ಸನ್ಮಾರ್ಗ ವಾರ್ತೆ
UAE ಯ ಪ್ರಮುಖ ಇಸ್ಲಾಮಿಕ್ ಬ್ಯಾಂಕ್ ಆದ ಎಮಿರೇಟ್ಸ್ ಇಸ್ಲಾಮಿಕ್ ಬ್ಯಾಂಕ್ ಅನ್ನು ದುಬೈಯ ಇಸ್ಲಾಮಿಕ್ ಬ್ಯಾಂಕ್ ಸ್ವಾಧೀನ ಪಡಿಸಿಕೊಳ್ಳುತ್ತಿದ್ದು ದುಬೈಯಲ್ಲಿ 585 ಬಿಲಿಯನ್ ದಿರ್ಹಂಗಳ ಆಸ್ತಿಯೊಂದಿಗೆ ಹೊಸ ಇಸ್ಲಾಮಿಕ್ ಬ್ಯಾಂಕಿಂಗ್ ಗುಂಪನ್ನು ರಚಿಸುತ್ತಿದೆ. ದುಬೈ ಇಸ್ಲಾಮಿಕ್ ಬ್ಯಾಂಕ್ ಮತ್ತು ಎಮಿರೇಟ್ಸ್ ವರ್ಗಾವಣೆ ಒಪ್ಪಂದಕ್ಕೆ ಸಹಿ ಹಾಕಿವೆ.
ಒಪ್ಪಂದದ ಪ್ರಕಾರ ಎಮಿರೇಟ್ಸ್ ಇಸ್ಲಾಮಿಕ್ ಬ್ಯಾಂಕಿನ 100% ಶೇರುಗಳನ್ನು ದುಬೈ ಇಸ್ಲಾಮಿಕ್ ಬ್ಯಾಂಕ್ ಸ್ವಾಧೀನ ಪಡಿಸಿಕೊಳ್ಳುತ್ತದೆ. ಇದು ಪ್ರಸ್ತುತ ಎಮಿರೇಟ್ಸ್ NBD ಬ್ಯಾಂಕಿನ ಸಂಪೂರ್ಣ ಒಡೆತನದಲ್ಲಿದೆ. ಇದಕ್ಕೆ ಪ್ರತಿಯಾಗಿ ಅದೇ ಮೊತ್ತದ ದುಬೈ ಇಸ್ಲಾಮಿಕ್ ಬ್ಯಾಂಕಿನ ಹೊಸ ಶೇರುಗಳನ್ನು ಎಮಿರೇಟ್ಸ್ NBD ಗೆ ವರ್ಗಾಯಿಸುತ್ತದೆ. ಶೇರು ವರ್ಗಾವಣೆ ಪೂರ್ಣಗೊಂಡ ನಂತರ ದುಬೈಯಲ್ಲಿ 58 500 ಬಿಲಿಯನ್ ದಿರ್ಹಂಗಳ ಆಸ್ತಿಯನ್ನು ಹೊಂದಿರುವ ಹೊಸ ಇಸ್ಲಾಮಿಕ್ ಬ್ಯಾಂಕಿಂಗ್ ಗುಂಪನ್ನು ರಚಿಸಲಾಗುತ್ತದೆ.
ಹೀಗೆ ದುಬೈ ಇಸ್ಲಾಮಿಕ್ ಬ್ಯಾಂಕ್ ಯುಎಇಯಲ್ಲಿ ಅತಿ ದೊಡ್ಡ ಇಸ್ಲಾಮಿಕ್ ಬ್ಯಾಂಕ್ ಆಗಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲಿದೆ ಮತ್ತು ವಿಶ್ವದ ಎರಡನೇ ಅತಿ ದೊಡ್ಡ ಇಸ್ಲಾಮಿಕ್ ಬ್ಯಾಂಕ್ ಆಗಲಿದೆ.












