ಬೆಂಗಳೂರು, ಆ. 8: ರಾಜ್ಯದಾದ್ಯಂತ ಪ್ರವಾಹ ಪರಿಸ್ಥಿತಿ ನೆಲೆಸಿದ್ದು ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಚಿಕ್ಕಮಗಳೂರಿನಲ್ಲಿ ಗಾಳಿಮಳೆ ಆಗಿದ್ದು ತಗ್ಗಿನ ಪ್ರದೇಶಗಳು ನೀರಿನಿಂದ ತುಂಬಿಕೊಂಡಿದೆ. ಇಲ್ಲಿ ಕಳೆದ ಐದು ದಿನಗಳಿಂದ ಮಳೆಯ ಆರ್ಭಟ ಹೆಚ್ಚಿದೆ. ಜನರು ಆತಂಕ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ವರದಿಯಾಗಿದೆ. ಶೃಂಗೇರಿ , ಬಾಳೆ ಹೊನ್ನೂರು,ಕೊಪ್ಪದಲ್ಲಿಯೂ ಗಾಳಿಯೊಳಗೊಂಡ ಜಡಿ ಮಳೆ ಸುರಿಯುತ್ತಿದೆ ಎಂದು ತಿಳಿದು ಬಂದಿದೆ. ಕೊಡಗಿನಲ್ಲಿ ಧಾರಾಕಾರ ಮಳೆ ಸುರಿದ್ದಿದ್ದು ಆತಂಕದ ಪರಿಸ್ಥಿತಿ ಸೃಷ್ಟಿಯಾಗಿದೆ. ಜಾನುವಾರುಗಳು, ಕೃಷಿನಾಶ ಸಂಭವಿಸಿದೆ. ಹಾಸನ ಸಕಲೇಶ್ವರದಲ್ಲಿ ಪ್ರವಾಹ ಪರಿಸ್ಥಿತಿ ಇದೆ.
ಗದಗ ಜಿಲ್ಲೆಯ ನರಗುಂದ ಕೊಣ್ಣೂರು ಗ್ರಾಮದಲ್ಲಿ ಪ್ರವಾಹ ಬಂದಿದೆ. ಉತ್ತರ ಕನ್ನಡದಲ್ಲಿ ಪ್ರವಾಹದ ಅಬ್ಬರ ತೀವ್ರವಾಗಿದೆ. ಕಾರಾವಾರ ಜೊಯಿಡೊದಲ್ಲಿ ಹೆದ್ದಾರಿ ಬಂದ್ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ ನೀರಿನಲ್ಲಿ ಬಾಲಕಿಯೊಬ್ಬಳು ಕೊಚ್ಚಿಹೋಗಿದ್ದಾಳೆ. ಇಲ್ಲಿಯವರೆಗೂ ಮಳೆಯಿಂದಾಗಿ ಹನ್ನೊಂದು ಮಂದಿ ಮೃತಪಟ್ಟಿದ್ದು ಅಪಾರ ಆಸ್ತಿಪಾಸ್ತಿ ಹಾನಿಯಾಗಿದೆ. ರಾಯಚೂರಿನ ಲಕ್ಷ್ಮಿ ನರಸಿಂಹ ದೇವಸ್ಥಾನ ನದಿಯು ನೀರಿನಿಂದಾವೃತವಾಗಿದೆ.
ರಾಜ್ಯದ ಕೆಲವೆಡೆ ಪ್ರವಾಹ ಭೀತಿ ಕೂಡ ಎದುರಾಗಿದೆ. ಈಗಾಗಲೇ ಹಲವಾರು ಮಂದಿ ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ದೇಣಿಗೆ ನೀಡಿರುವುದಾಗಿ ವರದಿಯಾಗಿದೆ. ದಾನಿಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ ಸಹಾಯಕ್ಕೆ ಮನವಿ ಮಾಡಿದ್ದಾರೆ. ಐದು ಸಾವಿರ ಕೋಟಿ ನೆರವಿನ ಅಗತ್ಯ ಇದೆ ಎಂದು ಅವರು ಹೇಳಿದ್ದಾರೆ. ಇನ್ಫೋಸಿಸ್ನ ಸುಧಾಮೂರ್ತಿ ಹತ್ತುಕೋಟಿ ರೂಪಾಯಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು. ಇದೇ ವೇಳೆ ರಾಜ್ಯಸರಕಾರದಿಂದ ವರದಿ ಬಂದರೆ ಸೂಕ್ತ ನೆರವು ನೀಡಲಾಗುವುದು ಎಂದು ಸಚಿವ ಪ್ರಹ್ಲಾದ ಜೋಷಿ ತಿಳಿಸಿದ್ದಾರೆ.












