ಬಡ ಕುಟುಂಬಗಳಿಗೆ 6,157 ಫ್ಲಾಟ್ ಘೋಷಿಸಿದ ವಿಜಯ್

0
10

ಸನ್ಮಾರ್ಗ ವಾರ್ತೆ

ಚೆನ್ನೈ: ನಗರದಲ್ಲಿ ಆರ್ಥಿಕವಾಗಿ ಹಿಂದುಳಿದ ವಸತಿ ರಹಿತರಿಗೆ ಉತ್ತಮ ವಾಸ ಸೌಕರ್ಯವನ್ನು ಖಚಿತಪಡಿಸುವ ದೃಷ್ಟಿಯಲ್ಲಿ ತಮಿಳುನಾಡು ಸರ್ಕಾರ 1,401.75 ಕೋಟಿ ರೂಪಾಯಿಯ ಹೊಸ ವಸತಿ ಯೋಜನೆಗೆ ಅನುಮತಿ ನೀಡಿತು. ತಮಿಳುನಾಡು ಅರ್ಬನ್ ಹ್ಯಾಬಿಟ್ಯಾಟ್ ಡೆವಲಪ್‌ಮೆಂಟ್ ಬೋರ್ಡ್ (ಟಿಎನ್‌ಯುಎಚ್‌ಡಿಬಿ) ನೇತೃತ್ವದಲ್ಲಿ ಹೊಸ ಯೋಜನೆಯ ಪೂರ್ಣ ಸೌಕರ್ಯಗಳಿರುವ ವಸತಿಗಳು ನಿರ್ಮಾಣವಾಗಲಿವೆ. ಅಪಾಯ ಸ್ಥಿತಿಯಲ್ಲಿರುವ ಹಳೆಯ ಕಟ್ಟಡಗಳನ್ನು ಮರು ನಿರ್ಮಾಣ ಮಾಡುವುದು ಸಹಿತ ಹೊಸ ಯೋಜನೆಯಲ್ಲಿ ವಸತಿರಹಿತರಿಗೆ ವಸತಿಗಳ ಯುನಿಟ್ ನಿರ್ಮಾಣಗೊಳ್ಳುವುದು.

ಒಂಬತ್ತು ಜಾಗಗಳಲ್ಲಿ ಒಟ್ಟು 6,157 ಫ್ಲಾಟ್‌ಗಳು ಯೋಜನೆಯಡಿಯಲ್ಲಿ ನಿರ್ಮಿಸಿ ಸಂಬಂಧಪಟ್ಟವರಿಗೆ ವಿತರಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದರಲ್ಲಿ 64 ಫ್ಲಾಟ್‌ಗಳು ವ್ಯಾಸರ್ಪಾಡಿಯ ಹಳೆಯ ಬ್ಲಾಕ್‌ನಲ್ಲಿ, ಫೋರ್‌ಶೋರ್ ಎಸ್ಟೇಟಿನಲ್ಲಿ 1,484 ಫ್ಲಾಟ್ ನಿರ್ಮಾಣಗೊಳ್ಳಲಿದ್ದು ರುಕ್ಮಿಣಿ ನಗರದಲ್ಲಿ 111, ಮುಲ್ಲೈ ನಗರದಲ್ಲಿ 462, ಉದಯಸೂರ್ಯನ್ ನಗರದಲ್ಲಿ 850, ಪಚ್ಚೈಕಲ್ ವೀರಸ್ವಾಮಿ ನಗರದಲ್ಲಿ 912, ವೆಸ್ಟ್ ಕಲರೈಸಾಲೈಯಲ್ಲಿ 792, ಕಕ್ಕನ್ ಕಾಲನಿಯಲ್ಲಿ 324 ಫ್ಲಾಟ್‌ಗಳನ್ನು ಈ ಯೋಜನೆಯಲ್ಲಿ ನಿರ್ಮಿಸಲಾಗುವುದು.

ಇದಲ್ಲದೆ ಕಣ್ಣಗಿ ನಗರದಲ್ಲಿ 6,508 ಮನೆಗಳ ರಿಪೇರಿಗಳು ಮತ್ತು ನವೀಕರಣಕ್ಕೆ ಸರ್ಕಾರ 49.29 ಕೋಟಿ ರೂಪಾಯಿ ನೀಡಲಿದೆ. 673 ರೆಸಿಡೆನ್ಸ್ ಬ್ಲಾಕ್‌ಗಳಾಗಿ ವ್ಯಾಪಿಸುವ ಕಟ್ಟಡಗಳಲ್ಲಿ ಸುರಕ್ಷೆ ಖಚಿತಪಡಿಸುವುದಕ್ಕೆ ಮತ್ತು ವಾಸಿಸುವವರ ಜೀವನ ಮಟ್ಟ ಉತ್ತಮಗೊಳಿಸಲು ಹಣವನ್ನು ಉಪಯೋಗಿಸುವುದು. ಒಂದು ಮನೆಯ ನವೀಕರಣಕ್ಕೆ 75,000 ವೆಚ್ಚ ತಗಲಬಹುದೆಂಬ ನಿರೀಕ್ಷೆ ಇದೆ. ಯೋಜನೆಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಕೊಡುತ್ತದೆ.