ಬಿಎಸ್ಸೆನ್ನೆಲ್ ಆಘಾತ; ಭಾರತ್ ನೆಟ್ ಒಪ್ಪಂದ ನಷ್ಟ- ಸಂಬಳ ಕೊಡಲು ಪರದಾಡುತ್ತಿರುವ ಸಂಸ್ಥೆ

0
789

ತೃಶೂರ್, ಆ. 6: ಸಂಬಳ ಕೊಡಲು ಕೂಡ ಪರದಾಡುತ್ತಿರುವ ಬಿಎಸ್ಸೆನ್ನೆಲ್ ಗೆ ಭಾರೀ ಪ್ರಹಾರವಾಗಿದೆ. ಭಾರತ್ ನೆಟ್ ಪ್ರಾಜೆಕ್ಟ್ ನ ವಾರ್ಷಿಕ ದುರಸ್ತಿ ಒಪ್ಪಂದದಿಂದ ಕಂಪೆನಿಯನ್ನು ದೂರವಿಡಲಾಗಿದೆ. ದೇಶದ ಎರಡೂವರೆ ಲಕ್ಷ ಗ್ರಾಮ ಪಂಚಾಯತ್‍ಗಳಲ್ಲಿ ಬ್ರಾಡ್ ಬಾಂಡ್ ಕನೆಕ್ಟಿವಿಟಿ ತಲಪಿಸಲು ಖಾಸಗಿ ಕಂಪೆನಿಗಳನ್ನು ಒಳಪಡಿಸುವ ತೀರ್ಮಾನದ ಬೆನ್ನಿಗೇ ವಾರ್ಷಿಕ ಗುತ್ತೆಯನ್ನು ಬಿಎಸ್ಸೆನ್ನೆಲ್ ಗೆ ನೀಡಬೇಕಾಗಿಲ್ಲ ಎಂದು ಕೇಂದ್ರ ಸರಕಾರ ತೀರ್ಮಾನಿಸಿದೆ. ಇದರೊಂದಿಗೆ 400 ಕೋಟಿ ರೂಪಾಯಿಯ ಆದಾಯವನ್ನು ಬಿಎಸ್ಸೆನ್ನೆಲ್ ಕಳಕೊಂಡಿದೆ.

ಭಾರತ್ ಬ್ರಾಡ್ ಬ್ಯಾಂಡ್ ನೆಟ್‍ವರ್ಕ್ ಲಿಮಿಟೆಡ್ ಎನ್ನುವ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಾಗಿ ಪಂಚಾಯತ್‍ಗಳಿಗೆ ಬ್ರಾಡ್‍ಬಾಂಡ್ ತಲುಪಿಸುವ ಕೆಲಸವನ್ನು ಬಿಎಸ್ಸೆನ್ನೆಲ್ ವಹಿಸಿಕೊಂಡಿತ್ತು. ಆದ್ಯಘಟ್ಟ ಪೂರ್ತಿಯಾದ ಬಳಿಕ ಕಾರ್ಯಕ್ಷಮತೆ ಕಡಿಮೆಯಿದೆ ಎಂದು ಹೇಳಿ ಘಟ್ಟದಲ್ಲಿ ಖಾಸಗಿ ಕಂಪೆನಿಗಳನ್ನು ಸೇರಿಸಿಕೊಳ್ಳಲು ತೀರ್ಮಾನಿಸಲಾಯಿತು. ಬಿಎಸ್ಸೆನ್ನೆಲನ್ನು ದೂರ ಇಡುತ್ತಿರುವುದು ರಿಲಯನ್ಸ್ ಜಿಯೊಗಾಗಿ ಎನ್ನುವ ಆಕ್ಷೇಪ ಕೇಳಿ ಬಂದಿದೆ. ಬಿಎಸ್ಸೆನ್ನೆಲ್‍ಗೆ ನಷ್ಟವಾದ ಒಪ್ಪಂದ ಕೇಂದ್ರ-ಐಟಿ ಸಚಿವಾಲಯದ ನಿಯಂತ್ರಣದಲ್ಲಿ ಸಿಎಸ್ಸಿ ಇ ಗವರ್ನೆಸ್ ಸರ್ವಿಸ್ ಎನ್ನುವ ಕಂಪೆನಿಗೆ ನೀಡಲಾಗುತ್ತಿದೆ. ಇವರಿಂದ ಖಾಸಗಿ ಕಂಪೆನಿಗಳಿಗೆ ಉಪಕರಾರ ಸಿಗುತ್ತದೆ ಎನ್ನಲಾಗಿದೆ. ಈ ನಡುವೆ, ರಿಲಯನ್ಸ್ ಮತ್ತು ಜಿಯೊ ಏರ್‍ಟೆಲ್ ವಡಾಫೋನ್-ಐಡಿ ಎದುರಿಸುತ್ತಿರುವ ಟ್ಯಾರಿಫ್ ಸವಾಲುಗಳನ್ನು ಎದುರಿಸಿ ನಿಲ್ಲಲು ಬಿಎಸ್ಸೆನ್ನೆಲ್ ಕಷ್ಟಪಡುತ್ತಿದೆ. ಕೊಂಬೊ ಪ್ಲಾನ್‍ಗಳಲ್ಲಿ ಸಮಯ ಮಿತಿಯಿಲ್ಲದೆ ನೀಡುವ ಉಚಿತ ಫೋನ್ ಕೊಡುಗೆ ಹಿಂಪಡೆದು ಬದಲಾಗಿ 250 ನಿಮಿಷ ಉಚಿತ ಕಾಲ್‍ಗೆ ಬಿಎಸ್ಸೆನ್ನೆಲ್ ಸೀಮಿತಗೊಳಿಸಲಿದೆ. ಅದರ ನಂತರ ಕಾಲ್ ಚಾರ್ಜ್ ಮಾಡಲಾಗುವುದು. ಇದು ಬಳಕೆದಾರರಿಗೆ ನಷ್ಟವಾದರೂ ಇದಕ್ಕಿಂತ ಮುಖ್ಯ ತನ್ನ ವರಮಾನವನ್ನು ಹೆಚ್ಚಿಸುವುದು ಎಂದು ಬಿಎಸ್ಸೆನ್ನೆಲ್ ಚಿಂತಿಸುತ್ತಿದೆ.

ಜುಲೈಯಲ್ಲಿ ತಡವಾದ ಸಂಬಳವನ್ನು ಬಿಎಸ್ಸೆನ್ನೆಲ್ ಸೋಮವಾರ ವಿತರಿಸಿದೆ. ಆದರೆ ಜಿಪಿಎಫ್, ಬ್ಯಾಂಕ್ ಸಾಲ ಮರುಪಾವತಿ ಎಂಬಿವುಗಳಿಗೆ ಸಂಬಳದಿಂದ ಕಡಿತಗೊಳಿಸಲಾಗುವ ಮೊತ್ತವನ್ನು ನಾಲ್ಕನೆ ತಿಂಗಳೂ ಆಯಾ ಸಂಸ್ಥೆಗೆ ಅದು ಪಾವತಿಸಿಲ್ಲ. ಹೊಸ ಖಾಸಗಿ ಬ್ಯಾಂಕ್‍ಗಳಿಂದ ಸಾಲ ಪಡೆದವರಿಗೆ ನೋಟಿಸು ಸಿಗಲು ಆರಂಭವಾಗಿದೆ.