ಎಂದು ಚುನಾವಣೆಯ ಮೂಲಕ ಸಾಬೀತುಪಡಿಸಿದ್ದಾರೆ. ಏನಿದ್ದರೂ ಡೊನಾಲ್ಡ್ ಟ್ರಂಪ್ ಪವರ್ ಕುಗ್ಗಿದೆ, ಈ ಫಲಿತಾಂಶವನ್ನು ಹೀಗೂ ವಿಶ್ಲೇಷಿಸಬಹುದು. 

ಅಮೆರಿಕನ್ ಜನತೆ ಟ್ರಂಪ್ ಕೆದರಿದ ಇರಾನ್ ವಿರುದ್ಧ ಯುದ್ಧದ ವಿರುದ್ಧ ತೀರ್ಪು ನೀಡಿದ್ದಾರೆ. ಡೊನಾಲ್ಡ್ ಟ್ರಂಪ್ ಮತ್ತು ನೆತನ್ಯಾಹು ಪವರ್ ಯಾರ್ಯಾರನ್ನೋ ಕೊಲ್ಲುವ ಯುದ್ಧವನ್ನು ಆಧಾರಿಸಿದ್ದು ಎಂದು ಹೀಗೆ ಸಾಬೀತು ಆಗುತ್ತಿದೆ. ಝಿಯೊನಿಸಂನ ಸಾವಿಗೆ ರೇಸಿಸಂನ ಸಾವಿಗೆ ಇಸ್ರೇಲ್ ಮತ್ತು ಅಮೆರಿಕದ ವೋಟರ್ಸ್‌ ಚುನಾವಣೆ ಮೂಲಕ ಚಟ್ಟ ಕಟ್ಟುತ್ತಿರಬೇಕಾದರೆ ಅವರಿಬ್ಬರೂ ಮೈಪರಚಿಕೊಳ್ಳದೆ ಇನ್ನೇನು ಮಾಡಬಹುದು. 

ನಿಜಕ್ಕೂ ಝಿಯೊನಿಸಂ ಪತನದಂಚಿನಲ್ಲಿದೆ

ಅಮೆರಿಕದಲ್ಲಿ ಝಿಯೊನಿಸಂನ ಹಿಡಿತ ಕಳೆದುಕೊಳ್ಳುತ್ತಿದೆ ಎಂದು ಫಾರಿನ್ ಅಫೇರ್ಸ್ ಅನಲಿಸ್ಟ್ ಅಮರೇಶ್ ಮಿಶ್ರಾ ಹೇಳುತ್ತಿದ್ದಾರೆ. ಅವರ ಪ್ರಕಾರ ಇಸ್ರೇಲಿನಲ್ಲಿ ಝಿಯೊನಿಸಂ ದುರ್ಬಲಗೊಂಡು ಜುಡಾಯಿಸಂ (ಯಹೂದಿಸಂ) ಪ್ರಬಲಗೊಳ್ಳುತ್ತಿದೆ. ಅಮೆರಿಕದಲ್ಲಿ ಈಗ ಮಿಶಿಗನ್‌ನಿಂದ ಸೆನೆಟ್‌ಗೆ ಗೆದ್ದು ಬಂದ ಡಾ. ಅಬ್ದುಲ್ ಮಲಿಕ್ ಅವರನ್ನು ಗೆಲ್ಲದಂತೆ ಮಾಡಲು ಅಮೆರಿಕದ ಝಿಯೊನಿಸ್ಟ್ ಲಾಬಿ ಕೋಟ್ಯಂತರ ಹಣ ಚೆಲ್ಲಿತ್ತು. ಪ್ರಗತಿಪರ ನಿಲುವಿನ ಅವರಿಗೆ ಬ್ರದರ್‌ಹುಡ್ ಸಂಬಂಧವನ್ನು ಆರೋಪಿಸಲಾಗಿತ್ತು. ನಾನಾತರದ ಪ್ರಚಾರ ಮಾಡಲಾಯಿತು. ಅವರು ಭಯೋತ್ಪಾದಕರೊಂದಿಗೆ ಸಂಬಂಧ ಹೊಂದಿದ್ದಾರೆಂದು ರಿಪಬ್ಲಿಕನ್ ಅಭ್ಯರ್ಥಿ ಮೈಕ್ ರೋಜರ್ಸ್ ಮತ್ತು ಡೊನಾಲ್ಡ್ ಟ್ರಂಪ್ ಚಿತ್ರಿಸಿದ್ದರು. ಇಷ್ಟೆಲ್ಲ ನೆಗೆಟಿವ್ ಪ್ರಚಾರಕ್ಕೆ ಹಣ ಸುರಿದದ್ದು ವ್ಯರ್ಥವಾಗಿದೆ. ಜನ ಅವರನ್ನೇ ಗೆಲ್ಲಿಸಿದ್ದಾರೆ. ಅವರನ್ನು ಮಾತ್ರ ಅಲ್ಲ. ನ್ಯೂಯಾರ್ಕ್ ಸ್ಟೇಟ್‌ನಲ್ಲಿ ಫೆಲಸ್ತೀನಿ ಮಹಿಳೆ ಅಬೀರ್ ಕವಾಸ್ ಗೆದ್ದಿದ್ದಾರೆ. ಜನ ಝಿಯೊನಿಸಂ ಕುತಂತ್ರಕ್ಕೆ ಮಣಿದಿಲ್ಲ. 

ಹೀಗಾಗಿ ಟ್ರಂಪ್ ಮತ್ತು ಝಿಯೊನಿಸಂ ವಿರುದ್ಧ ಡೆಮಕ್ರಾಟ್ ಪಾರ್ಟಿಗೆ ಪವರ್ ಕೊಟ್ಟಿದ್ದಾರೆ. ಅಂದರೆ ಬೆಲೆಯೇರಿಕೆಗೆ ಕಾರಣವಾದ ಯುದ್ಧದಾಹಿ ಟ್ರಂಪ್‌ರನ್ನು ಕುಣಿಸುತ್ತಿರುವ ಝಿಯೊನಿಸಂ ಬೇಡ ಎಂಬ ತೀರ್ಮಾನ ಅದಾಗಿತ್ತು. ಇಸ್ರೇಲಿನಂತೆ ಅಮೆರಿಕದಲ್ಲಿಯೂ ಝಿಯೊನಿಸಂ ಅನ್ನು ಜನ ತಿರಸ್ಕರಿಸಿದ್ದಾರೆ. ಇನ್ನೂ ಒಂದು ವಾಸ್ತವ ಇದೆ. ಯುದ್ಧದಿಂದ ಅಮೆರಿಕಕ್ಕೆ ಏನು ಸಿಕ್ಕಿತು. ಶಾಂತಿ ಬಂತೇ. ವಿಯೆಟ್ನಾಂ ಯುದ್ಧಕ್ಕೆ ಹೋಗಿ ಅಮೆರಿಕದ 52 ಸಾವಿರ ಸೈನಿಕರು ಪ್ರಾಣ ಕಳೆದುಕೊಂಡರು. ಉತ್ತರ ಕೊರಿಯಾದ ವಿರುದ್ಧ ಯುದ್ಧಕ್ಕೆ ಹೋಗಿ ಚೀನಾದ ಬೆಂಬಲದಿಂದ ಕೊರಿಯಾವನ್ನು ಸೋಲಿಸಿದ್ದು. ಅಫ್ಘಾನಿಸ್ತಾನದಲ್ಲಿ ಹತ್ತಾರು ವರ್ಷ ಅಮೆರಿಕದ ಸೈನಿಕರು ಪಟ್ಟ ಬವಣೆ ಸಾವು ನೋವು ಎಲ್ಲ ಜನ ನೋಡಿದ್ದಾರೆ. ಈಗ ಹೊಸದಾಗಿ ಇರಾನ್‌ನ ಮೇಲೆ ಮತ್ತೊಂದು ದಾಳಿಗೆ ಹೊರಟರೆ ಇದಕ್ಕಿಂತ ಘಾತಕ ಪರಿಣಾಮ ಆಗಬಹುದು. ಅಷ್ಟಕ್ಕೂ ಈ ಯುದ್ಧವೇ ಅಮೆರಿಕದ್ದಲ್ಲ. ಝಿಯೊನಿಸ್ಟ್ ಲಾಬಿ ನೆತನ್ಯಾಹುಗಾಗಿ ಅಮೆರಿಕನ್ನರು ಯಾಕೆ ಯುದ್ಧ ಮಾಡಬೇಕೆಂದು ಜನ ಕೇಳುತ್ತಿದ್ದಾರೆ. ಆದ್ದರಿಂದ ಟ್ರಂಪ್ ಮತ್ತು ನೆತನ್ಯಾಹು ಆಟ ಫಿನಿಶ್ ಮಾಡುವ ಸಲುವಾಗಿ ಡೆಮಕ್ರಾಟ್ ಪಾರ್ಟಿಗೆ ವೋಟು ಕೊಟ್ಟಿದ್ದಾರೆ ಎಂಬ ವಿಶ್ಲೇಷಣೆಗಳೂ ಇವೆ. ಅಂದರೆ ಝಿಯೊನಿಸಂ ಅನ್ನು ಅಮೆರಿಕನ್ನರು ತಿರಸ್ಕರಿಸಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಝಿಯೊನಿಸಂ ಮತ್ತು ರೇಸಿಸಂ ಪತನದ ಅರ್ಥವೇ ಶಾಂತಿಯತ್ತ ಜಗತ್ತು ಚಲಿಸುತ್ತಿದೆ ಎಂದು ನೀವು ತಿಳಿಯಬಹುದು.

ಇಸ್ರೇಲಿನಲ್ಲಿ ಝಿಯೊನಿಸಂ ಪತನದಂಚಿಗೆ

ಇಸ್ರೇಲಿನಲ್ಲಿ ಕೇವಲ ಝಿಯೊನಿಸ್ಟರು ಮಾತ್ರ ಇರುವುದಲ್ಲ. ಅಲ್ಲಿ ಸುಮಾರು 10 ಮಿಲಿಯನ್ ಜನರಲ್ಲಿ 21% ಅರಬರೂ ಇದ್ದಾರೆ. ಝಿಯೊನಿಸ್ಟ್ ಅಲ್ಲದ ಸಾಂಪ್ರದಾಯಿಕ ಯಹೂದಿ (ಜೂಡಿಯಿಸ್ಟ್) ಜನರು ಇದ್ದಾರೆ. ನೆತನ್ಯಾಹುರ ಝಿಯೊನಿಸಂನ್ನು ಈ ಮುಖ್ಯ ವಿಭಾಗ ಅಂದರೆ ಅರಬರು ಸಂಪೂರ್ಣ ತಿರಸ್ಕರಿಸಿದ್ದು ಚುನಾವಣೆಯ ಫಲಿತಾಂಶದಲ್ಲಿ ಗೊತ್ತಾಗುತ್ತದೆ. ಅರಬ್ ಪಾರ್ಟಿಗಳು 19 ಸೀಟು ಗೆದ್ದಿವೆ. ಅಪ್ಪಟ ಝಿಯೊನಿಸಂ ಸದ್ಯಕ್ಕೆ ವಕ್ತಾರಿಕೆ ನಿಭಾಯಿಸುತ್ತಿರುವ ನೆತನ್ಯಾಹುರ ಲಿಕುಡ್ ಪಾರ್ಟಿ ಅರಬ್ಬರ ಪಾರ್ಟಿಗಿಂತ 4 ಸೀಟು ಹೆಚ್ಚು ಅಂದರೆ 23 ಸೀಟು ಗೆದ್ದಿದೆ. ಇದು ಝಿಯೊನಿಸಂನ ಸರ್ವ ಪತನ ಅಲ್ಲದಿದ್ದರೂ ಝಿಯೊನಿಸ್ಟ್ ಇಸ್ರೇಲಿನ ದುರ್ಬಲಗೊಂಡ ಸ್ಥಿತಿ ಎಂದು ಒಪ್ಪಲೇಬೇಕು. ಮುಖ್ಯವಾಗಿ ಗುರುತಿಸಬೇಕಾದ್ದು ನೆತನ್ಯಾಹು ಗಾಝಾದ ಮೇಲೆ ಲಕ್ಷಾಂತರ ನರಹತ್ಯೆ ನಡೆಸಿದ್ದಕ್ಕೆ ಈ ಜನವಿಭಾಗ ವೋಟಿನಲ್ಲಿ ಪ್ರತೀಕಾರ ತೀರಿಸಿದ್ದಾರೆ ಎಂಬುದು. ಅದರಲ್ಲೂ ಝಿಯೊನಿಸ್ಟ್ ವಾದದಲ್ಲಿ ನೆತನ್ಯಾಹುಗಿಂತ ಕ್ರೂರಿಯಾದ ಗಾಡಿ ಐಸನ್‌ಕೋಟ್ ಈಗ 48 ಸೀಟು ಗೆದ್ದು ಅರಬ್ ಪಾರ್ಟಿಗಳ ಬೆಂಬಲ ಪಡೆದು ಸರಕಾರ ರಚಿಸಲು ಮುಂದೆ ಬಂದಿದ್ದಾರೆ ಇದು ಚಿಲ್ಲರೆ ಸಂಗತಿ ಅಲ್ಲ. ಸಂದರ್ಭ ಪರಿಸ್ಥಿತಿಯನ್ನು ಸೃಷ್ಟಿಸುವುದು ಹೀಗೆ. 

ಅರಬರು ಇಸ್ರೇಲಿನಲ್ಲಿ ಎರಡನೇ ದರ್ಜೆ ಸಿಟಿಝನ್, ಅವರಿಗೂ ವೋಟು ಹಕ್ಕು ಇದೆ. ಇಸ್ರೇಲಿನಲ್ಲಿ ಕೆಲವು ರಾಜಕಾರಣಿಗಳು ಅರಬರ ಬೆಂಬಲದಿಂದ ಸರಕಾರ ಕಟ್ಟಿದರೆ ಏನಾಗುತ್ತದೆ ಎಂದು ಪ್ರಶ್ನಿಸ ತೊಡಗಿದ್ದು ಮತ್ತು ಇನ್ನೊಂದು ಕಡೆ ಗಾಡಿ ಐಸೆನ್‌ಕೋಟ್‌ರ ಟ್ರಂಪ್ ಹೇಳಿದರೂ ನೆತನ್ಯಾಹು ಸರಕಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿದ್ದು ಝಿಯೊನಿಸಂ ಇನ್ನೊಂದು ಝಿಯೊನಿಸಂನ್ನು ದ್ವೇಷಿಸುವುದನ್ನು ಎತ್ತಿಹಿಡಿದಿದೆ. ಹೀಗೆ ಪರಿಸ್ಥಿತಿಯೇ ಪರಿಸ್ಥಿತಿಯನ್ನು ರೂಪಿಸುತ್ತದೆ. ಅರಸನೂ ಅಲ್ಲ ಪ್ರಜೆಯೂ ಅಲ್ಲ ಎಂಬ ಮಾತಿಗೆ ತಕ್ಕ ಬೆಳವಣಿಗೆಗಳು ಇವು. ಹಾಗಾದರೆ ಇಸ್ರೇಲಿನ ಝಿಯೊನಿಸಂ ಅರಬರಿಗೆ ಮಣಿಯುತ್ತಿದೆ ಅಥವಾ ಅರಬರಿಗೂ ಮಣೆ ಹಾಕುವ ಪರಿಸ್ಥಿತಿ ಸೃಷ್ಟಿಯಾಗಿದೆ ಎನ್ನಬಹುದು. ಸಂದರ್ಭ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಇದಕ್ಕೆ ನೋಡಿ ಪರಿಸ್ಥಿತಿಯೇ ಪರಿಸ್ಥಿತಿಯನ್ನು ರೂಪಿಸುತ್ತದೆ ಎಂದು ನೀವೂ ಹೇಳಬೇಕಾಗುತ್ತದೆ.

ಸೋಲಿಗೆ ಬೆಚ್ಚಿ ಯುದ್ಧದ ಆಸರೆ ಹಿಡಿಯಲು ಹೊರಟ ನೆತನ್ಯಾಹು 

ನೆತನ್ಯಾಹು ಚುನಾವಣಾ ಫಲಿತಾಂಶವನ್ನು ತಿರಸ್ಕರಿಸಿ ತಾನೆ ಅಧಿಕಾರದಲ್ಲಿ ಮುಂದುವರಿಯುವ ಸಲುವಾಗಿ ಇರಾನ್ ಮೇಲೆ ವಾಯುದಾಳಿಗಿಳಿಯುವುದು ಎಂದು ಇಸ್ರೇಲಿನ ಡೆಮಕ್ರಾಟ್ಸ್ ಪಾರ್ಟಿಯ ಯೆಯೊರ್ ಗೋಲನ್ ಚುನಾವಣೆ ನಡೆಯುವ ಮೊದಲೇ ಹೇಳಿದ್ದು ನಿಜವಾಗುತ್ತದೆ ಎಂಬ ಚರ್ಚೆಗಳು ಇವೆ. ನೆತನ್ಯಾಹುರನ್ನು ಅಧಿಕಾರದಿಂದ ಕೆಳಗಿಳಿಯದಂತೆ ನೋಡಿಕೊಳ್ಳಲು ಟ್ರಂಪ್ ಇಲ್ಲಸಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೊಮ್ಮೆ ಸೂಚ್ಯವಾಗಿ ಹೇಳುವುದಾದರೆ ಟ್ರಂಪ್ ಮತ್ತು ನೆತನ್ಯಾಹುರಿಗೆ ಪವರ್ ತಮ್ಮ ಬಳಿ ಉಳಿಸಿಕೊಳ್ಳುವುದಕ್ಕಾಗಿ ಯುದ್ಧ ಬೇಕು. ಟಕರ್ ಕಾರ್ಲ್ಸನ್ (ಖ್ಯಾತ ಅಮೆರಿಕನ್ ಪತ್ರಕರ್ತ) ನೆತನ್ಯಾಹು ಇರಾನ್‌ಗೆ ಪರಮಾಣು ಬಾಂಬು ಹಾಕಲು ಟ್ರಂಪ್‌ರನ್ನು ಒತ್ತಾಯಿಸುತ್ತಿದ್ದಾರೆ ಎಂದು ಬಹಿರಂಗವಾಗಿ ಜಗತ್ತಿನ ಮುಂದೆ ಝಿಯೊನಿಸ್ಟ್ ಲಾಬಿಯ ಕುತಂತ್ರವನ್ನು ಬಹಿರಂಗಪಡಿಸಿದ್ದಾರೆ. ಇದೆಂಥ ಹುಚ್ಚು!

ನೆತನ್ಯಾಹು ಸ್ವದೇಶದಲ್ಲಿ ಭ್ರಷ್ಟಾಚಾರದ 6 ಪ್ರಕರಣಗಳಲ್ಲಿ ಟ್ರಯಲ್ ಎದುರಿಸುತ್ತಿದ್ದಾರೆ. ನೆತನ್ಯಾಹುಗೆ ಕನಿಷ್ಠ 2 ಪ್ರಕರಣದಲ್ಲಿ ಕನಿಷ್ಠ 14 ವರ್ಷ ಜೈಲು ಆಗಬಹುದು ಎಂದು ಇಸ್ರೇಲಿನ ಮಾಧ್ಯಮಗಳು ವರದಿ ಮಾಡಿವೆ. ತನ್ನನ್ನು ಇದರಿಂದ ತಪ್ಪಿಸುವುದಕ್ಕೆ ನೆತನ್ಯಾಹುಗೆ ಯುದ್ಧ ಬೇಕು. ಪರಮಾಣು ಬಾಂಬು ಸುರಿಸಬೇಕು. ಆದರೆ ಪರಿಸ್ಥಿತಿ ಅವರು ಅಂದುಕೊಳ್ಳುವುದಕ್ಕಿಂತ ವಿಪರೀತವಾಗಿ ಹೊರಳಿದೆ. ಇರಾನ್ ಅಮೆರಿಕ ಯುದ್ಧಕ್ಕಿಳಿದರೆ ಮುಂದಕ್ಕೆ ನಡೆಯುವುದು ಹಳೆಯ ಯುದ್ಧವಲ್ಲ, ಈ ಸಲ ಎಲ್ಲ ಹಿಂದಿನ ಯುದ್ಧಕ್ಕಿಂತ ಎಷ್ಟು ಹೆಚ್ಚು ಘಾತುಕ ಆಗಲಿದೆ ಎಂಬ ಎಚ್ಚರಿಕೆ ಯುಎಸ್‌ಗೆ ರವಾನಿಸಿದೆ. 

ಹೊಸ ಆಟದ ಪ್ರೋಮೊವನ್ನು ಬ್ರಿಟನ್‌ಗೆ ಘಾಟು ಮುಟ್ಟಿಸುವ ಮೂಲಕ ಇರಾನ್ ಈಗಾಗಲೇ ತೋರಿಸಿತು. ಟ್ರಂಪ್ ಝಿಯೊನಿಸಂಗೆ ಮಣಿದು ಮುಟ್ಟಿದರೆ ಯುರೋಪ್ ಅನ್ನು ಕೂಡ ಇರಾನಿನ ಕ್ಷಿಪಣಿಗಳು ಡ್ರೋಣ್‌ಗಳು ಸುಡುತ್ತವೆ ಎಂಬುದು ಹೀಗೂ ಸ್ಪಷ್ಟವಾಗುತ್ತದೆ. ಇರಾನ್ ಬ್ರಿಟನ್‌ನ ರಾಯಲ್ ನೇವಿ, ರಾಯಲ್ ಏರ್‌ಫೋರ್ಸ್‌ಗಳನ್ನು ಇರಾನ್ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿದೆ. ಬ್ರಿಟನ್‌ನ ಗುಪ್ತಚರ ಏಜೆನ್ಸಿ ಎಂಐ6 ಅನ್ನು ಶತ್ರುವಿಭಾಗ ಎಂದು ಇರಾನ್ ಅಧಿಕೃತವಾಗಿ ಘೋಷಿಸಿದ್ದು ಮುಂದಿನ ಆಟ ಬೇರೆಯೇ ಇದೆ ಎಂದು ಇರಾನ್ ಸೂಚಿಸಿದೆ. ಸೆನೆಟ್‌ನಲ್ಲಿ ವೀಟೊ ಪ್ರಯೋಗಿಸಿ ಟ್ರಂಪ್ ಡೆಮಕ್ರಾಟರನ್ನು ಮೀರಿಸಿ ಯುದ್ಧಕ್ಕೆ ಬಂದರೆ ಮಧ್ಯಪ್ರಾಚ್ಯವನ್ನು ದಾಟಿ ಯುರೋಪಿನ ಅಮೆರಿಕನ್ ಬೇಸ್‌ಗಳಿಗೂ ಇರಾನ್ ಕ್ಷಿಪಣಿ ಹಾರಿಸುತ್ತದೆ ಇದರಿಂದ ಸ್ಪಷ್ಟವಾಗುತ್ತಿದೆ. ಇರಾನಿಂದ ಝಿಯೊನಿಸ್ಟರಿಗಾಗಿ ಗುದ್ದಿಸಲು ಯುರೋಪ್ ಬಯಸುವುದಿಲ್ಲ. ಹಿಂದಿನ ಇರಾನ್ ಇಸ್ರೇಲ್ ಅಮೆರಿಕ ಯುದ್ಧದಲ್ಲಿ ಭಾಗವಹಿಸಲು ಯುರೋಪ್ ಸಂಪೂರ್ಣ ತಿರಸ್ಕರಿಸಿದ್ದು ಈ ಮಾತಿಗೆ ಒಂದು ಆಧಾರವಾಗಿ ಸ್ಮರಿಸಬಹುದು.

ಗುಮಾನಿ ಒಪ್ಪದ ಇಸ್ರೇಲಿನ ಆಯೋಗ: ಇಸ್ರೇಲಿನ ಚುನಾವಣೆಯ ವಿಚಾರವನ್ನು ಮತ್ತೊಮ್ಮೆ ಎತ್ತಿಕೊಳ್ಳುವುದಿದ್ದರೆ. ಇಸ್ರೇಲಿನ ಸೆಂಟ್ರಲ್ ಇಲೆಕ್ಷನ್ ಕಮಿಷನ್ ಚುನಾವಣೆಯಲ್ಲಿ ವಿದೇಶಿ ಫಂಡಿಂಗ್ ಆರೋಪದಲ್ಲಿ ತನಿಖೆ ಚುನಾವಣೆಯ ಫಲಿತಾಂಶವನ್ನು ಬಾಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗೆ ಆರೋಪಿಸಿದ್ದು ನೆತನ್ಯಾಹು ಅವರ ಲಿಕುಡ್ ಪಾರ್ಟಿ. ವಾಸ್ತವದಲ್ಲಿ ಅಧಿಕಾರ ಉಳಿಸಿಕೊಳ್ಳಲು ಇದೂ ಅವರ ಒಂದು ಪ್ರಯತ್ನ. ಚುನಾವಣೆ ಆಯೋಗ, ಅದರ ಪ್ರಕಾರ ಸಂದೇಹಗಳು ಸಂದೇಹ ಮಾತ್ರ. ಅದು ಕೂಡ ಈ ಸಂದೇಹ ವ್ಯಕ್ತಪಡಿಸಿದ್ದು ನೆತನ್ಯಾಹು. ಅಧಿಕಾರದಲ್ಲಿ ಉಳಿಯುವುದಕ್ಕಾಗಿ ಎಂದು ಕಮಿಷನ್‌ಗೆ ಗೊತ್ತು. ಸುಪ್ರೀಂ ಕೋರ್ಟ್ ಜಡ್ಜ್ ಮತ್ತು ಆಯೋಗದ ಮುಖ್ಯಸ್ಥ ನೊವಾಮ ಬಾಲ್‌ಬರ್ಗ್ ಜನಾದೇಶ ಮತ್ತು ಚುನಾವಣೆ ಫಲಿತಾಂಶ ಸಂಪೂರ್ಣ ಸಂರಕ್ಷಿಸಲ್ಪಡುತ್ತದೆ ಎಂದು ಭರವಸೆ ನೀಡಿದ್ದಾರೆ. ಹೀಗೆ ಇಲ್ಲಿಯೂ ನೆತನ್ಯಾಹು ನಿರಾಶೆ ಅನುಭವಿಸಬೇಕಾಗುತ್ತದೆ. ಮತ್ತೊಂದು ಮಧ್ಯಂತರ ಚುನಾವಣೆಗೆ ಹೋಗಬಹುದು ಎಂಬ ನೆತನ್ಯಾಹು ಆಶೆಗೆ ಕಮರಿದ್ದು ಹೀಗೆ. ಒಟ್ಟಿನಲ್ಲಿ ಅಧಿಕಾರ ಕೈತಪ್ಪುತ್ತಿದೆ ಎಂಬ ನಿರಾಶೆ ಭಯಕ್ಕೆ ನೆತನ್ಯಾಹು ಬೆಚ್ಚಿ ರೊಚ್ಚಿ ಹುಚ್ಚೆದ್ದಿದ್ದು ಈಗ ಇಸ್ರೇಲಿನಲ್ಲಿ ನಡೆಯುತ್ತಿದೆ. ಜೊತೆಗೆ ಟ್ರಂಪ್ ಇರಾನ್ ಮೇಲೆ ಯುದ್ಧ ಧಮ್ಕಿ ಹಾಕುವ ವಿಕ್ಷಿಪ್ತತೆಯೂ ಇದೆ. ಆದರೆ ಈ ಸಲ ನೆತನ್ಯಾಹುರನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಜೈಲಿಗೆ ಕಳುಹಿಸಬೇಕೆಂದು ಜನರೇ ನಿರ್ಧರಿಸಿದ್ದರಿಂದ ಮತ್ತು ಅಮೆರಿಕದ ಸೆನೆಟ್‌ನಲ್ಲಿ ಡೆಮಕ್ರಾಟರಿಗೆ ಅಲ್ಲಿನ ಜನ ಅಧಿಕಾರ ಕೊಟ್ಟದ್ದರಿಂದ ಟ್ರಂಪ್ ನೆತನ್ಯಾಹು ರೇಸಿಸಂ ಝಿಯೊನಿಸಂ ಯುಗಳ ಕುಣಿತ ನಿಂತಲ್ಲೇ ಇದೆ. ತಮ್ಮ ಜನಾದೇಶವನ್ನು ಧಿಕ್ಕರಿಸಿ ಎಷ್ಟೇ ಕುಣಿದರೂ ಅವರ ಕಾಲು ಸೋಲುವುದು ಖಚಿತ ಮತ್ತು ಆಸೆ ಈಡೇರುವುದು ಕಷ್ಟ. ಅಮೆರಿಕ ಮತ್ತು ಇಸ್ರೇಲ್‌ನ ಚುನಾವಣೆಗಳ ಸದ್ಯದ ಲೆಕ್ಕ ಇದು. ಮುಂದಿನ ದಿನಗಳಲ್ಲಿರುವ ಲೆಕ್ಕ ಯಾರು ಬಲ್ಲರು. ಆದರೂ ಆ ಎರಡೂ ಇಸಂಗಳು ಎರಡೂ ಕಡೆಯೂ ಕಾಲದೊಳಗೆ ಜಾರುವುದನ್ನು ಕಾಲಗರ್ಭ ನಿರ್ಧರಿಸಿರಬಹುದು. ಅಂತಹ ಪರಿಸ್ಥಿತಿ ಅವರಿಬ್ಬರಿಗೂ ನಿರ್ಮಾಣವಾಗಿದ್ದು ನೀವೂ ಒಪ್ಪುತ್ತೀರಿ. ಪರಿಸ್ಥಿತಿಯೇ ಪರಿಸ್ಥಿತಿಯನ್ನು ರೂಪಿಸುವುದು. ಝಿಯೊನಿಸಂ ಇವಾಂಜೆಲಿಸಂ ಎರಡರ ರೇಸಿಸಂ ಅಲ್ಲ.