1949ರಲ್ಲಿ ಬಾಬರಿ ಮಸೀದಿಯೊಳಗೆ ರಾಮನ ವಿಗ್ರಹ ತಂದಿಟ್ಟಿರುವುದು ತಪ್ಪಲ್ಲ, ಅದನ್ನು ಮಸೀದಿಯೆಂದು ಪರಿಗಣಿಸುವಾಗ ಮಾತ್ರ ತಪ್ಪಾಗುತ್ತದೆ- ಸುಪ್ರೀಂ ನಲ್ಲಿ ವಾದ

0
886

ಹೊಸದಿಲ್ಲಿ, ಆ. 8: ಬಾಬರಿ ಮಸೀದಿ ಇದ್ದ ಸ್ಥಳ ತಮ್ಮದೆನ್ನುವ ದಾಖಲೆಗಳನ್ನು ಸಲ್ಲಿಸಲು ನಿರ್ಮೊಹಿ ಅಖಾಡಕ್ಕೆ ಸುಪ್ರೀಂಕೋರ್ಟಿನ ಐವರು ಸದಸ್ಯರ ಪೀಠ ಸೂಚಿಸಿದೆ. ಬಾಬರಿ ಮಸೀದಿ ಜಮೀನು ಪ್ರಕರಣದಲ್ಲಿ ಅಂತಿಮವಾದದ ಎರಡನೆ ದಿವಸ ಚೀಫ್ ಜಸ್ಟಿಸ್ ರಂಜನ್ ಗೊಗೊಯ್ ಅಧ್ಯಕ್ಷತೆಯ ಪೀಠ ದಾಖಲೆ ಸಲ್ಲಿಸುವಂತೆ ಅಣತಿಯಿತ್ತಿತು. ಜಮೀನು ತನ್ನದೆಂದು ವಾದಿಸಿದರೆ ಸಾಲದು, ಅದು ನಿಮ್ಮದೆಂದು ಸಾಬೀತುಪಡಿಸುವ ಹೊಣೆಯೂ ನಿಮ್ಮದಾಗಿದೆ ಎಂದು ಚೀಫ್ ಜಸ್ಟಿಸ್ ವಕೀಲ ಸುಶೀಲ್ ಜೈನ್‍ರಿಗೆ ಹೇಳಿದರು. ತಮ್ಮ ವಶದಲ್ಲಿತ್ತು ಎನ್ನುವ ರೆವೆನ್ಯೂ ದಾಖಲೆಗಳಿದ್ದರೆ ಅದು ಅಖಾಡಕ್ಕೆ ಗಟ್ಟಿಯಾದ ಪುರಾವೆಯಾಗಲಿದೆ ಎಂದು ಚೀಫ್ ಜಸ್ಟಿಸ್ ಹೇಳಿದರು. ನಿಮ್ಮಲ್ಲಿ ಏನು ದಾಖಲೆಗಳಿವೆ ಎಂದು ಜಸ್ಟಿಸ್ ಅಶೋಕ್ ಭೂಷಣ್ ಕೇಳಿದಾಗ- ನಿರ್ಮೊಹಿ ಅಖಾಡದ ಕೇಂದ್ರದಲ್ಲಿ 1982ರಲ್ಲಿ ಕಳ್ಳತನ ನಡೆದಿತ್ತು ಎಂದು ಉತ್ತರಿಸಿದರು. ದಾಖಲೆಗಳ ಪುರಾವೆಯ ಮೂಲಕ ಮುಂದಿನ ಎರಡು ಗಂಟೆ ವಾದ ಮಾಡಬಹುದು. ಇಲ್ಲದಿದ್ದರೆ ಮುಂದಿನ ಪ್ರಕರಣ ಎತ್ತಿಕೊಳ್ಳಲಾಗುವುದು ಎಂದು ಅಖಾಡದ ವಕೀಲರಿಗೆ ಸುಪ್ರೀಂ ಕೋರ್ಟು ಪೀಠ ತಿಳಿಸಿತು. ನಂತರ ಮಧ್ಯಾಹ್ನದ ಬಳಿಕ ನಿಮ್ಮ ಬಳಿಯಿರುವ ದಾಖಲೆಗಳನ್ನು ಸಲ್ಲಿಸಿ ಎಂದು ಚೀಫ್ ಜಸ್ಟಿಸ್ ಹೇಳಿದರೂ ವಕೀಲರಿಂದ ಅದು ಆಗಿಲ್ಲ.

ಸರಕಾರದ ವಶದಲ್ಲಿರುವ ಜಮೀನಿಗೆ ಹೇಗೆ ರೆವೆನ್ಯು ದಾಖಲೆ ಇರಲು ಸಾಧ್ಯ ಎಂದು ವಕೀಲರು ಹೇಳಿದರು. ಈ ಜಮೀನಿಗೆ ತೆರಿಗೆ ಕೊಡುತ್ತಿರಬಹುದು. ತೆರಿಗೆಯನ್ನು ಯಾರು ಪಾವತಿಸುತ್ತಿದ್ದರು ಎಂದು ಜಸ್ಟಿಸ್ ಬೊಬ್ಡೆ ಕೇಳಿದರು. ಅದನ್ನು ನಾವು ಕೆಳಕೋರ್ಟಿನಲ್ಲಿ ತೋರಿಸಿದ್ದೇವೆ ಎಂದು ಜೈನ್ ಹೇಳಿದರು. ಹಾಗೆ ತೋರಿಸಿದ್ದನ್ನು ಅಧಿಕೃತವಾಗಿ ಹೋಲಿಸಿ ನೋಡಿ ಕಾನೂನಾತ್ಮಕ ಸರಿಯಾಗಿದೆ ಎಂದು ಸಾಬೀತಾಗಿತ್ತೆ ಎಂದು ಜಸ್ಟಿಸ್ ಅಬ್ದುಲ್ ನಸೀರ್ ಕೇಳಿದರು. ತಾನು ಸುಪ್ರೀಂಕೋರ್ಟಿನ ಕೇಸಿಗೆಂಬಂತೆ ಬಂದಿದ್ದೇನೆ. ಕೆಳಕೋರ್ಟಿನ ಮೊದಲ ಅಪೀಲುಗಳಿಗೆ ಬಂದಂತೆ ಅಲ್ಲ ಎಂದು ಜೈನ್ ಹೇಳಿದರು.

ನಂತರ ಪ್ರಕರಣದಲ್ಲಿ ಕೆಳಕೋರ್ಟು ಕಕ್ಷಿಯಾಗಿ ಮಾಡಿದ ರಾಮನ ವಿಗ್ರಹಕ್ಕಾಗಿ ಹಿರಿಯ ಸುಪ್ರೀಂಕೋರ್ಟು ವಕೀಲ ಪರಾಶರನ್ ವಾದ ಆರಂಭಿಸಿದರು. ಯೇಶು, ಪ್ರವಾದಿಯಂತೆ ಜಗತ್ತಿನಲ್ಲಿ ಯಾವುದಾದರೂ ಧರ್ಮವಿಭಾಗದ ಆಧ್ಯಾತ್ಮಿಕ ಆಚಾರ್ಯರ ಜನ್ಮಸ್ಥಳಕ್ಕೆ ಸಂಬಂಧಿಸಿ ಕೋರ್ಟು ಕೇಸು ಆಗಿದೆಯೇ ಎಂದು ಪರಾಶರನ್‍ರೊಡನೆ ಸುಪ್ರೀಂಕೋರ್ಟು ಕೇಳೀತು. ಬಾಬರಿ ಮಸೀದಿಯಲ್ಲಿ 1949ರಲ್ಲಿ ರಾಮ ಮೂರ್ತಿಯನ್ನು ತಂದಿಡಲಾಗಿದ್ದು ಆ ತಪ್ಪು ಮುಂದುವರಿದೆ ಎಂದು ಸುನ್ನಿ ವಕ್ಫ್ ಬೋರ್ಡಿನ ವಾದವನ್ನು ಪರಾಶರನ್ ಬೆಟ್ಟುಮಾಡಿದರು.

ಆದರೆ, ಮಸೀದಿಯೆಂದು ಪರಿಗಣಿಸಿದಾಗ ಮಾತ್ರ ಅದು ತಪ್ಪಾಗುತ್ತದೆ. ಮಂದಿರ ಎಂದು ಪರಿಗಣಿಸುವುದಾದರೆ ಅಲ್ಲಿ ವಿಗ್ರಹ ತಂದಿಟ್ಟುದು ತಪ್ಪಲ್ಲ ಎಂದು ಪರಾಶರನ್ ವಾದಿಸಿದರು. ಇಂದು ಸುನ್ನಿವಕ್ಫ್ ಬೋರ್ಡಿನ ವಕೀಲ ರಾಜೀವ್ ಧವನ್ ವಾದ ಮಂಡಿಸಬೇಕಾಗಿದೆ.