ಪೋಷಕರೇ ಎಚ್ಚರ: ಆಟವಾಡುತ್ತಾ ನೀರು ತುಂಬಿರುವ ಬಕೆಟ್ ಗೆ ಬಿದ್ದ ಮಗು

0
928

ಮಂಗಳೂರು, ಆ. 8: ಮಕ್ಕಳ ನೀರಿನಾಟದಲ್ಲಿ ಅಪಾಯವೂ ಇದೆ, ಖುಷಿಯೂ ಇದೆ. ಮಳೆಗಾಲದ ಈ ಸಂದರ್ಭದಲ್ಲಂತೂ ಮಕ್ಕಳ ನೀರಾಟದ ಆಬಗ್ಗೆ ಸಾಕಷ್ಟು ಎಚ್ಚರದ ಅಗತ್ಯವಿದೆ. ಇದೀಗ ಬಂದಿರುವ ದುರಂತ ಘಟನೆಯೊಂದು ಈ ಬಗ್ಗೆ ಎಚ್ಚರ ವಹಿಸುವಂತೆ ಎಚ್ಚರಿಕೆ ನೀಡುತ್ತಿದೆ. ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಆಘಾತಕಾರಿ ಘಟನೆ ದ ಕ ಜಿಲ್ಲೆಯ ಮಂಗಳೂರಿನ ಕುಳಾಯಿಯಲ್ಲಿ ನಡೆದಿದೆ. ತನ್ನ ಅಕ್ಕನ ಆದಿತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಕೆಟ್ ನಲ್ಲಿ ತುಂಬಿಸಿಟ್ಟಿದ್ದ ನೀರಿಗೆ ಬಿದ್ದ ಮಗು ಮೃತಪಟ್ಟಿದೆ ಎಂದು ವರದಿಯಾಗಿದೆ. ಹದಿನೆಂಟು ತಿಂಗಳ ಮಗು ಸಿದ್ಧಾರ್ಥನನ್ನು ಶಂಕರಪ್ಪ ಈ ಮೂಲಕ ಕಳಕೊಂಡಿದ್ದಾರೆ.

ಶಂಕರಪ್ಪ ಅವರ ಕುಳಾಯಿಯಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.