ಹೊಸದಿಲ್ಲಿ, ಆ. 7: ದಿಲ್ಲಿಯ ತೀಸ್ ಹಝಾರಿ ಕೋರ್ಟಿನಲ್ಲಿ ಉನ್ನಾವ ಅತ್ಯಾಚಾರ ಮೊಕದ್ದಮೆಯ ವಿಚಾರಣೆ ಆರಂಭವಾಗಿದ್ದು ಸಿಬಿಐ ಕೋರ್ಟಿನಲ್ಲಿ ಅತ್ಯಾಚಾರ ಸಂತ್ರಸ್ತೆಯ ಆರೋಪ ಸರಿಯಾಗಿದೆ ಎಂದು ತಿಳಿಸಿದೆ. ಕುಲ್ದೀಪ್ ಸಿಂಗ್ ಸೇಂಗರ್ ಮತ್ತು ಆತನ ಸಂಗಡಿಗರು ಬಾಲಕಿಯ ಅತ್ಯಾಚಾರ ಮಾಡಿದ್ದರು.
ಇದಕ್ಕಿಂತ ಮೊದಲು ಜಿಲ್ಲಾ ನ್ಯಾಯಾಧೀಶ ದಿನೇಶ್ ಶರ್ಮದ ಆದೇಶದಂತೆ ಸೇಂಗರ್ ಮತ್ತು ಸಹ ಆರೋಪಿ ಶಶಿ ಸಿಂಗ್ರನ್ನು ಸೋಮವಾರ ಸತ್ರ ನ್ಯಾಯಾಧೀಶ ಧರ್ಮೇಶ್ ಶರ್ಮರ ಮುಂದೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯ ಇಬ್ಬರನ್ನು ತಿಹಾರ್ ಜೈಲಿನಲ್ಲಿರಿಸುವಂತೆ ಆದೇಶಿಸಿದೆ. ಕೆಲವು ದಿನಗಳ ಹಿಂದೆ ರಾಯ್ಬರೇಲಿಯಲ್ಲಿ ಕಾರು ಮತ್ತು ಟ್ರಕ್ ನಡುವಿನ ಅಪಘಾತದಲ್ಲಿ ಅತ್ಯಾಚಾರ ಪೀಡಿತೆ ಮತ್ತು ಅವರ ವಕೀಲರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಸೇಂಗರ್ ಮತ್ತು ಇತರ ಒಂಬತ್ತು ಮಂದಿಯ ವಿರುದ್ಧ ಸಿಬಿಐ ಕೊಲೆ ಆರೋಪ ಹೊರಿಸಿ ಪ್ರಕರಣ ದಾಖಲಿಸಿಕೊಂಡಿದೆ. ಅಪಘಾತದಲ್ಲಿ ಬಾಲಕಿಯ ಸಂಬಂಧಿಕರು ಮೃತಪಟ್ಟಿದ್ದರು. ಇದನ್ನು ಬಾಲಕಿಯ ಕುಟುಂಬ ಅಪಘಾತ ಗೂಢಾಲೋಚನೆಯ ಮೂಲಕ ನಡೆಸಲಾಗಿದೆ ಎಂದು ಆರೋಪಿಸಿತ್ತು.
ನಂತರ ನ್ಯಾಯಾಲಯ ಪ್ರಕರಣದಲ್ಲಿ ದಿನಾಲೂ ವಿಚಾರಣೆ ನಡೆಸಿ 45 ದಿನಗಳೊಳಗೆ ಪೂರ್ತಿ ಮಾಡುವಂತೆ ಸೂಚಿಸಿದೆ. ಮುಖ್ಯ ಪ್ರಕರಣದ ಜೊತೆಗೆ ಇತರ ಮೂರು ಪ್ರಕರಣಗಳನ್ನು ಕೂಡ ದಿಲ್ಲಿಗೆ ವರ್ಗಾಯಿಸಲಾಗಿದೆ.
ಪೀಡಿತೆ ಬಾಲಕಿಯ ತಂದೆಯ ವಿರುದ್ಧ ಶಸ್ತ್ರಾಸ್ತ ಅನ್ವಯ ದಾಖಲುಗೊಂಡಿದ್ದ ಪ್ರಕರಣ, ಕಸ್ಟಡಿಯಲ್ಲಿ ಅವರ ಸಾವು ಮತ್ತು ಬಾಲಕಿಯ ಸಾಮೂಹಿಕ ಅತ್ಯಾಚಾರ ಇವು ಇತರ ಮೂರು ಪ್ರಕರಣಗಳಾಗಿವೆ.












