ಬೆಳಗಾವಿ | ತಟ್ಟು ಚಪ್ಪಾಳೆ ಪುಟ್ಟಾ ಪುಟ್ಟಿ ಕೃತಿಗೆ ಶಿಶು ಸಾಹಿತ್ಯ ಪ್ರಶಸ್ತಿ

0
11

ಸನ್ಮಾರ್ಗ ವಾರ್ತೆ

ಬೆಳಗಾವಿ: ಸಾಹಿತ್ಯ ಸಂಸ್ಕೃತಿ ಪ್ರತಿಷ್ಠಾನ ಬೈಲಹೊಂಗಲದ ಸಾಹಿತಿ ವೇ. ಗುರುಪಾದಸ್ವಾಮಿ ಹಿರೇಮಠ ಮತ್ತು ಮಕ್ಕಳ ಪ್ರೇಮಿ ಮಕ್ಕಳ ಸಾಹಿತ್ಯದ ಪ್ರೋತ್ಸಾಹಕರಾದ ಉಳವೀಶಸ್ವಾಮಿ ಹುಲೆಪ್ಪನವರಮಠ ಇವರ ಸ್ಮರಣಾರ್ಥವಾಗಿ ನೀಡುವ ರಾಜ್ಯಮಟ್ಟದ 2025ನೇ ಸಾಲಿಗೆ “ಉಳವೀಶ ಶಿಶು ಕಥಾ ಸಾಹಿತ್ಯ” ಪುರಸ್ಕಾರಕ್ಕೆ ಮಕ್ಕಳ ಸಾಹಿತಿ ಡಾ. ತಯಬಅಲಿ. ಅ. ಹೊಂಬಳರವರ ಬಹುವರ್ಣದ “ತಟ್ಟು ಚಪ್ಪಾಳೆ ಪುಟ್ಟಾ ಪುಟ್ಟಿ” ಸಚಿತ್ರ ಮಕ್ಕಳ ಕಥಾ ಸಂಕಲನಕ್ಕೆ ಪ್ರಶಸ್ತಿ ಲಭಿಸಿದೆ.

ನವಂಬರನಲ್ಲಿ ನಡೆಯುವ ವಾರ್ಷಿಕ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕಾರ್ಯದರ್ಶಿ ಆರ್.ಜಿ. ಹಿರೇಮಠ ಮತ್ತು ಅಧ್ಯಕ್ಷ ಶಿವಪ್ರಸಾದ ಹುಲೆಪ್ಪನವರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.