ಹೊಸದಿಲ್ಲಿ; ಜಮ್ಮು, ಆ. 5: ಜಮ್ಮು ಕಾಶ್ಮೀರದ ಇತ್ತೀಚೆಗಿನ ಬೆಳವಣಿಗೆಯ ಕುರಿತು ಪ್ರಮುಖರು ರಂಗ ಪ್ರವೇಶಿಸಿದ್ದಾರೆ. ನ್ಯಾಶನಲ್ ಕಾನ್ಫರೆನ್ಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲರ ಸಹಿತ ಹಲವು ನಾಯಕರನ್ನು ಗೃಹಬಂಧನದಲ್ಲಿರಿಸಿರುವುದನ್ನು ಟೀಕಿಸಿ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಉಮರ್ ಅಬ್ದುಲ್ಲ, ನೀವು ಒಂಟಿಯಲ್ಲ. ಪಾರ್ಲಿಮೆಂಟ್ ನಡೆಯುತ್ತಿದೆ, ನಾವು ಧ್ವನಿಯೆತ್ತುತ್ತೇವೆ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ನಿರೀಕ್ಷೆ ಕೈಬಿಡಬೇಡಿ. ದೇವನು ನಮ್ಮ ಜೊತೆಗಿದ್ದಾನೆ ಎಂದು ಗೃಹಬಂಧನದಲ್ಲಾಗಿರುವ ಉಮರ್ ಅಬ್ದುಲ್ಲ ಟ್ವೀಟ್ ಮಾಡಿದ್ದಾರೆ.
ಆದರೆ, ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲಾಗುತ್ತಿದೆ ಎಂದು ನಟ ಮತ್ತು ಬಿಜೆಪಿ ಬೆಂಬಲಿಗ ಅನುಪಂ ಖೇರ್ ಟ್ವೀಟ್ ಮಾಡಿದ್ದಾರೆ.












